EPF ಬಡ್ಡಿದರ: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸರ್ಕಾರ, 5 ಕೋಟಿ ಜನರಿಗೆ ಹೊಡೆತ!

Published : Jun 04, 2022, 08:27 AM ISTUpdated : Jun 04, 2022, 09:11 AM IST
EPF ಬಡ್ಡಿದರ: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸರ್ಕಾರ, 5 ಕೋಟಿ ಜನರಿಗೆ ಹೊಡೆತ!

ಸಾರಾಂಶ

* ಇಪಿಎಫ್‌ ಬಡ್ಡಿದರ ಶೇ.8.1ಕ್ಕೆ ಇಳಿಸಲು ಕೇಂದ್ರ ಅನುಮೋದನೆ * ಕಳೆದ 40 ವರ್ಷಗಳಲ್ಲೇ ಕನಿಷ್ಠ ಬಡ್ಡಿದರ ನಿಗದಿ

ನವದೆಹಲಿ(ಜೂ.04):

2021-22ರ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಯ ಮೇಲೆ ಒದಗಿಸುವ ಬಡ್ಡಿದರವನ್ನು ಶೇ. 8.1ಕ್ಕೆ ಇಳಿಕೆ ಮಾಡುವ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದು ಕಳೆದ 4 ದಶಕಗಳಲ್ಲೇ ಕನಿಷ್ಠ ಬಡ್ಡಿದರವೆನಿಸಿದೆ. ಇದು ಇಪಿಎಫ್‌ನ ಬಡ್ಡಿದರವನ್ನೇ ಅವಲಂಬಿಸಿರುವ ಸುಮಾರು 5 ಕೋಟಿ ಜನರಿಗೆ ಹೊಡೆತ ನೀಡಲಿದೆ.

ಈ ವರ್ಷ ಮಾಚ್‌ರ್‍ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು, ಇಪಿಎಫ್‌ ಠೇವಣಿಗಳ ಮೇಲೆ ಒದಗಿಸುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಗೆ ತಗ್ಗಿಸಲು ನಿರ್ಧಾರ ಮಾಡಿತ್ತು. ಇದಕ್ಕೆ ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಹೊರತಾಗಿಯೂ, ಇಪಿಎಫ್‌ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ಮಂಡಳಿ ನಿರ್ಧಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಅನುಮೋದಿಸಿದೆ.

1977-79ರ ನಂತರ ಇಪಿಎಫ್‌ ಮೇಲಿನ ಬಡ್ಡಿದರವು ಶೇ. 8.1ಕ್ಕೆ ಇಳಿಕೆ ಮಾಡಿದ್ದು ಇದೇ ಮೊದಲು. 1977-78ರಲ್ಲಿ ಶೇ.8 ರಷ್ಟುಬಡ್ಡಿದರ ನೀಡಲಾಗಿತ್ತು.

ಇಪಿಎಫ್‌ ಠೇವಣಿಗಳಿಗೆ 2015-16ರಲ್ಲಿ ಶೇ.8.8, 2016-17ರಲ್ಲಿ ಶೇ.8.65, 2017-18ರಲ್ಲಿ ಶೇ.8.55, 2018-19ರಲ್ಲಿ ಶೇ.8.65, 2019-20ರಲ್ಲಿ ಶೇ.8.5 ಮತ್ತು 2020-21ರಲ್ಲಿ ಶೇ.8.5ರಷ್ಟುಬಡ್ಡಿ ನೀಡಲಾಗಿತ್ತು.

ಈ ವರ್ಷ ಪಿಎಫ್ ಖಾತೆಗೆ ಶೀಘ್ರದಲ್ಲೇ ಬಡ್ಡಿ ಕ್ರೆಡಿಟ್ ಆಗೋ ಸಾಧ್ಯತೆ! ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? 

ನೌಕರರ ಭವಿಷ್ಯ ನಿಧಿ ಖಾತೆಗೆ (EPF) ಈ ವರ್ಷ ಬಡ್ಡಿದರ (Interest) ಬೇಗನೆ ಕ್ರೆಡಿಟ್ ಆಗುವ  ಸಾಧ್ಯತೆಯಿದೆ ಎಂದು ಅನೇಕ ಮಾಧ್ಯಮ ವರದಿಗಳು ತಿಳಿಸಿವೆ. ಇಪಿಎಫ್ಒಗೆ (EPFo) ಈ ವರ್ಷದ ಫೆಬ್ರವರಿಯಲ್ಲಿ 14.12 ಲಕ್ಷ ಮಂದಿ ಚಂದಾದಾರರಾಗಿದ್ದಾರೆ. ಇದು ಕಳೆದ ವರ್ಷದ ಫೆಬ್ರುವರಿಯಲ್ಲಿ ಇಪಿಎಫ್ಒಗೆ ಸೇರ್ಪಡೆಗೊಂಡವರ ಸಂಖ್ಯೆಗಿಂತ ಶೇ.4ರಷ್ಟು ಹೆಚ್ಚಿದೆ. ಕಳೆದ ಸಾಲಿನ ಫೆಬ್ರವರಿಯಲ್ಲಿ 14.12 ಲಕ್ಷ ಮಂದಿ ಸೇರ್ಪಡೆಗೊಂಡಿದ್ದರು. ಹಾಗಾದ್ರೆ ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ವಾರ್ಷಿಕ ಎಷ್ಟು ಬಡ್ಡಿದರ ಸಿಗುತ್ತದೆ? ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುತ್ತಾರೆ.  ಪ್ರತಿ ತಿಂಗಳು ಉದ್ಯೋಗಿಗಳ ವೇತನದಿಂದ ಒಂದಿಷ್ಟು ಭಾಗವನ್ನು ಕಡಿತಗೊಳಿಸಿ ಈ ಖಾತೆಗೆ ಜಮೆ ಮಾಡಲಾಗುತ್ತದೆ. ಇನ್ನು ಅಷ್ಟೇ ಮೊತ್ತದ ಹಣವನ್ನು ಕೆಲಸ ನೀಡಿರುವ ಸಂಸ್ಥೆ ಕೂಡ ಪ್ರತಿ ತಿಂಗಳು ಉದ್ಯೋಗಿಯ ಖಾತೆಗೆ ಜಮೆ ಮಾಡುತ್ತದೆ. 

Interest Rate Hike:ಬಡ್ಡಿದರ ಏರಿಕೆ ಮಾಡಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ; ಹೆಚ್ಚಲಿದೆ ಗೃಹ, ವಾಹನ ಸಾಲಗಳ ಇಎಂಐ

ಬಡ್ಡಿ ಎಷ್ಟಿದೆ?
ಪ್ರಸ್ತುತ ಇಪಿಎಫ್ ಖಾತೆಗೆ ವಾರ್ಷಿಕ ಶೇ.8.5 ಬಡ್ಡಿದರ ನೀಡಲಾಗುತ್ತಿದೆ. ಈ ಬಾರಿ ಶೀಘ್ರದಲ್ಲೇ ಬಡ್ಡಿದರ ಕ್ರೆಡಿಟ್ ಆಗುವ ಸಾಧ್ಯತೆಯಿದೆ. ಹೀಗಾಗಿ ನೀವು ಆಗಾಗ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಮರೆಯಬೇಡಿ.

ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಇಪಿಎಫ್ಒ (EPFO) ಪೋರ್ಟಲ್‌ನಲ್ಲೇ ನಿಮ್ಮ ಸಕ್ರಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ, ಇ-ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು. 
-ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಮೊದಲಿಗೆ ನೀವು www.epfindia.gov.in ಭೇಟಿ ನೀಡಿ. ‘Our Services’ಅಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
-‘Services’ಆಯ್ಕೆ ಅಡಿಯಲ್ಲಿ ‘Member Passbook’ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿದರೆ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
-ಆದ್ರೆ ಹೀಗೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ ಯುಎಎನ್ ಸಂಖ್ಯೆ ಸಕ್ರಿಯವಾಗಿರಬೇಕು. ನಿಮ್ಮ ಕಂಪನಿ ಯುಎಎನ್ ಸಂಖ್ಯೆ ಸಕ್ರಿಯಗೊಳಿಸಿದ್ರೆ ಮಾತ್ರ ನಿಮಗೆ ಬ್ಯಾಲನ್ಸ್ ಚೆಕ್ ಮಾಡಲು ಸಾಧ್ಯವಾಗುತ್ತದೆ.
-ಒಂದು ವೇಳೆ ನಿಮಗೆ ಯುಎಎನ್ ಸಂಖ್ಯೆ ಗೊತ್ತಿಲ್ಲದಿದ್ರೆ ಆಗ epfoservices.in/epfo/ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮ್ಮ ಆಫೀಸ್ ಲಿಂಕ್ ಕ್ಲಿಕ್ ಮಾಡುವ ಮುನ್ನ ನಿಮ್ಮ ರಾಜ್ಯ ಆಯ್ಕೆ ಮಾಡಿ.
-ನಿಮ್ಮ ಪಿಎಫ್ ಖಾತೆ ಸಂಖ್ಯೆ, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ ‘Submit’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಪಿಎಫ್ ಬ್ಯಾಲೆನ್ಸ್ ಕಾಣಿಸುತ್ತದೆ.

Post Office Scheme: ಈ ಯೋಜನೆಯಲ್ಲಿ ದಿನಕ್ಕೆ ಕೇವಲ 70ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 1.50ಲಕ್ಷ ರೂ.!

ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ.  ಮೇಲೆ ಹೇಳಿದ ಈ ಎಲ್ಲ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ  UAN ಜೊತೆಗೆ ಬ್ಯಾಂಕ್ ಖಾತೆ, ಆಧಾರ್, ಪ್ಯಾನ್ ಸಂಖ್ಯೆಯನ್ನು ಲಿಂಕ್ ಆಗಿರುವುದು ಅಗತ್ಯ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!