Indian oil:‘ಹೈವೇ ಧಮಾಕಾ ಯೋಜನೆ’:ಬೈಕ್‌, ವಾಷಿಂಗ್‌ ಮಷಿನ್‌ ಬಹುಮಾನ ಗೆಲ್ಲುವ ಅವಕಾಶ

By Kannadaprabha NewsFirst Published Dec 1, 2021, 6:35 AM IST
Highlights
  •  ಧಾರವಾಡದ ಮಮ್ಮಿಗಟ್ಟಿಯಲ್ಲಿನ ಸ್ವಾಗತ ಔಟ್‌ಲೆಟ್‌ನಲ್ಲಿ ‘ಇಂಡಿಯನ್‌ ಆಯಿಲ್‌ ಹೈವೇ ಧಮಾಕಾ’
  • ಯೋಜನೆಗೆ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಅಧ್ಯಕ್ಷ ಶ್ರೀಕಾಂತ ಮಾಧವ ವೈದ್ಯ ಮಂಗಳವಾರ ಚಾಲನೆ

ಹುಬ್ಬಳ್ಳಿ (ಡಿ.01): ಧಾರವಾಡದ (Dharwad ) ಮಮ್ಮಿ ಗಟ್ಟಿಯಲ್ಲಿನ ಸ್ವಾಗತ ಔಟ್‌ಲೆಟ್‌ನಲ್ಲಿ ‘ಇಂಡಿಯನ್‌ ಆಯಿಲ್‌ ಹೈವೇ ಧಮಾಕಾ’ (Indian oil Highway Dhamaka ) ಯೋಜನೆಗೆ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಅಧ್ಯಕ್ಷ ಶ್ರೀಕಾಂತ ಮಾಧವ ವೈದ್ಯ ಮಂಗಳವಾರ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ಸ್ವಾಗತ್‌ ಔಟ್‌ ಲೆಟ್‌ ದೇಶಾದ್ಯಂತ ಸಾಗಾಟ ಕಾರ್ಯಾಚರಣೆ ನಿರ್ವಹಿಸಲಿದೆ. ಬೆಳಗಾವಿ (Belagavi)  ಪ್ರಾದೇಶಿಕ ಕೇಂದ್ರದ ಅಡಿಯಲ್ಲಿ ಆರು ಜಿಲ್ಲೆಯಲ್ಲಿ ಇದು ಪ್ರಮುಖವಾಗಿದೆ. 70 ರಾಷ್ಟ್ರೀಯ ಹೆದ್ದಾರಿಗಳಲ್ಲಿ (National highway) ಹೈವೇ ಧಮಾಕಾ ಯೋಜನೆ ಅನ್ವಯಿಸಲಿದೆ ಎಂದರು. ಔಟ್‌ ಲೆಟ್‌ನಲ್ಲಿ ಡೀಸೆಲ್‌ (Diesel) ತುಂಬಿಸುವ ಗ್ರಾಹಕರು ಮಹೀಂದ್ರ ಟೆಂಪೋ ಜೀತೂ, ಬಜಾಜ್‌ ಸಿಟಿ 110 ಬೈಕ್‌, ವಾಷಿಂಗ್‌ ಮಷಿನ್‌ ಮತ್ತು ಇತರ ಅತ್ಯಾಕರ್ಷಕ ಬಹುಮಾನಗಳನ್ನು (Best Gift) ಗೆಲ್ಲುವ ಅವಕಾಶ ಪಡೆಯಲಿದ್ದಾರೆ. ಮುಂದಿನ ಒಂದು ತಿಂಗಳ ಅಂದರೆ ಜ. 1ರವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ ಎಂದರು.

ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಐಒಸಿ (IOC) ಉತ್ತಮ ಸಾಧನೆ ಮಾಡಲು ಕಾರಣವಾದ ಹಂಚಿಕೆದಾರರನ್ನು ಶ್ಲಾಘಿಸಿದ ಅವರು, ಇನ್ನಷ್ಟು ತ್ವರಿತ, ಉತ್ತಮ ಸೇವೆ ನೀಡಲು ಸಹಕರಿಸುವಂತೆ ಸಲಹೆ ನೀಡಿದರು.

ಸ್ವಾಗತ್‌ ಔಟ್‌ ಲೆಟ್‌ನಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಅಧ್ಯಕ್ಷ ಶ್ರೀಕಾಂತ ವೈದ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಿಂದೆ ಅಗ್ನಿ ಅವಘಢ ಉಂಟಾಗಿ ತುರ್ತು ಸಂದರ್ಭ ಎದುರಾದಾಗ ಗ್ರಾಹಕರಿಗೆ ನೆರವಾಗಿ ಬೆಂಕಿ ನಂದಿಸಿದ ಸಿಬ್ಬಂದಿಯನ್ನು ಸನ್ಮಾನಿಸಿದರು. ಕ್ಷೇತ್ರಾಧಿಕಾರಿ ಎಸ್‌.ಗಣೇಶ್‌ ಖೇತ್ರಿ ಅವರಿಗೆ ಚೆಕ್‌ ಹಸ್ತಾಂತರಿಸಿದರು. ಈ ವೇಳೆ ಐಒಸಿ ಅಧಿಕಾರಿಗಳಾದ ಎನ್‌.ಡಿ. ಮಾಥೂರ, ನರೇಶ ಗೇರಾ, ಆರ್‌. ರವಿಚಂದ್ರನ್‌, ಪಿ.ಆರ್‌. ಶ್ರೀನಿವಾಸ್‌, ಬಿನಯ ಕುಮಾರ ಇತರರು ಇದ್ದರು.

ಪೆಟ್ರೋಲ್-  ಡೀಸೆಲ್ ರೇಟ್ ಇಳಿಕೆ  :   ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel)  ಬೆಲೆ (Rate)   ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲದಿರೋದು ಸ್ವಲ್ಪ ಮಟ್ಟಿಗೆ ನೆಮ್ಮದಿ ತರಿಸಿದೆ. ಈ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗೆ ಸಂಬಂಧಿಸಿ ಮತ್ತೊಂದು ಸಂತಸದ ಸುದ್ದಿ ವರದಿಯಾಗಿದೆ. ಕೊರೋನಾ(Coronavirus) ಹೊಸ ರೂಪಾಂತರಿ ಓಮಿಕ್ರಾನ್ (Omicron) ವೈರಸ್ (Virus) ಭೀತಿ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅನೇಕ ರಾಷ್ಟ್ರಗಳು ನಿರ್ಬಂಧ ಹೆಚ್ಚಿಸುತ್ತಿರೋ ಕಾರಣ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗೋ ನಿರೀಕ್ಷೆಯಿದೆ.  ಡಿಸೆಂಬರ್ 1ಕ್ಕೆ ಬಿಡುಗಡೆಯಾಗೋ ಹೊಸ ದರದಲ್ಲಿ ಪೆಟ್ರೋಲ್  ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 5ರೂ. ತನಕ ಕಡಿತವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಹೊಸ ರೂಪಾಂತರಿ ಕಾರಣಕ್ಕೆ ವಿಮಾನ ಸೇವೆಗಳ ಮೇಲೆ ಮತ್ತೆ ನಿರ್ಬಂಧ ವಿಧಿಸಲಾಗುತ್ತಿದೆ. ಕೆಲವು ಕಡೆ ಲಾಕ್ ಡೌನ್ ಹೇರಲಾಗುತ್ತಿದೆ. ಪರಿಣಾಮ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಶೇ.12ರಷ್ಟು ಕುಸಿತ ಕಂಡಿದ್ದು, 72ಡಾಲರ್ ಗೆ ತಲುಪಿದೆ.    ಹಾಗಾಗಿ ನಾಳೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾದ್ರೂ ಆಗಬಹುದು. ಹಾಗಾದ್ರೆ ರಾಜ್ಯದ ಪ್ರಮುಖ ನಗರಗಳಲ್ಲಿ(Cities) ಇಂದು (ನ.30)  ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? 

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bangalore) ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಹಾಗೂ ಡೀಸೆಲ್  ದರ 85.01 ರೂ.ಇದೆ. ಕಳೆದ ಒಂದು ವಾರದಿಂದ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubli) ಪೆಟ್ರೋಲ್ ಬೆಲೆ 100.31ರೂ. ಹಾಗೂ ಡೀಸೆಲ್ ಬೆಲೆ 84.79 ರೂ.ಇದೆ. ಮಂಗಳೂರಿನಲ್ಲಿ (Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದ್ದರೆ, ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ (Mysore) ಪೆಟ್ರೋಲ್ ಗೆ 100.43 ರೂ. ಹಾಗೂ ಡೀಸೆಲ್ ಗೆ 84.87ರೂ. ಇದೆ. ಬಿಸಿಲ ನಗರಿ ಕಲಬುರಗಿಯಲ್ಲಿ (Kalburgi) ಪೆಟ್ರೋಲ್ ಗೆ 100.28 ರೂ. ಹಾಗೂ ಡೀಸೆಲ್ ಗೆ 84.77ರೂ.ಇದೆ. 

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

click me!