ದೀಪಾವಳಿ ದನ್‌ತೇರಸ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!

By Chethan Kumar  |  First Published Oct 30, 2024, 8:30 AM IST

ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಧನ್‌ತೇರಸ್ ಹಿನ್ನಲೆಯಲ್ಲಿ ಚನ್ನ ಖರೀದಿಗೆ ಜನ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಚಿನ್ನ ಬೆಲೆ ಭಾರಿ ಏರಿಕೆಯಾಗಿದೆ. 


ನವದೆಹಲಿ(ಅ.30) ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದನ್‌ತೇರಸ್ ಹಿನ್ನಲೆಯಲ್ಲಿ ಜನ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗಿದೆ. ಹೀಗಾಗಿ ಇದು ಜನರ ಆತಂಕಕ್ಕೆ ಕಾರಣವಾಗಿದೆ.. ಇದೀಗ  ಮತ್ತೆ ನಿರಾಸೆಯಾಗಿದೆ.. ಅಕ್ಟೋಬರ್ 30ರ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಹೀಗಾಗಿ ದನ್‌ತೇರಸ್‌ಗೆ ಚಿನ್ನ ಖರೀದಿ ಉತ್ಸಾಹಕ್ಕೆ ಬ್ರೇಕ್ ಬಿದ್ದಿದೆ. ಇಂದು ಚಿನ್ನದ 24 ಕಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8063.ರೂಪಾಯಿ ಆಗಿದೆ.  ಈ ಮೂಲಕ 670 ರೂಪಾಯಿ ಏರಿಕೆಯಾಗಿದೆ. ಇನ್ನು 22 ಕಾರೆಟ್ ಪ್ರತಿ  ಗಾಂ ಚಿನ್ನದ ಬೆಲೆ 7393.3 ರೂಪಾಯಿ ಆಗಿದೆ. ಈ ಮೂಲಕ 620ರೂಪಾಯಿ ಏರಿಕೆಯಾಗಿದೆ.

ಕಳೆದೊಂದು ವಾರದಲ್ಲಿ 24 ಕಾರೆಟ್ ಚಿನ್ನದ ಬೆಲೆಯಲ್ಲಿ ಶೇಕಡಾ -0.82 ರಷ್ಟು ಇಳಿಕೆಯಾಗಿತ್ತು. . ಇನ್ನು ಬೆಳ್ಳಿ ಬೆಲೆ 102200 ಪ್ರತಿ ಕೆಜಿಗೆ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಯಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಶೀಘ್ರದಲ್ಲೇ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಅನ್ನೋ ಸೂಚನೆಯನ್ನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tap to resize

Latest Videos

ಚಿನ್ನದ ಬೆಲೆ ಏರಿಕೆಯಲ್ಲಿ ಐತಿಹಾಸಿಕ ದಾಖಲೆ, ಅತ್ತ ಷೇರು ಮಾರುಕಟ್ಟೆ ಪಾತಾಳಕ್ಕೆ, ಇದಕ್ಕೆ ಕಾರಣವೇನು?

ಎಪ್ರಿಲ್ 2022ರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ ಪ್ರಬಲವಾಗಿದೆ. ಅದೀಗ ಶೇಕಡಾ 0.2ರಷ್ಟು ಡಾಲರ್ ಸೂಚ್ಯಂಕ ಪ್ರಬಲಗೊಂಡಿದೆ. ಇದರ ನಡುವೆ ಚಿನ್ನದ ಬೆಲೆಯಲ್ಲಿ ಆಗಿರುವ ಬದಲಾವಣೆ ಭಾರತೀಯರಿಗೆ ನಿರಾಸೆ ತಂದಿದೆ. 24 ಕಾರೆಟ್ ಚಿನ್ನ 10 ಗ್ರಾಂಗೆ 80,430 ರೂಪಾಯಿ ಆಗಿದ್ದರೆ, 22 ಕಾರೆಟ್ ಚಿನ್ನ 10 ಗ್ರಾಂಗೆ 73,740 ರೂಪಾಯಿ ಆಗಿದೆ.  

ನವದೆಹಲಿಯಲ್ಲಿ 24 ಕಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 80633 ರೂಪಾಯಿ ಆಗಿದೆ. ಎರಡು ದಿನದ ಹಿಂದೆ ಇದು 80463 ರೂಪಾಯಿ ಆಗಿತ್ತು. ಆದರೆ ಕಳೆದವಾರ 79803 ರೂಪಾಯಿ ಆಗಿತ್ತು.  ಇನ್ನು ಬೆಳ್ಳಿ 1 ಕೆಜಿ ಬೆಲೆ 102200ರೂಪಾಯಿ ಆಗಿದೆ.   ಚೆನ್ನೈನಲ್ಲಿ 24 ಕಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 80481ರೂಪಾಯಿ ಆಗಿದೆ. ಇನ್ನು ಬೆಳ್ಳಿ 1 ಕೆಜಿ ಬೆಲೆ 110800 ರೂಪಾಯಿ ಆಗಿದೆ. ಮುಂಬೈನಲ್ಲಿ 14 ಕಾರೆಟ್ 10 ಗ್ರಾಂ ಚಿನ್ನದ ಬೆಲೆ 80487 ರೂಪಾಯಿ ಆಗಿದೆ. ಅಕ್ಟೋಬರ್ 28 ರಂದು ಇದೇ ಬೆಲೆ 80317 ರೂಪಾಯಿಗೆ ಏರಿಕೆಯಾಗಿತ್ತು. ಕೋಲ್ಕತಾದಲ್ಲಿ 24 ಕಾರೆಟ್ 10 ಗ್ರಾಂ ಚಿನ್ನಕ್ಕೆ 80485 ರೂಪಾಯಿ ಆಗಿದೆ. ಇನ್ನು ಬೆಳ್ಳಿ 1 ಕೆಜಿ ಬೆಲೆ 103000 ರೂಪಾಯಿ ಆಗಿದೆ.

ಇತರ ಕರೆನ್ಸಿ ವಿರುದ್ಧ ಡಾಲರ್ ಮೌಲ್ಯ ಪ್ರಬಲಗೊಳ್ಳುತ್ತಿದ್ದಂತೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.ಇನ್ನು ಭಾರತದಲ್ಲಿನ ಚಿನ್ನದ ಬೇಡಿಕೆ, ರಾಷ್ಟ್ರಗಳ ಕರೆನ್ಸಿ ಮೌಲ್ಯಗಳ ಏರಿಳಿತ, ಸರ್ಕಾರದ ಚಿನ್ನದ ಮೇಲೆ ವಿಧಿಸುವ ತೆರಿಗೆ, ಇತರ ನಿಮಯಗಳು ಚಿನ್ನದ ಬೆಲೆಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಇದೀಗ ಚಿನ್ನದ ಬೆಲೆಯಲ್ಲಿ ಆಗಿರುವ ಇಳಿಕೆ ಧನ್‌ತೇರಸ್ ವೇಳೆ ಚಿನ್ನ ಖರೀದಿಗೆ ಮತ್ತಷ್ಟು ಪುಷ್ಠಿ ನೀಡಿದೆ.  ಪ್ರತಿ ದಿನ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಆಗಿರುವ ಇಳಿಕೆ ಭಾರತೀಯರಿಗೆ ಸಮಾಧಾನ ತಂದಿದೆ. ಇಷ್ಟೇ ಅಲ್ಲ ಮತ್ತಷ್ಟು ಇಳಿಕೆಯಾಗಲಿ ಎಂದು ಜನ ಬಯಸುತ್ತಿದ್ದಾರೆ. 

click me!