6 ದಿನ ಬ್ಯಾಂಕ್ ಗಳಿಗೆ ರಜಾ ಇದೆ ಅನ್ನೋ ಸುದ್ದಿ ಶುದ್ಧ ಸುಳ್ಳು!

By Web DeskFirst Published Aug 31, 2018, 4:34 PM IST
Highlights

ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್ ಸರಣಿ ರಜಾ! ವಾಟ್ಸಪ್ ಸಂದೇಶ ಸುಳ್ಳಿನ ಕಂತೆ ಎಂದ ಬ್ಯಾಂಕ್ ಅಧಿಕಾರಿಗಳು! ಮೊದಲ ವಾರದಲ್ಲಿ ಸರಣಿ ರಜೆ ಇಲ್ಲ ಕೇವಲ ಸಾಮಾನ್ಯ ರಜೆ! ಎಟಿಎಂ, ಆನ್ ಲೈನ್ ವ್ಯವಹಾರ ನಿರಾಂತಕ ಎಂದ ಅಧಿಕಾರಿಗಳು
 

ನವದೆಹಲಿ(ಆ.31): ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸಪ್ ಸಂದೇಶಗಳು ವೈರಲ್ ಆಗುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 

ಸೆ.02-09 ರ ವರೆಗೆ ಬ್ಯಾಂಕ್ ರಜೆ ಇದ್ದು ಎಟಿಎಂ ಗಳಲ್ಲಿ ಹಣ ಇರುವುದಿಲ್ಲ ಎಂಬ ವಾಟ್ಸಪ್ ಸಂದೇಶ ವೈರಲ್ ಆಗಿತ್ತು. ಆದರೆ ಇದೊಂದು ಸುಳ್ಳು ವದಂತಿ ಎಂದು ಸ್ಪಷ್ಟನೆ ನೀಡಿರುವ ಬ್ಯಾಂಕ್ ಅಧಿಕಾರಿಗಳು, ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ನೌಕರರು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಸೆ.4-5 ರಂದು ಆರ್‌ಬಿಐ ಬಂದ್ ಆಗಿರಲಿದೆ. ಉಳಿದಂತೆ ಎಲ್ಲಾ ಬ್ಯಾಂಕ್ ಗಳು ಸೆ.3(ಭಾನುವಾರ)ಮತ್ತು ಸೆ. 8(ಎರಡನೇ ಶನಿವಾರ) ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಕಾರ್ಯ ನಿವರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಇನ್ನು ಸೆ.3(ಸೋಮವಾರ)ರಂದು ಜನ್ಮಾಷ್ಟಮಿ ಇದ್ದು, ಕೆಲವು ರಾಜ್ಯಗಳಲ್ಲಿ ಮಾತ್ರ ಈ ದಿನ ರಜೆ ಇದೆ. ಕರ್ನಾಟಕದಲ್ಲಿ ಈ ದಿನ ರಜೆ ಘೋಷಣೆ ಮಾಡಲಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಮಾನ್ಯ ರಜೆ ಹೊರತುಪಡಿಸಿ ಇನ್ಯಾವುದೇ ಪ್ರತ್ಯೇಕ ರಜೆ ಇಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟನೆ.

on social media abt closure of banks in 1st week of Sep. Banks to function as usual in Sept. Ist week! NO PAN INDIA BANK CLOSURE ON 3rd Sept. All ATMs & online transactions also to be available unimpeded. Do not trust rumours. pic.twitter.com/JqMvUVNYrg

— DFS (@DFS_India)

ಆರ್‌ಬಿಐ ನೌಕರರ ಪ್ರತಿಭಟನೆಯಿಂದಾಗಿ ಎಟಿಎಂ ಗಳಿಗಾಗಲೀ ಆನ್ ಲೈನ್ ವ್ಯವಹಾರಗಳಿಗಾಗಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೊ ಹೇಳಿದ್ದಾರೆ.

ಬ್ಯಾಂಕ್‌ಗೆ ರಜಾ 6 ದಿನವೋ, 4 ದಿನವೋ? ರಜಾನೇ ಇಲ್ವೋ?: ರಾಮ ರಾಮ!

click me!