India
ದಸರಾ, ದೀಪಾವಳಿ ಸಂಭ್ರದಲ್ಲಿರುವ ರೈತರಿಗೆ ಪ್ರಧಾನಿ ಮೋದಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ 18ನೇ ಕಂತಿನ 2000 ರೂಪಾಯಿ ಹಣವನ್ನು ಶನಿವಾರ ಬಿಡುಗಡೆ ಮಾಡಲಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ವರ್ಗಾವಣೆ ಮಾಡಲಿದ್ದಾರೆ. ಒಂದು ವೇಳೇ ಅರ್ಹರಿದ್ದರೂ ಖಾತೆಗೆ ಹಣ ತಲುಪಿಲ್ಲವೆಂದರೆ ಚಿಂತಿಸಬೇಡಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ 2-2 ಸಾವಿರ ಕಂತುಗಳನ್ನು ವರ್ಗಾಯಿಸಲಾಗುತ್ತದೆ.
ಜೂನ್ 2024 ರಲ್ಲಿ ಬಿಡುಗಡೆಯಾದ ಕಂತಿಗೆ ಹೋಲಿಸಿದರೆ ಈ ಬಾರಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಆದಾಗ್ಯೂ, ಕೆವೈಸಿ ಪೂರ್ಣಗೊಳ್ಳದ ಕಾರಣ ಹಲವು ರೈತರು ನಿರಾಶೆಗೊಳ್ಳಬೇಕಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಪ್ರಯೋಜನಕ್ಕಾಗಿ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ರೈತರಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.
ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಿ ಫಲಾನುಭವಿ ಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಮಾಹಿತಿ ನೀಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.
ಅರ್ಹತೆ ಪೂರ್ಣಗೊಳಿಸಿದರೂ ಪಿಎಂ ಕಿಸಾನ್ ಹಣ ಬಂದಿಲ್ಲದಿದ್ದರೆ ಸರ್ಕಾರ ದೂರು ನೀಡಲು ಹಲವು ಆಯ್ಕೆಗಳನ್ನು ತಿಳಿಸಿದೆ. pmkisan-ict@gov.in ನಲ್ಲಿ ನೀವು ದೂರು ದಾಖಲಿಸಬಹುದು.
ನೀವು ಮೇಲ್ ಮಾಡಲು ಸಾಧ್ಯವಾಗದಿದ್ದರೆ, ನೀವು 155261 ಅಥವಾ 1800115526 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೆ 011-23381092 ಗೆ ಸಹ ದೂರು ನೀಡಬಹುದು.