ವಾಷಿಂಗ್ಟನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತನ್ನ ಗ್ರಾಹಕರ ಮಾಹಿತಿಯನ್ನು ಅಕ್ರಮವಾಗಿ ಖಾಸಗಿ ಸಂಸ್ಥೆಯೊಂದಿಗೆ ಹಂಚಿಕೊಂಡ ಪ್ರಕರಣದಲ್ಲಿ 6000 ಕೋಟಿ ರು. ಪರಿಹಾರ ನೀಡಲು ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ ಒಪ್ಪಿಕೊಂಡಿದೆ. ಈ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಲು ನಿರ್ಧರಿಸಿದೆ. ಪರಿಣಾಮ ಅಮೆರಿಕ ಕೋಟ್ಯಂತರ ಅಥವಾ ಲಕ್ಷಾಂತರ ಗ್ರಾಹಕರು ಭರ್ಜರಿ ಪರಿಹಾರ ಪಡೆಯುವ ಸಾಧ್ಯತೆ ಇದೆ.
ಏನಿದು ಪ್ರಕರಣ?:
ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪ್ರಚಾರ ಬೆಂಬಲಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಫೇಸ್‌ಬುಕ್ ತನ್ನ ಗ್ರಾಹಕರ ರಹಸ್ಯ ಮಾಹಿತಿಯನ್ನು ಅಕ್ರಮವಾಗಿ ಪೂರೈಸಿತ್ತು. ಬಳಿಕ ಪ್ರಕರಣ ಬೆಳಕಿಗೆ ಬಂದು ದೂರು ಸಲ್ಲಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯಾರಾರಯರ ಮಾಹಿತಿ ಸೋರಿಕೆಯಾಗಿತ್ತೋ ಅವರಿಗೆ ಪರಿಹಾರ ಕೊಡುವುದಾಗಿ ಮೆಟಾ ಹೇಳಿದೆ. ಘಟನೆ ನಡೆದಾಗ ಅಮೆರಿಕದಲ್ಲಿ 8 ಕೋಟಿ ಫೇಸ್‌ಬುಕ್ ಬಳಕೆದಾರರು ಇದ್ದರು. ಈ ಪೈಕಿ ಮಾಹಿತಿ ಸೋರಿಕೆಯಾದ ಗ್ರಾಹಕರು ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ಅವರಿಗೆ ಪರಿಹಾರ ನೀಡುವುದಾಗಿ ಹೇಳಿದೆ. ಅಂದರೆ 6000 ಕೋಟಿ ರು.ಹಣವನ್ನು ಅರ್ಜಿ ಸಲ್ಲಿಸಿದ ಅರ್ಹರಾಗಿ ಸಮನಾಗಿ ಹಂಚಲಾಗುವುದು.
ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?
1.5 ಲಕ್ಷ ಬ್ಯಾಂಕ್ ಗ್ರಾಹಕರ ಡಾಟಾ ಲೀಕ್: ನಿಮ್ದೂ ಇದ್ರೆ ಕಷ್ಟ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.