
ಬೆಂಗಳೂರು(ಆ.16) ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕಡಿತ ಇತ್ತೀಚಿನ ದಿನಗಳಲ್ಲಿ ಹೆಚ್ಚು. ಅದರಲ್ಲೂ ಸ್ಟಾರ್ಟ್ಅಪ್ ಕಂಪನಿಗಳು ಈ ರೀತಿಯ ನಿರ್ಧಾರ ಹೆಚ್ಚಾಗಿ ಪ್ರಕಟಿಸುತ್ತವೆ. ಹೀಗೆ ಬೆಂಗಳೂರು ಸಾರ್ಥಿ AI ಸ್ಟಾರ್ಟ್ಅಪ್ ಕಂಪನಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಹೂಡಿಕೆದಾರರ ಒತ್ತಡದ ಮೇರೆಗೆ ಕಂಪನಿ ಸಿಇಒ ಬಾರಿ ಉದ್ಯೋಗ ಕಡಿತ ಮಾಡಿದ್ದರು. ಹೊಸದಾಗಿ ಹೂಡಿಕೆದಾರರ ಆಕರ್ಷಿಸಲು ಸಜ್ಜಾಗುತ್ತಿದ್ದಂತೆ ಸಿಇಒಗೆ ಆಘಾತ ಎದುರಾಗಿದೆ. ಉದ್ಯೋಗ ಕಡಿತದಿಂದ ಕೆಲಸ ಬಿಡುವಾಗ ಮಾಜಿ ಉದ್ಯೋಗಿಯೊಬ್ಬ ಸಿಇಒ ಪಾಸ್‌ಪೋರ್ಸ್, ಅಮೆರಿಕ ವೀಸಾ ಕದ್ದೊಯ್ದಿದ್ದಾನೆ. ಇದೀಗ ತಕ್ಷಣಕ್ಕೆ ಹೂಡಿಕೆದಾರರ ಆಕರ್ಷಿಲು ಅಮೆರಿಕ ತೆರಳಲು ಸಾಧ್ಯವಾಗದೆ ಕಂಪನಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಸಾರ್ಥಿ ಎಐ ಸಂಸ್ಥಾಪಕ ಹಾಗೂ ಸಿಇಒ ವಿಶ್ವನಾಥ್ ಝಾ ಈ ನೋವನ್ನು ತೋಡಿಕೊಂಡಿದ್ದಾರೆ. ಸಾರ್ಥಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಂಪನಿ ಸಿಇಒ ಝಾ, ಕಂಪನಿಯನ್ನು ಲಾಭದಾಯಕ ಮಾಡಲು ಹೂಡಿಕೆದಾರರ ಸತತ ಸಭೆಗಳ ಬಳಿಕ ಉದ್ಯೋಗ ಕಡಿತ ನಿರ್ಧಾರ ಘೋಷಿಸಿದ್ದಾರೆ. ಈ ಪೈಕಿ ಕಂಪನಿ ಹಲವು ಉದ್ಯೋಗಿಗಳನ್ನು ಪರ್ಫಾಮೆನ್ಸ್ ಆಧಾರದಲ್ಲಿ ಕೆಲಸದಿಂದ ತೆಗೆದು ಹಾಕಿತ್ತು. ಈ ವೇಳೆ ಹಲವು ಉದ್ಯೋಗಿಗಳು ಕೆಲಸದಿಂದ ತೆಗೆದು ಹಾಕದಂತೆ ಮನವಿ ಮಾಡಿದ್ದರು.
ರಕ್ಷಾ ಬಂಧನ ರಜೆಗೆ ಸ್ಯಾಲರಿ ಕಟ್ ನಿರ್ಧಾರ ವಿರೋಧಿಸಿದ ಹೆಚ್ಆರ್ ಅಮಾನತು, ಕಂಪನಿ ಹೇಳಿದ್ದೇನು?
ಹೀಗೆ ಕೆಲಸದಿಂದ ತೆಗೆದ ಉದ್ಯೋಗಿಗಳ ಕೆಲಸ ಬಿಡುವ ಕೊನೆಯ ದಿನ ಸಿಇಒ ಪಾಸ್‌ಪೋರ್ಟ್ ಹಾಗೂ ಅಮೆರಿಕ ವೀಸಾವನ್ನೇ ಕದ್ದೊಯ್ದಿದ್ದಾರೆ ಎಂದು ಸ್ವತ ವಿಶ್ವನಾಥ್ ಝಾ ಹೇಳಿದ್ದಾರೆ. ಕೆಲಸ ಬಿಡುವಾಗ ಉದ್ಯೋಗಿಯೊಬ್ಬ ನನ್ನ ಮಹತ್ವದ ದಾಖಲೆ ಕದ್ದೊಯ್ದಿದ್ದಾರೆ. ಇದರಿಂದ ನನಗೆ ಅಮೆರಿಕ ತೆರಳಿ ಹೂಡಿಕೆದಾರರ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಬೇರೆ ಪಾಸ್‌ಪೋರ್ಟ್ ಹಾಗೂ ವೀಸಾ ಪಡೆಯಲು ಕನಿಷ್ಠ ಪ್ರಕ್ರಿಯೆ ಮುಗಿಸಬೇಕು. ಇದು ಕನಿಷ್ಠ 4 ರಿಂದ 6 ತಿಂಗಳು ಸಮಯ ತೆಗೆದುಕೊಳ್ಳಲಿದೆ.
ಕೆಲಸದಿಂದ ತೆಗೆದು ಹಾಕಿದ ಎಲ್ಲಾ ಉದ್ಯೋಗಿಗಳಿ ವೇತನ ನೀಡಲಾಗಿದೆ. ಆದರೂ ನನಗೆ ಈ ರೀತಿ ಮಾಡಿದ್ದಾರೆ ಎಂದು ಸಿಇಒ ಆರೋಪಿಸಿದ್ದಾರೆ. ಆದರೆ ಮಾಜಿ ಉದ್ಯೋಗಿಗಳು ಹೇಳುವುದೇ ಬೇರೆ. ಕಳೆದೊಂದು ವರ್ಷದಿಂದ ನಮಗೆ ವೇತನ ನೀಡಿಲ್ಲ. ಕಳೆದೆರಡು ವರ್ಷದಿಂದ ಟಿಡಿಎಸ್ ಕಟ್ಟಿಲ್ಲ. ವೇತನ ಕೇಳಿದರೆ ಕಂಪನಿ ನಷ್ಟದಲ್ಲಿದೆ ಸೇರಿದಂತೆ ಹಲವು ಕಾರಣಗಳನ್ನು ನೀಡುತ್ತಾರೆ. ಕೊನೆಗೆ ಯಾವುದೇ ಉತ್ತರ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ಹೊಸ ಎಂಜಿನೀಯರ್‌ಗೆ 20,000 ಸಂಬಳವೇ ಹೆಚ್ಚು, ಕಂಪನಿ ನಿರ್ಧಾರ ಸಮರ್ಥಿಸಿದ ಬೆಂಗಳೂರು ಉದ್ಯಮಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.