Excise From Petrol-Diesel: ಪೆಟ್ರೋಲ್‌, ಡೀಸೆಲ್‌ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ಡಬಲ್‌ ಆದಾಯ!

By Kannadaprabha News  |  First Published Dec 1, 2021, 8:22 AM IST

*2020-21ರಲ್ಲಿ .3.74 ಲಕ್ಷ ಕೋಟಿ ಸಂಗ್ರಹ
*ರಾಜ್ಯಗಳಿಗೆ .20,000 ಕೋಟಿ ಹಂಚಿಕೆ
*ಸುಂಕದ ಕುರಿತು ರಾಜ್ಯಸಭೆಗೆ ಸರ್ಕಾರ ಮಾಹಿತಿ


ನವದೆಹಲಿ(ಡಿ. 01): ಕೋವಿಡ್‌ ಸಾಂಕ್ರಾಮಿಕ (Corona Virus) ತೀವ್ರಗೊಂಡಿದ್ದ 2020-21ರ ಅವಧಿಯಲ್ಲಿ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ಅಬಕಾರಿ (Excise Duty) ಸುಂಕದ ಮೂಲಕ ಕೇಂದ್ರ ಸರ್ಕಾರ ಭರ್ಜರಿ 3.72 ಲಕ್ಷ ಕೋಟಿ ರು. ಆದಾಯ (Revenue) ಸಂಗ್ರಹಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಎಂದು ಸ್ವತಃ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಮಂಗಳವಾರ ರಾಜ್ಯಸಭೆಗೆ (Rajya Sabha) ಮಾಹಿತಿ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ (Pankaj Choudhary), ‘2019-20ನೇ ಸಾಲಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕದ ರೂಪದಲ್ಲಿ ಸರ್ಕಾರ 1.78 ಲಕ್ಷ ಕೋಟಿ ರು. ಸಂಗ್ರಹಿಸಿತ್ತು. 2020-21ರಲ್ಲಿ ಈ ಪ್ರಮಾಣ 3.74 ಲಕ್ಷ ಕೋಟಿ ರು.ಗೆ ಏರಿತ್ತು. ಈ ಪೈಕಿ ರಾಜ್ಯಗಳಿಗೆ ಅವುಗಳ ಪಾಲಿನ ಪ್ರಮಾಣವಾದ 19,972 ಕೋಟಿ ರು.ಗಳನ್ನು ಹಂಚಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಲೀ.ಪೆಟ್ರೋಲ್‌ ಮೇಲೆ 27.90 ರು. ಮತ್ತು ಡೀಸೆಲ್‌ ಮೇಲೆ 21.80 ರು.ನಷ್ಟುಅಬಕಾರಿ ಸುಂಕ ವಿಧಿಸುತ್ತದೆ. ಆದರೆ ಅದು ತನ್ನ ಆದಾಯವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲು, ತೈಲದ ಮೇಲಿನ ಮೂಲ ಸುಂಕವನ್ನು ಮಾತ್ರ ಪರಿಗಣಿಸುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಮೂಲ ಅಬಕಾರಿ ಸುಂಕ ಪ್ರತಿ ಲೀ.ಗೆ ಕೇವಲ 1.40 ರು.ನಷ್ಟುಮಾತ್ರ ಇರುವುದರಿಂದ ರಾಜ್ಯಗಳ ಜೊತೆಗೆ ಅದು ಹಂಚಿಕೊಳ್ಳುವ ಪ್ರಮಾಣವೂ ಕಡಿಮೆ. ಹೀಗಾಗಿ 3.72 ಲಕ್ಷ ಕೋಟಿ ರು.ನಲ್ಲಿ ಕೇವಲ 19972 ಕೋಟಿ ರು. ಮಾತ್ರ ರಾಜ್ಯಗಳಿಗೆ ಹಂಚಿಕೆಯಾಗಿದೆ.

Latest Videos

undefined

ಕೇಂದ್ರ ಸರ್ಕಾರದ ತೆರಿಗೆ ಹೇಗೆ?:

ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ವಿಧಿಸುವ 27.90 ರು. ಅಬಕಾರಿ ಸುಂಕದ ಪೈಕಿ ಮೂಲ ಅಬಕಾರಿ ಸುಂಕ 1.40 ರು., ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 11 ರು., ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ 13 ರು. ಮತ್ತು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ರೂಪದಲ್ಲಿ 2.50 ರು. ಸೇರಿರುತ್ತದೆ.

ಕಳೆದ ವರ್ಷ ಅಬಕಾರಿ ಸುಂಕ 2 ಬಾರಿ ಏರಿಕೆ:

2019ರಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 19.98 ರು. ಮತ್ತು 15.83 ರು.ನಷ್ಟಿತ್ತು. ಕಳೆದ ವರ್ಷ ಅದನ್ನು 2 ಬಾರಿ ಏರಿಸುವ ಮೂಲಕ ಕ್ರಮವಾಗಿ 32.98 ರು. ಮತ್ತು 31.83 ರು.ಗೆ ಹೆಚ್ಚಿಸಲಾಗಿತ್ತು.

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

ಡಬಲ್‌ ಏರಿಕೆ ಏಕೆ?

- 2019-20ನೇ ಸಾಲಿನಲ್ಲಿ 1.78 ಲಕ್ಷ ಕೋಟಿ ರು. ಸಂಗ್ರಹ

- ಆಗ ಪೆಟ್ರೋಲ್‌ ಮೇಲೆ 19.98 ರು. ಅಬಕಾರಿ ಸುಂಕ ಇತ್ತು

- ಡೀಸೆಲ್‌ ಮೇಲೆ 15.83 ರು. ಅಬಕಾರಿ ಸುಂಕ ವಿಧಿಸಲಾಗುತ್ತಿತ್ತು

- 2020ರಲ್ಲಿ ಇದು ಕ್ರಮವಾಗಿ 32.98, 31.83 ರು.ಗೆ ಹೆಚ್ಚಳ

- ಹೀಗಾಗಿ ಸರ್ಕಾರದಕ್ಕೆ ತೈಲ ಸುಂಕದಿಂದ ದುಪ್ಪಟ್ಟು ಆದಾಯ

- ತೈಲ ಸುಂಕದ ಕುರಿತು ರಾಜ್ಯಸಭೆಗೆ ಸರ್ಕಾರ ಮಾಹಿತಿ

ಭಾರತದ್ದು ಈಗ ವಿಶ್ವದಲ್ಲೇ ವೇಗದ ಜಿಡಿಪಿ!

ಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್‌ - July to September quarter) ಅವಧಿಯಲ್ಲಿ ದೇಶ ಶೇ.8.4ರಷ್ಟುಆರ್ಥಿಕ ಬೆಳವಣಿಗೆ ದರ (gross domestic product)ವನ್ನು ದಾಖಲಿಸಿದೆ. ಇದು ನಿರೀಕ್ಷೆಗಿಂತಲೂ ಅಧಿಕ ಪ್ರಮಾಣ. ಈ ಮೂಲಕ ದೊಡ್ಡ ಆರ್ಥಿಕತೆಗಳ ಪೈಕಿ (World Economy) ಅತ್ಯಂತ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಎಂಬ ಹಿರಿಮೆಯನ್ನು ಕಾಯ್ದುಕೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಇದೀಗ 35.73 ಲಕ್ಷ ಕೋಟಿ ರು. ದಾಟಿದೆ. ಇದು ಕೋವಿಡ್‌ ಪೂರ್ವ (Pre covid) ಸಮಯವಾದ 2020ನೇ ಸಾಲಿನ 2ನೇ ತ್ರೈಮಾಸಿಕಕ್ಕಿಂತ ಶೇ.0.33ರಷ್ಟುಹೆಚ್ಚು. ಅಂದರೆ ಆರ್ಥಿಕತೆ ಕೋವಿಡ್‌ ಪೂರ್ವ ಸ್ಥಿತಿಗೆ ತಲುಪಿದೆ ಎಂದು ಸರ್ಕಾರ ಹೇಳಿದೆ.

click me!