40 ರೂಪಾಯಿ ಸ್ಟಾಕ್‌ನಿಂದ ಬದಲಾಗಿತ್ತು Rakesh Jhunjhunwala ಇಡೀ ಬದುಕು!

Published : Aug 14, 2024, 10:11 PM IST
40 ರೂಪಾಯಿ ಸ್ಟಾಕ್‌ನಿಂದ ಬದಲಾಗಿತ್ತು Rakesh Jhunjhunwala ಇಡೀ ಬದುಕು!

ಸಾರಾಂಶ

Rakesh Jhunjhunwala Death Anniversary: ​​ರಾಕೇಶ್ ಜುನ್‌ಜುನ್‌ವಾಲಾ ಅವರ ಸ್ನೇಹಿತರಾಗಿದ್ದ ರಮೇಶ್ ದಮಾನಿ, ಜುಂಜುನ್‌ವಾಲಾ ಅವರು ತಮ್ಮ ಜೀವನದ ಹೆಚ್ಚಿನ ಸಮಯದಲ್ಲಿ ಹೂಡಿಕೆ ಹೇಗೆ ಮಾಡಿದ್ದರು ಅನ್ನೋದನ್ನ ತಿಳಿಸಿದ್ದಾರೆ.

ಬೆಂಗಳೂರು (ಆ.14): ಪ್ರಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಜಗತ್ತನ್ನು ತೊರೆದು ಆಗಸ್ಟ್‌ 14ಕ್ಕೆ ಎರಡು ವರ್ಷಗಳಾಗಿದೆ. ಆದರೆ, ಅವರ ಹೂಡಿಕೆಯ ವಿಧಾನವನ್ನು ಹೊಸಬರಿಂದ ಹಳಬರವರೆಗೆ ಎಲ್ಲಾ ಹೂಡಿಕೆದಾರರು ಇನ್ನೂ ಫಾಲೋ ಮಾಡುತ್ತಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ರಾಕೇಶ್‌ ಜುಂಜುನ್ವಾಲಾ ತಮ್ಮ ಜೀವನದ ಬಹುದೊಡ್ಡ ಲಾಭವನ್ನು ಪಡೆದುಕೊಂಡಿದ್ದು ಟೈಟಾನ್‌ ಕಂಪನಿಯ ಷೇರುಗಳಿಂದ. ಇಂದು ಟೈಟಾನ್‌ ಕಂಪನಿಯ ಷೇರುಗಳು ಕುಸಿದಿದ್ದರೂ, ರಾಕೇಶ್‌ ಜುಂಜುನ್ವಾಲಾ ಪಾಲಿಗೆ ಮಾತ್ರ ಈ ಷೇರು ಚಿನ್ನದ ಮೊಟ್ಟೆ ಇರುವ ಕೋಳಿಯಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ, ತಮ್ಮ ಜೀವಮಾನದಲ್ಲಿ ಅವರು ಈ ಕಂಪನಿಯ ಷೇರುಗಳಿಂದ 80 ಪಟ್ಟು ಅಧಿಕ ಲಾಭ ಪಡೆದುಕೊಂಡಿದ್ದರು. ರಾಕೇಶ್‌ ಜುಂಜುನ್ವಾಲಾ ಅವರ ಸ್ನೇಹಿತ ರಮೇಶ್‌ ಧಮಾನಿ ಇತ್ತೀಚೆಗೆ ಹಿರಿಯ ಹೂಡಿಕೆದಾರ ಟೈಟಾನ್‌ ಕಂಪನಿಯ ಷೇರು ಖರೀದಿ ಮಾಡಿದ್ದು ಹೇಗೆ? ಬಳಿಕ ಅದು ಹೆಚ್ಚು ಆದಾಯವನ್ನು ನೀಡುವ ಕಂಪನಿಯಾಗಿ ಹೇಗೆ ಬದಲಾಯುತು ಅನ್ನೋದನ್ನೂ ತಿಳಿಸಿದ್ದಾರೆ.

2003 ರಲ್ಲಿ ಬ್ರೋಕರ್ ಒಬ್ಬ ರಾಕೇಶ್‌ ಜುಂಜುನ್ವಾಲಾಗೆ ಕರೆ ಮಾಡಿದ್ದ. ಇನ್ನೊಬ್ಬ ಹೂಡಿಕೆದಾರರು ಟೈಟಾನ್ ಷೇರುಗಳನ್ನು ಮಾರಾಟ ಮಾಡಲು ಬಯಸುತ್ತಿದ್ದಾರೆ. ಅವರ ಬಳಿ 10 ಲಕ್ಷ ಷೇರುಗಳಿವೆ ಎಂದು ಹೇಳಿದ್ದರು. 10 ಲಕ್ಷ ಷೇರುಗಳನ್ನು ಖರೀದಿಸಿದರೆ ಅದರ ಬೆಲೆ 40 ರೂಪಾಯಿ ಆಗಿರಲಿದೆ. 30 ಲಕ್ಷ ಷೇರುಗಳನ್ನು ಖರೀದಿಸಿದರೆ ಅದರ ಬೆಲೆ 38 ರೂಪಾಯಿ ಮತ್ತು 50 ಲಕ್ಷ ಷೇರುಗಳನ್ನು ಖರೀದಿಸಿದರೆ ಬೆಲೆ 36 ರೂಪಾಯಿ ಆಗಿರಲಿದೆ ಎಂದಿದ್ದರು.

ಈ ಹಂತದಲ್ಲಿ ರಾಕೇಶ್‌ ಜುಂಜುನ್ವಾಲಾಗೆ ಗೊತ್ತಾಗಿದ್ದು ಏನೆಂದರೆ, ಇಂದು ಟೈಟಾನ್‌ ಕಂಪನಿಯ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ ಆಗಿರಬಹುದು. ಕಂಪನಿಯ ಷೇರುಗಳ ಬೆಲೆ 40 ರೂಪಾಯಿ ಆಗಿರಬಹುದು. ಆದರೆ, ಮುಂದಿನ ದಿನದಲ್ಲಿ ಲಾಭ ತಂದುಕೊಡುವ ಕಂಪನಿ ಆಗಬಹುದು ಎಂದು ಅಂದಾಜು ಮಾಡಿದ್ದರು. ಆದರೆ, ದೊಡ್ಡ ಪ್ರಮಾಣದಲ್ಲಿ ಷೇರು ಖರೀದಿ ಮಾಡಲು ಹಣದ ಕೊರತೆ ಇತ್ತು. ಅದಕ್ಕಾಗಿ ಸಣ್ಣ ಲಾಟ್‌ನಲ್ಲಿ ಈ ಷೇರು ಖರೀದಿ ಮಾಡಿದ್ದರು. ಅದಾದ ಬಳಿಕ ಜುಂಜುನ್ವಾಲಾ ಕಂಪನಿಯನ್ನು ಫಾಲೋ ಮಾಡಲು ಆರಂಭಿಸಿದರು. ಅದರಂತೆ ಕೆಲವರು ವರ್ಷಗಳ ಕಾಲ ಟೈಟಾನ್‌ ಕಂಪನಿಯ ಷೇರುಗಳನ್ನು ಖರೀದಿ ಮಾಡುತ್ತಲೇ ಹೋದರು. ಒಂದು ಹಂತದಲ್ಲಿ ಅವರಲ್ಲಿದ್ದ ಷೇರಿನ ಪ್ರಮಾಣ ಯಾವ ಮಟ್ಟಕ್ಕೆ ಹೋಯಿತೆಂದರೆ, ಟೈಟಾನ್‌ ಕಂಪನಿಯಲ್ಲಿ ಅವರ ಪಾಲು ಶೇ. 5ರಷ್ಟಾಗಿತ್ತು.

ರಾಕೇಶ್‌ ಜುಂಜುನ್ವಾಲಾ ಸಾಕಷ್ಟು ಅಧ್ಯಯನ ಮಾಡಿ ಅಥವಾ ಆಂತರಿಕ ಮಾಹಿತಿಯ ನಂತರವೇ ಟೈಟಾನ್‌ ಷೇರು ಖರೀದಿ ಮಾಡಿದ್ದಾರೆ ಎಂದು ಜನರು ಭಾವಿಸುತ್ತಾರೆ. ಆದರೆ, ಅದು ನಿಜವಲ್ಲ ಎಂದು ದಮಾನಿ ಹೇಳಿದ್ದಾರೆ. ಬ್ರೋಕರ್‌ನ ಬಳಿ ಈ ಕಂಪನಿಯ ಬಹಳಷ್ಟು ಷೇರುಗಳಿದ್ದವು. ರಾಕೇಶ್‌ ಜುಂಜುನ್ವಾಲಾ ಬಳಿ ಆತ ಬಂದಿದ್ದ ಕಾರಣಕ್ಕಾಗಿಯೇ ಟೈಟಾನ್‌ ಷೇರು ಖರೀದಿ ಮಾಡಿದ್ದರು ಎಂದಿದ್ದಾರೆ.

ಷೇರು ಮಾರುಕಟ್ಟೆಯಿಂದ್ಲೇ ತಿಂಗಳಿಗೆ 650 ಕೋಟಿ ರೂ. ಲಾಭ ಮಾಡಿದ ಮಹಿಳೆ ಇವರೇ!

ಎಲ್ಲರಿಗೂ ತಿಳಿದ ಹಾಗೆ ರಾಕೇಶ್‌ ಜುಂಜುನ್ವಾಲಾ 1985ರಿಂದಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಷೇರು ಮಾರುಕಟ್ಟೆಗೆ ಇಳಿದಾಗ ಅವರಲ್ಲಿದ್ದ ಹಣ ಬರೀ 5 ಸಾವಿರ ರೂಪಾಯಿ. 2022ರ ಆಗಸ್ಟ್‌ 14ರಂದು ನಿಧನರಾಗುವ ವೇಳೆ ಅವರ ಆಸ್ತಿ 5.8 ಬಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು. ಷೇರು ಮಾರುಕಟ್ಟೆ ಕುರಿತ ಕಾರ್ಯಕ್ರಮವೊಂದರಲ್ಲಿ ಜುಂಜುನ್ವಾಲಾ ಹೂಡಿಕೆದಾರರಿಗೆ ಯಾರೂ ಮಾರುಕಟ್ಟೆ ರಾಜರಲ್ಲ, ಹಾಗೆಂದುಕೊಂಡವರು ಜೈಲಿಗೆ ಹೋಗಿದ್ದಾರೆ ಎಂದು ಹೇಳಿದ್ದರು.

ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

ಹವಾಮಾನ, ಸಾವು, ಮಾರುಕಟ್ಟೆ ಮತ್ತು ಮಹಿಳೆಯರ ಬಗ್ಗೆ ಯಾರೂ ಊಹಿಸಲು ಅಥವಾ ಮುನ್ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಷೇರು ಮಾರುಕಟ್ಟೆ ಕೂಡ ಹೀಗೆಯೇ, ಹೂಡಿಕೆದಾರರು ತಾಳ್ಮೆಯಿಂದ ಕೆಲಸ ಮಾಡುವುದು ಮುಖ್ಯ ಎಂದಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!