Indiaʼs GDP grew 8.4% in Q2: ಭಾರತದ್ದು ಈಗ ವಿಶ್ವದಲ್ಲೇ ವೇಗದ ಜಿಡಿಪಿ!
*2ನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ದರ
*ದೇಶಾದ್ಯಂತ ಗರಿಗೆದರಿದ ಆರ್ಥಿಕ ಚಟುವಟಿಕೆ!
*ಈ ವರ್ಷ ಎರಡಂಕಿಯ ಬೆಳವಣಿಗೆ ವಿಶ್ವಾಸ
ನವದೆಹಲಿ(ಡಿ. 01): ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್ - July to September quarter) ಅವಧಿಯಲ್ಲಿ ದೇಶ ಶೇ.8.4ರಷ್ಟುಆರ್ಥಿಕ ಬೆಳವಣಿಗೆ ದರ (gross domestic product)ವನ್ನು ದಾಖಲಿಸಿದೆ. ಇದು ನಿರೀಕ್ಷೆಗಿಂತಲೂ ಅಧಿಕ ಪ್ರಮಾಣ. ಈ ಮೂಲಕ ದೊಡ್ಡ ಆರ್ಥಿಕತೆಗಳ ಪೈಕಿ (World Economy) ಅತ್ಯಂತ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಎಂಬ ಹಿರಿಮೆಯನ್ನು ಕಾಯ್ದುಕೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಇದೀಗ 35.73 ಲಕ್ಷ ಕೋಟಿ ರು. ದಾಟಿದೆ. ಇದು ಕೋವಿಡ್ ಪೂರ್ವ (Pre covid) ಸಮಯವಾದ 2020ನೇ ಸಾಲಿನ 2ನೇ ತ್ರೈಮಾಸಿಕಕ್ಕಿಂತ ಶೇ.0.33ರಷ್ಟುಹೆಚ್ಚು. ಅಂದರೆ ಆರ್ಥಿಕತೆ ಕೋವಿಡ್ ಪೂರ್ವ ಸ್ಥಿತಿಗೆ ತಲುಪಿದೆ ಎಂದು ಸರ್ಕಾರ ಹೇಳಿದೆ.
2ನೇ ತ್ರೈಮಾಸಿಕದ (Quarter 2) ಅಂಕಿ- ಅಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ,‘ಮೊದಲ ತ್ರೈಮಾಸಿಕದಲ್ಲಿ ದೇಶ ಶೇ.20.1ರಷ್ಟುಆರ್ಥಿಕ ಪ್ರಗತಿ ದಾಖಲಿಸಿತ್ತು. ಅದಕ್ಕೆ ಮುಖ್ಯ ಕಾರಣ, ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಹಣಕಾಸು ವರ್ಷದ ಕಡೆಯ ತ್ರೈಮಾಸಿಕದಲ್ಲಿ ಆರ್ಥಿಕತೆ ಪೂರ್ಣ ಕುಸಿದಿದ್ದು. ಆಗಿನ ಮೂಲ ದರಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಭಾರೀ ಹೆಚ್ಚಳ ಅನ್ನಿಸಿಕೊಂಡಿತ್ತು. ಆದರೆ ಇದೀಗ 2ನೇ ತ್ರೈಮಾಸಿಕದಲ್ಲಿ ಶೇ.8.4ರಷ್ಟುಆರ್ಥಿಕ ಪ್ರಗತಿ ದರ ದಾಖಲಾಗಿದೆ. ಜೊತೆಗೆ ಇದು 2020ರ 2ನೇ ತ್ರೈಮಾಸಿಕಕ್ಕಿಂತ ಉತ್ತಮ’ ಎಂದು ಹೇಳಿದೆ.
ದೇಶಾದ್ಯಂತ ಗರಿಗೆದರಿದ ಆರ್ಥಿಕ ಚಟುವಟಿಕೆ!
ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಲೇ ಈ ವರ್ಷಾರಂಭದಿಂದಲೇ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು (Economic Activities) ಗರಿಗೆದರಿದ್ದವು. ಅದರ ಸುಳಿವು ಎಂಬಂತೆ ಸತತ 4ನೇ ತ್ರೈಮಾಸಿಕದಲ್ಲಿ ಆರ್ಥಿಕತೆ ಏರುಮುಖ ದಾಖಲಿಸಿದಂತೆ ಆಗಿದೆ. ಅನ್‌ಲಾಕ್ (Unlock) ಕ್ರಮಗಳಿಂದಾಗಿ ದೇಶಾದ್ಯಂತ ಜನರ ಬಳಕೆ ಹೆಚ್ಚಾಗಿರುವುದು ಜಿಡಿಪಿ ದರ ಹೆಚ್ಚಲು ಕಾರಣವಾಗಿದೆ. ಇದರ ಜೊತೆಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸರ್ಕಾರದ ವೆಚ್ಚದಲ್ಲೂ ಶೇ.8.7ರಷ್ಟುಹೆಚ್ಚಳ ಕೂಡ ಜಿಡಿಪಿ ದರ ಏರಿಕೆಗೆ ಕಾರಣವಾಗಿದೆ.
ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚು ಎಲನ್ ಮಸ್ಕ್ ಸಂಪತ್ತು!
ಉತ್ತಮ ಮುಂಗಾರಿನ (Monsoon) ಪರಿಣಾಮ ಕೃಷಿ ವಲಯವು ಶೇ.4.5, ಉತ್ಪಾದನಾ ವಲಯ ಶೇ.5.5, ನಿರ್ಮಾಣ, ಉದ್ಯಮ, ಹೋಟೆಲ್, ಸಾರಿಗೆ, ಹಣಕಾಸು ಸೇವೆ ವಲಯಗಳು ಶೇ.7-8ರಷ್ಟುಬೆಳವಣಿಗೆ ದಾಖಲಿಸಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಈ ವರ್ಷ ಎರಡಂಕಿ ಜಿಡಿಪಿ:
ಇದೇ ವೇಳೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ದರ ಎರಡಂಕಿಯ ಬೆಳವಣಿಗೆ ಕಾಣಲಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕದಲ್ಲಿ ದೇಶ ಶೇ.13.7ರಷ್ಟುಬೆಳವಣಿಗೆ ದಾಖಲಿಸಿದೆ. ಹೀಗಾಗಿ ಇನ್ನು ಉಳಿದ 2 ಅವಧಿಯಲ್ಲಿ ಶೇ.6ರ ಆಸುಪಾಸಿನ ಬೆಳವಣಿಗೆ ದಾಖಲಿಸಿದರೂ ಒಟ್ಟಾರೆ ಪ್ರಗತಿ ದರ ಶೇ.10ರ ಗಡಿ ದಾಟಲಿದೆ ಎಂದರು.
Changes from Dec 1: ನಾಳೆಯಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ
ಭಾರತದ ಆರ್ಥಿಕತೆಗಿರೋ ಸವಾಲುಗಳು
ಹಣದುಬ್ಬರದ(Inflation) ಸವಾಲು ಸದ್ಯ ಇಡೀ ಜಗತ್ತನ್ನೇ ಕಾಡುತ್ತಿದೆ. ಕಚ್ಚಾ ವಸ್ತುಗಳ ಬೆಲೆಯೇರಿಕೆ ಪೂರೈಕೆ ವ್ಯವಸ್ಥೆ (supply chain) ಮೇಲೆ ಪರಿಣಾಮ ಬೀರಿದೆ. ಬೃಹಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿರೋದು ಕೂಡ ಬೇಡಿಕೆ ಮೇಲೆ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. 2020ರಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ (GDP) 2021ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ.7.3ಕ್ಕೆ ಇಳಿಕೆ ಕಂಡಿತ್ತು. ಆದ್ರೆ ಸದ್ಯ ಚೇತರಿಕೆಯ ಹಾದಿಯಲ್ಲಿದೆ. ಕೋವಿಡ್ -19 ಮೊದಲ ಹಾಗೂ ಎರಡನೇ ಅಲೆಗಳ ಕಾರಣದಿಂದಾಗಿ ಭಾರತ ಸರ್ಕಾರ ಉತ್ಪಾದನಾ ಚಟುವಟಿಕೆಗೆ ವೇಗ ನೀಡಲು ಹೊಸ ಬೆಳವಣಿಗೆ ಮಾರ್ಗಗಳನ್ನು ಹುಡುಕೋ ಬದಲು ವ್ಯಾಕ್ಸಿನ್ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಿತು ಎಂಬ ಅಭಿಪ್ರಾಯವನ್ನು ಕೂಡ ಆರ್ಥಿಕತಜ್ಞರು ವ್ಯಕ್ತಪಡಿಸಿದ್ದಾರೆ.