ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Apr 21, 2023, 12:44 PM IST

ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಸಾಲ ಸುಲಭವಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ರೆ ಉಳಿತಾಯ ಕೂಡ ಹೆಚ್ಚುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದು ಹೇಗೆ? ಇಲ್ಲಿದೆ ಮಾಹಿತಿ.
 


Business Desk:ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡಲು ನಾವು ಅನೇಕ ಮಾರ್ಗಗಳನ್ನು ಅನುಸರಿಸುತ್ತೇವೆ. ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತೇವೆ, ಷೇರುಗಳು, ಚಿನ್ನ, ಇಟಿಎಫ್ ಹೂಡಿಕೆ ಮೇಲೆ ಉತ್ತಮ ರಿಟರ್ನ್ಸ್ ಗಳಿಸಲು ಬಯಸುತ್ತೇವೆ. ಇವೆಲ್ಲವನ್ನೂ ಹೊರತುಪಡಿಸಿ ಹಣ ಉಳಿತಾಯ ಮಾಡಲು ಇನ್ನೂ ಒಂದು ಮಾರ್ಗವಿದೆ. ಅದೇ ನಿಮ್ಮ ಕ್ರೆಡಿಟ್ ಸ್ಕೋರ್. ಅದೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಕ್ರೆಡಿಟ್ ಸ್ಕೋರ್ ಸಾಲ ಪಡೆಯಲ್ಲಷ್ಟೇ ಅಗತ್ಯ ಎಂದು ಭಾವಿಸಬೇಡಿ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ ಕೂಡ. ಇತ್ತೀಚಿನ ದಿನಗಳಲ್ಲಿ ನಿಮ್ಮ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೋರಿಕೆ ಅರ್ಜಿಯನ್ನು ಪರಿಶೀಲಿಸುವಾಗ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ಅನ್ನು ಮುಖ್ಯ ಮಾನದಂಡವಾಗಿ ಪರಿಗಣಿಸುತ್ತವೆ. ಹೀಗಾಗಿ 700 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮ ಹಣಕಾಸು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಬಲ್ಲದು. ಹಾಗೆಯೇ ಹಣ ಉಳಿತಾಯ ಮಾಡಬಲ್ಲದು ಕೂಡ. ಹಾಗಾದ್ರೆ ಕ್ರೆಡಿಟ್ ಸ್ಕೋರ್ ಹೇಗೆ ನಿಮಗೆ ಉಳಿತಾಯಕ್ಕೆ ನೆರವು ನೀಡಬಲ್ಲದು? ಇಲ್ಲಿದೆ ಮಾಹಿತಿ.

ಸಾಲಗಳ ಮೇಲೆ ಕಡಿಮೆ ಬಡ್ಡಿದರ
ಬ್ಯಾಂಕ್ ಗಳು ಸಾಲ ನೀಡುವಾಗ ಮಾತ್ರವಲ್ಲ, ಬಡ್ಡಿ ದರ ನಿಗದಿಪಡಿಸುವಾಗ ಕೂಡ ಆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಗಮನಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗಳನ್ನು ಆಕರ್ಷಿಸಲು ಬ್ಯಾಂಕ್ ಗಳು ಕಡಿಮೆ ಬಡ್ಡಿದರದ ಆಫರ್ ಕೂಡ ನೀಡುತ್ತವೆ. ಅದೇ ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರಿಗೆ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಹೀಗಾಗಿ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದು, ಸಾಲ ಪಡೆಯುವ ಮುನ್ನ ಅನೇಕ ಬ್ಯಾಂಕ್ ಗಳಲ್ಲಿನ ಬಡ್ಡಿದರವನ್ನು ಪರಿಶೀಲಿಸಿ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಯಾವ ಬ್ಯಾಂಕ್ ಕಡಿಮೆ ಬಡ್ಡಿದರ ವಿಧಿಸುತ್ತದೋ ಅಂಥ ಬ್ಯಾಂಕ್ ಅನ್ನು ಆಯ್ಕೆ ಮಾಡಿ. ಬಡ್ಡಿದರಲ್ಲಿ ಶೇ.0.5 ವ್ಯತ್ಯಾಸವಾದ್ರೂ ಕೂಡ ದೊಡ್ಡ ಮೊತ್ತದ ಸಾಲದ ಮೇಲೆ ಅದು ಗಮನಾರ್ಹ ಪರಿಣಾಮ ಬೀರಬಲ್ಲದು. 

Tap to resize

Latest Videos

ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಎಷ್ಟೊಂದು ಸೌಲಭ್ಯ ನೀಡುತ್ತೆ ಗೊತ್ತಾ?

ಪ್ರೊಸೆಸಿಂಗ್ ಶುಲ್ಕ ಕಡಿಮೆ
ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಬಡ್ಡಿದರ ಮಾತ್ರವಲ್ಲ, ಕೆಲವು ಬ್ಯಾಂಕ್ ಗಳು ಸಾಲದ ಪ್ರೊಸೆಸಿಂಗ್ ಶುಲ್ಕ ಕೂಡ ಕಡಿಮೆ ವಿಧಿಸುತ್ತವೆ. ಇದು ಗೃಹಸಾಲದಂತಹ ದೊಡ್ಡ ಮೊತ್ತದ ಸಾಲ ಪಡೆಯುವಾಗ ಸಹಕಾರಿಯಾಗುತ್ತದೆ. ಗೃಹಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕ ತಗ್ಗಿಸಿದರೆ ಸಾಲ ಪಡೆಯುವ ಪ್ರಕ್ರಿಯೆಯಲ್ಲಿನ ವೆಚ್ಚ ತಗ್ಗುತ್ತದೆ.

ಉತ್ತಮ ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್ 
ಉತ್ತಮ ಕ್ರೆಡಿಟ್ ಕಾರ್ಡ್ ಹೊಂದಿರೋರಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್ ಮೂಲಕ ಉಳಿತಾಯ ಮಾಡಲು ಒಂದಿಷ್ಟು ಅವಕಾಶಗಳು ಸಿಗುತ್ತವೆ. ಡಿಸ್ಕೌಂಟ್ಸ್, ಕ್ಯಾಶ್ ಬ್ಯಾಕ್ಸ್, ರಿವಾರ್ಡ್ ಪಾಯಿಂಟ್ಸ್, ನೋ ಕಾಸ್ಟ್ ಇಎಂಐ ಇತ್ಯಾದಿ ಮೂಲಕ ಉಳಿತಾಯ ಮಾಡಬಹುದು.

EPF ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕಿಲ್ಲ; ಮನೆಯಲ್ಲೇ ಕುಳಿತು ಈ ವಿಧಾನದಿಂದ ಪರಿಶೀಲಿಸಬಹುದು

ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ ಗೆ ಗೃಹಸಾಲ ವರ್ಗಾವಣೆ ಸುಲಭ
ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ ಗೆ ಸಾಲವನ್ನು ವರ್ಗಾಯಿಸುವ ಪ್ರಕ್ರಿಯೆ ಸುಲಭವಾಗುತ್ತದೆ. ಹೌದು, ನೀವು ಪ್ರಸ್ತುತ ಗೃಹಸಾಲ ಹೊಂದಿರುವ ಬ್ಯಾಂಕ್ ನಲ್ಲಿ ಬಡ್ಡಿದರ ಹೆಚ್ಚಿದ್ದು, ನೀವು ಕಡಿಮೆ ಬಡ್ಡಿ ಹೊಂದಿರುವ ಬ್ಯಾಂಕಿಗೆ ವರ್ಗಾಯಿಸಲು ಬಯಸಿದ್ರೆ ಆಗ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಮಾತ್ರ ನಿಮಗೆ ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ ಗೆ ಸಾಲ ವರ್ಗಾಯಿಸಲು ಸಾಧ್ಯವಾಗುತ್ತದೆ. 
 

click me!