
ನವದೆಹಲಿ (ಜೂ.3): ರೆಸ್ಟೋರೆಂಟ್ ಗಳು (Restaurants) ಗ್ರಾಹಕರಿಗೆ (Customers) ಸೇವಾ ಶುಲ್ಕ (Service Charge) ವಿಧಿಸುತ್ತಿರುವುದು ಕಾನೂನುಬಾಹಿರವಾಗಿದ್ದು, ಇದನ್ನು ತಕ್ಷಣ ನಿಲ್ಲಿಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Consumer Affairs Department) ಗುರುವಾರ ಹೋಟೆಲ್ ಗಳು (Hotels) ಹಾಗೂ ರೆಸ್ಟೋರೆಂಟ್ಗಳ (Restaurants) ಸಂಘಟನೆಗಳಿಗೆ ಸೂಚಿಸಿದೆ. ಈ ಪದ್ಧತಿಯನ್ನು ನಿಲ್ಲಿಸಲು ಸಚಿವಾಲಯ (Ministry) ಕಾನೂನು ಚೌಕಟ್ಟನ್ನು ರೂಪಿಸಲಿದೆ ಕೂಡ.
ಹೋಟೆಲ್ ಗಳು (Hotels) ಗ್ರಾಹಕರ (Customers) ಮೇಲೆ ವಿಧಿಸುವ ಸೇವಾ ಶುಲ್ಕಗಳಿಗೆ ಯಾವುದೇ ಕಾನೂನು (Legal) ಮಾನ್ಯತೆಯಿಲ್ಲ. ಹೀಗಾಗಿ ಗ್ರಾಹಕರ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರ ಈ ಸಂಬಂಧ ಕಾನೂನು ರೂಪಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಷಿಯೇಷನ್ (NRAI), ಫೆಡರೇಷನ್ ಆಫ್ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಷಿಯೇಷನ್ಸ್ ಆಫ್ ಇಂಡಿಯಾ (FHRAI) ಹಾಗೂ ಗ್ರಾಹಕ ಸಂಘಟನೆಗಳ ಪ್ರತಿನಿಧಿಗಳ ಸಭೆ ಗುರುವಾರ (ಜೂ.2) ನಡೆಯಿತು. ಈ ಸಭೆಯಲ್ಲಿ ಹೋಟೆಲ್ ಸಂಘಟನೆಗಳ ಪ್ರತಿನಿಧಿಗಳು ಮೆನುವಿನಲ್ಲಿ (Menue) ಉಲ್ಲೇಖಿಸಿರುವ ಸೇವಾ ಶುಲ್ಕಕ್ಕೆ ಗ್ರಾಹಕರ ಅನುಮತಿಯೂ ಇದೆ ಎಂದರ್ಥ ಎಂದು ಸಮರ್ಥಿಸಿಕೊಂಡರು. ಆದರೆ, ಅವರ ಈ ಸಮರ್ಥನೆಯನ್ನು ಸಚಿವಾಲಯ ತಳ್ಳಿ ಹಾಕಿತು. ಅಲ್ಲದೆ, ಗ್ರಾಹಕರು ಸೇವಾ ಶುಲ್ಕವನ್ನು(Service Charge) ಸೇವಾ ತೆರಿಗೆ (Service tax) ಎಂದೇ ಭಾವಿಸಿ ಅನಿವಾರ್ಯ ಎಂಬ ಕಾರಣಕ್ಕೆ ಪಾವತಿಸುತ್ತಿದ್ದಾರೆ ಎಂದು ಹೇಳಿದೆ. ಅಲ್ಲದೆ, ಈ ಸೇವಾ ಶುಲ್ಕದಲ್ಲಿ ಏಕರೂಪತೆ ಇಲ್ಲ, ಒಂದೊಂದು ಹೋಟೆಲ್ ಒಂದೊಂದು ಸೇವಾ ಶುಲ್ಕ ವಿಧಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
ಪಾರ್ಟಿ ಶುರು...ಇನ್ನು ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಮದ್ಯ, ಸರ್ವೀಸ್ ಆರಂಭಿಸಿದ ಬೂಜಿ ಕಂಪನಿ!
'ಈ ಸೇವಾ ಶುಲ್ಕ ಪ್ರತಿದಿನ ಲಕ್ಷಾಂತರ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಲಾಖೆ ತಕ್ಷಣ ಈ ಬಗ್ಗೆ ಸೂಕ್ತ ನಿಯಮ ರೂಪಿಸಲಿದೆ' ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಲ್ಲೆ, ಸೇವಾ ಶುಲ್ಕ ಅಥವಾ ಟಿಪ್ಸ್ (Tips) ಅನ್ನೋದು ಗ್ರಾಹಕರು ಸ್ವ ಇಚ್ಛೆಯಿಂದ ನೀಡುವಂತಹದ್ದು, ಹೀಗಾಗಿ ಇದನ್ನು ಬಿಲ್ ನಲ್ಲಿ (Bill) ಸೇರಿಸಬಾರದು ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.
'ಹೋಟೆಲ್ ಗೆ ಗ್ರಾಹಕನೊಬ್ಬ ಪ್ರವೇಶಿಸಿರೋದನ್ನೇ ಸೇವಾ ಶುಲ್ಕ ಪಾವತಿಗೆ ಅನುಮತಿ ಎಂದು ಭಾವಿಸಿದರೆ ಅದು ನ್ಯಾಯಬದ್ಧವಲ್ಲದ ವೆಚ್ಚವನ್ನು ಆತನ ಮೇಲೆ ಹೊರಿಸಿದಂತೆ. ಇದು ಗ್ರಾಹಕ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ನಿರ್ಬಂಧಿತ ವ್ಯವಹಾರ ಅಭ್ಯಾಸವಾಗಿ ಗುರುತಿಸಲ್ಪಡುತ್ತದೆ. ಇನ್ನು ತಿದ್ದುಪಡಿ ಕಾಯ್ದೆ ಇದನ್ನು ಅನ್ಯಾಯದ ಒಪ್ಪಂದ' ಎಂದು ಕರೆಯುತ್ತದೆ. ಹೀಗಾಗಿ ಹೊಸ ನಿಯಮ ಈ ಅಭ್ಯಾಸದ ಕುರಿತ ಎಲ್ಲ ಮಾಹಿತಿಗಳನ್ನು ನೀಡುವ ಜೊತೆಗೆ ಇದನ್ನು ನಿಯಂತ್ರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಈ ಚರ್ಚೆ ಸಾರ್ವಜನಿಕ ವಲಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಜೊತೆಗೆ ರೆಸ್ಟೋರೆಂಟ್ ಗಳ ಕಾರ್ಯನಿರ್ವಹಣೆಗಳಿಗೆ ತೊಂದರೆಯುಂಟು ಮಾಡಲಿದೆ. ಸೇವಾ ಶುಲ್ಕ ಪಾರದರ್ಶಕವಾಗಿದ್ದು, ನೌಕರಸ್ನೇಹಿಯಾಗಿದೆ ಹಾಗೂ ಇಲಾಖೆಯೊಂದಿಗೆ ಹಂಚಿಕೊಂಡಿರುವ ನ್ಯಾಯಾಲಯದ ಅನೇಕ ಆದೇಶಗಳು ಕೂಡ ಇದನ್ನು ಗುರುತಿಸಿ, ಮನ್ನಣೆ ನೀಡಿವೆ' ಎಂದು NRAI ಅಧ್ಯಕ್ಷ ಕಬೀರ್ ಸುರಿ ತಿಳಿಸಿದ್ದಾರೆ.
Business Ideas : 25 ಸಾವಿರ ಹೂಡಿಕೆಯ ಈ ಬ್ಯುಸಿನೆಸ್‌ನಲ್ಲಿ ಸಿಗುತ್ತೆ 3 ಲಕ್ಷ ಲಾಭ
ಆದರೆ, ರೆಸ್ಟೋರೆಂಟ್ ಸಂಘಟನೆಗಳು ನೀಡಿರುವ ಯಾವುದೇ ಆದೇಶಗಳು ಸೇವಾ ಶುಲ್ಕದ ಕಾನೂನು ಮಾನ್ಯತೆ ಬಗ್ಗೆ ತಿಳಿಸಿಲ್ಲ. ಹಾಗೆಯೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿ ಸರ್ಕಾರಕ್ಕೆ ತೆರಿಗೆ ಕಟ್ಟೋದು ನ್ಯಾಯಸಮ್ಮತವಾಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.