
ನವದೆಹಲಿ (ಆ.15): ಅಮೆರಿಕದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಕಾಗ್ನಿಜೆಂಟ್, ಇತ್ತೀಚೆಗೆ ಹೊಸ ಟೆಕ್ಕಿಗಳಿಗೆ ನೀಡಿದ ಉದ್ಯೋಗದ ಆಫರ್ ಮತ್ತು ಅದಕ್ಕೆ ನೀಡಿದ ವೇತನ ಪ್ರಮಾಣದ ಕಾರಣಕ್ಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಂಪನಿಯಲ್ಲಿ ಕೆಲ ಉದ್ಯೋಗಳಿಗೆ ಹೊಸ ಟೆಕ್ಕಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಂಪನಿ ವಾರ್ಷಿಕ 2.52 ಲಕ್ಷ ರು. ವೇತನ ನೀಡುವುದಾಗಿ ಹೇಳಿತ್ತು. ಅಂದರೆ ಮಾಸಿಕ ಕೇವಲ 21000 ರುಪಾಯಿ ಮಾತ್ರ. ಇದು ಐಟಿ ವಲಯದ 10 ವರ್ಷದ ಕನಿಷ್ಠ ಸಂಬಳ ಎಂದು ಹೇಳಲಾಗಿದೆ.
ಈ ಜಾಹೀರಾತು ಪ್ರಕಟವಾದ ಕೆಲ ಹೊತ್ತಿನಲ್ಲೇ ಅದು 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ಮಾತ್ರವಲ್ಲದೇ ನಾನಾ ರೀತಿಯ ಪ್ರತಿಕ್ರಿಯೆಗೂ ಕಾರಣವಾಗಿದೆ. ಅತ್ಯಂತ ಸ್ಪರ್ಧಾತ್ಮಕವಾದ ಟೆಕ್ ವಲಯದಲ್ಲಿ ಇಷ್ಟೊಂದು ಕಡಿಮೆ ವೇತನದ ಆಫರ್ ನೀಡಿದ್ದರ ಬಗ್ಗೆ ಟೆಕ್ಕಿಗಳು ಕಿಡಿಕಾರಿದ್ದಾರೆ.
ಲಕ್ನೋ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ನಿಗೂಢ ಕಣ್ಮರೆ, ಹುಡುಕಿ ಕೊಡುವಂತೆ ಪತ್ನಿ ಪೋಸ್ಟರ್
ವ್ಯಂಗ್ಯದ ಟೀಕೆ: ಈ ಬಗ್ಗೆ ವ್ಯಕ್ತಿಯೊಬ್ಬರು, ‘ಇದು ಭಾರೀ ಉದಾರ ವೇತನದ ಆಫರ್. ಪದವೀಧರರು ಇಷ್ಟೊಂದು ಹಣ ಇಟ್ಟುಕೊಂಡು ಏನು ಮಾಡುತ್ತಾರೆ?’ ಎಂದು ವ್ಯಂಗ್ಯವಾಡಿದ್ದರೆ, ಮತ್ತೊಬ್ಬರು ‘2002ನೇ ಬ್ಯಾಚ್‌ನ ಟೆಕ್ಕಿಗಳಿಗೇ ಈ ಮೊತ್ತ ಆಫರ್ ಮಾಡಲಾಗಿತ್ತು. ಈ ಮೊತ್ತದಲ್ಲಿ ಪಿಎಫ್ ಕಳೆದರೆ ಉಳಿವ 19000 ರು.ನಲ್ಲಿ ಮೆಟ್ರೋ ನಗರದಲ್ಲಿ ಜೀವನ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು, ಈ ಹಣದಲ್ಲಿ ಹಳ್ಳಿಯೊಂದರಲ್ಲಿ ಬಾಡಿಗೆ ಮನೆಗೆ ಹಣ ಮತ್ತು ಒಂದಿಷ್ಟು ಮ್ಯಾಗಿ ಪ್ಯಾಕೇಟ್ ಖರೀದಿಸಬಹುದಷ್ಟೇ ಎಂದಿದ್ದಾರೆ. ಮಗದೊಬ್ಬರು,‘ಟೀ ಮತ್ತು ಭರವಸೆಯಲ್ಲೇ ಜೀವನ ಸಾಗಿಸಬಹುದೇ ಎಂಬುದರ ಬಗ್ಗೆ ಕಾಗ್ನಿಜೆಂಟ್ ಪ್ರಯೋಗ ನಡೆಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.
ಏತನ್ಮಧ್ಯೆ, ಬೆಂಗಳೂರಿನ ವಾಣಿಜ್ಯೋದ್ಯಮಿಯೊಬ್ಬರು ಕಾಗ್ನಿಜೆಂಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ, ಕಂಪನಿಯು ಅವರಿಗೆ ಸರಿಯಾಗಿ ತರಬೇತಿ ನೀಡಲು ಸಿದ್ಧರಿರುವುದರಿಂದ ಹಣವನ್ನು ಸ್ಟೈಫಂಡ್ ಆಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಹಣ ಹೂಡಿಕೆ, ಕೋಟಿ ಕೋಟಿ ಕಳೆದುಕೊಂಡ ಟೆಕ್ಕಿ ದಂಪತಿ: ಪೊಲೀಸರ ಕ್ಷಿಪ್ರ ಕಾರ್ಯಕ್ಕೆ ಶಬ್ಬಾಶ್ ಗಿರಿ
"ಫ್ರೆಶರ್‌ಗಳ ಗುಣಮಟ್ಟವು ಸಾಮಾನ್ಯವಾಗಿ ಎಷ್ಟು ಕೆಟ್ಟದಾಗಿದೆ ಎಂದರೆ ಅವರ ಕೆಲಸಕ್ಕೆ ತಿಂಗಳಿಗೆ ರೂ 20,000 ಕೂಡ ಹೆಚ್ಚು ಖರ್ಚು ಎಂದು 1811 ಲ್ಯಾಬ್‌ಗಳ ಸಂಸ್ಥಾಪಕ ವತ್ಸಲ್ ಸಾಂಘ್ವಿ, ಮುಖ್ಯವಾಗಿ GenAI SaaS ನಲ್ಲಿ ಮೈಕ್ರೋ ಉತ್ಪನ್ನಗಳನ್ನು ನಿರ್ಮಿಸುವ ಪ್ರಾಯೋಗಿಕ ಸ್ಟುಡಿಯೋ, X ನಲ್ಲಿ ಬರೆದಿದ್ದಾರೆ. "ಹೆಚ್ಚಿನವರಿಗೆ ವೃತ್ತಿಪರ ಸಂವಹನ ನಡೆಸುವುದು ಹೇಗೆಂಬುದೇ ಗೊತ್ತಿಲ್ಲ, ಕೋಡ್ ಮಾಡಲು ಸಹ ಬರುವುದಿಲ್ಲ ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.