
ಕಳೆದ ಒಂದು ವರ್ಷದಲ್ಲಿ ರಿಸರ್ವ್ ಬ್ಯಾಂಕ್, ರೆಪೊ ದರದಲ್ಲಿ ಏರಿಕೆ ಮಾಡಿದೆ. ಇದು ಬ್ಯಾಂಕ್ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಗ್ರಾಹಕರು ತಮ್ಮ ಉಳಿತಾಯ ಖಾತೆಗಳು ಮತ್ತು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರದ ಪ್ರಯೋಜನ ಪಡೆಯುತ್ತಿದ್ದಾರೆ. ಆದ್ರೆ ಕಳೆದ ಎರಡು ಹಣಕಾಸು ನೀತಿ ಸಮಿತಿ ಸಭೆಗಳಲ್ಲಿ, ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಚಿಲ್ಲರೆ ಹಣದುಬ್ಬರ ಕುಸಿತದಿಂದಾಗಿ ರೆಪೊ ದರವನ್ನು ಹಾಗೆಯೇ ಕಾಯ್ದುಕೊಂಡಿದೆ.
ಆರಂಭಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್ (Reserve Bank) ರೆಪೊ ದರವನ್ನು ಶೇಕಡಾ 2.50 ರಷ್ಟು ಹೆಚ್ಚಿಸಿತ್ತು. ಇದು ಗ್ರಾಹಕರ (Customer) ಮೇಲೆ ಲಾಭ ಹಾಗೂ ನಷ್ಟ ಎರಡನ್ನೂ ಉಂಟು ಮಾಡಿದೆ. ಸಾಲ ಪಡೆದವರಿಗೆ ಹೊಣೆ ಹೆಚ್ಚಾಗಿದೆ. ಯಾಕೆಂದ್ರೆ ಸಾಲಗಳ ಮೇಲಿನ ಬಡ್ಡಿ ಹೆಚ್ಚಾಗಿದೆ. ಅದೇ ಎಫ್‌ಡಿ (FD) ಮತ್ತು ಉಳಿತಾಯ ಖಾತೆಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ಲಾಭವಾಗಿದೆ. ಇವುಗಳ ಮೇಲೆ ಹೆಚ್ಚು ಬಡ್ಡಿ ಸಿಗ್ತಿದೆ. ರೆಪೋ ದರ ಹೆಚ್ಚಾದ ಕಾರಣ ಬ್ಯಾಂಕ್ ಗಳು ಎಫ್ ಡಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡ್ತಿವೆ. ಆದ್ರೆ ಈ ಬಡ್ಡಿ ಹಿರಿಯ ನಾಗರಿಕರಿಗೆ ಅನ್ವಯವಾಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಸಿಗುವ ಬಡ್ಡಿ, ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿಗಿಂತ ಕಡಿಮೆ ಇದೆ. ಹಿರಿಯ ನಾಗರೀಕರಿಗೆ ಶೇಕಡಾ 9ರ ದರದಲ್ಲಿ ಬಡ್ಡಿ ಸಿಗ್ತಿದೆ. ಹಿರಿಯ ನಾಗರಿಕರಿಗೆ ಬೇರೆ ಬೇರೆ ಬ್ಯಾಂಕ್ ಬೇರೆ ಬೇರೆ ಬಡ್ಡಿದರ ನೀಡ್ತಿದೆ.
ಪಿಪಿಎಫ್ ಹೂಡಿಕೆದಾರರಿಗೆ ಇಂದು ಶುಭಸುದ್ದಿ ಸಿಗುತ್ತಾ? ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಬಡ್ಡಿದರ ಹೆಚ್ಚಳವಾಗುತ್ತಾ?
ನಿತಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ : ನಿತಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 181 ರಿಂದ 201 ದಿನಗಳ ಮೆಚುರಿಟಿ ಅವಧಿಯೊಂದಿಗೆ ಎಫ್ಡಿ ಗಳ ಮೇಲೆ ಶೇಕಡಾ 9.25 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. 1001 ದಿನಗಳ ಮುಕ್ತಾಯದ ಎಫ್ ಡಿಗಳಿಗೆ ಶೇಕಡಾ 9.50ರಷ್ಟು ಬಡ್ಡಿದರ ಲಭ್ಯವಿದೆ.
ಫಿನ್ಕೇರ್ ಸಣ್ಣ ಹಣಕಾಸು ಬ್ಯಾಂಕ್ : ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಹಿರಿಯ ನಾಗರಿಕರಿಗೆ 1000 ದಿನಗಳ ಮೆಚ್ಯೂರಿಟಿ ಅವಧಿಯೊಂದಿಗೆ ಎಫ್ ಡಿ ಮೇಲೆ ಶೇಕಡಾ 9.11 ರಷ್ಟು ಬಡ್ಡಿದರವನ್ನು ನೀಡುತ್ತದೆ.
ಪೀಪಲ್ಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ : ಪೀಪಲ್ಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಶೇಕಡಾ 9 ರ ಬಡ್ಡಿ ದರನೀಡುತ್ತದೆ. ಈ ದರವು 366 ರಿಂದ 499 ದಿನಗಳ ಅವಧಿಗೆ ಲಬ್ಯವಿದೆ. ಇದಲ್ಲದೆ 501 ರಿಂದ 730 ದಿನಗಳು ಮತ್ತು 500 ದಿನಗಳ ಮೆಚುರಿಟಿ ಅವಧಿಯ ಎಫ್ ಡಿಗೆ ಕೂಡ ಶೇಕಡಾ 9ರ ಬಡ್ಡಿ ಸಿಗುತ್ತದೆ.
ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಸೌಲಭ್ಯ ಪ್ರಾರಂಭಿಸಿದ ಕೆನರಾ ಬ್ಯಾಂಕ್
ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್ : ಹಿರಿಯ ನಾಗರಿಕರು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಎಫ್ ಡಿ ಇಡಬಹುದು. ಐದು ವರ್ಷಗಳ ಮೆಚ್ಯೂರಿಟಿ ಅವಧಿಯೊಂದಿಗೆ ನಿಶ್ಚಿತ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 9.6 ಬಡ್ಡಿದರವನ್ನು ನೀಡುತ್ತದೆ. 999 ದಿನಗಳ ಮೆಚುರಿಟಿ ಅವಧಿಗೆ ಶೇಕಡಾ 9ರ ದರಲ್ಲಿ ಬಡ್ಡಿ ನೀಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಶೇಕಡಾ 7.60ರಷ್ಟು ಬಡ್ಡಿ ನೀಡುತ್ತದೆ. ಬೇರೆ ಬೇರೆ ಅವಧಿಗೆ ಇದು ಬೇರೆ ಬೇರೆಯಾಗಿದೆ.
ಡಿಸಿಬಿ ಬ್ಯಾಂಕ್ : ಡಿಸಿಬಿ ಬ್ಯಾಂಕ್ ಎರಡು ವರ್ಷಗಳ ಎಫ್ ಡಿ ಮೇಲೆ ಶೇಕಡಾ 8 ರ ಬಡ್ಡಿ ದರವನ್ನು ನೀಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.