ಇಪಿಎಫ್ ಖಾತೆಗಳಿಗೆ ಈ ಬಾರಿ ಸರ್ಕಾರ ತಡವಾಗಿ ಬಡ್ಡಿ ಜಮೆ ಮಾಡುತ್ತಿದೆ. ಈಗಾಗಲೇ ಬಡ್ಡಿ ಜಮೆ ಪ್ರಕ್ರಿಯೆಯನ್ನು ಇಪಿಎಫ್ಒ ಪ್ರಾರಂಭಿಸಿದ್ದು, ಕೆಲವರ ಖಾತೆಗೆ ಹಣ ಬಂದಾಗಿದೆ. ಹಾಗಿದ್ರೆ ನಿಮ್ಮ ಖಾತೆಗೂ ಬಡ್ಡಿ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಸಾಕಷ್ಟು ವಿಳಂಬದ ಬಳಿಕ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ 2021-2022ನೇ ಸಾಲಿನ ಬಡ್ಡಿ ಜಮೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಳಂಬವಾದ ಕಾರಣಕ್ಕೆ ಯಾವುದೇ ಇಪಿಎಫ್ ಖಾತೆದಾರರಿಗೂ ಬಡ್ಡಿಯಲ್ಲಿ ಯಾವುದೇ ನಷ್ಟವಾಗೋದಿಲ್ಲ. ಅವರಿಗೆ ಸಿಗಬೇಕಾದ ಮೊತ್ತದ ಬಡ್ಡಿ ಅವರ ಖಾತೆಗೆ ಜಮಾ ಆಗುತ್ತದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭರವಸೆ ನೀಡಿದೆ. ಇಪಿಎಫ್ ಖಾತೆಗೆ ಬಡ್ಡಿ ಜಮೆ ಮಾಡುತ್ತಿರುವ ಬಗ್ಗೆ ಇಪಿಎಫ್ಒ ಕಳೆದ ತಿಂಗಳು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಜಮೆ ಮಾಡಿರುವ ಬಡ್ಡಿ ದರ ಫಲಾನುಭವಿಗಳ ಖಾತೆಯಲ್ಲಿ ಶೀಘ್ರದಲ್ಲೇ ಕಾಣಿಸಲಿದೆ ಎಂದು ತಿಳಿಸಿತ್ತು. ಇನ್ನು ನಿಮ್ಮ ಇಪಿಎಫ್ ಖಾತೆಗೆ ಬಡ್ಡಿ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅನೇಕ ಮಾರ್ಗಗಳಿವೆ. ಅದರಲ್ಲಿ ಒಂದು ವಿಧಾನವೆಂದ್ರೆ ಪಾಸ್ ಬುಕ್ ನಲ್ಲಿ ನಿಮ್ಮ ಇಪಿಎಫ್ ಒ ಬ್ಯಾಲೆನ್ಸ್ ಚೆಕ್ ಮಾಡೋದು. ನೀವು ನೋಂದಾಯಿತ ಸದಸ್ಯರಾಗಿದ್ರೆ ಅಥವಾ ನಿಮ್ಮ 12 ಅಂಕೆಗಳ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಸಕ್ರಿಯಗೊಳಿಸಿದ್ರೆ ನಿಮ್ಮ ಪಾಸ್ ಪುಸ್ತಕ ಚೆಕ್ ಮಾಡೋದು ಸುಲಭ.
ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಹಂತ 1: ಇಪಿಎಫ್ ಒ (EPFO) ಅಧಿಕೃತ ವೆಬ್ ಸೈಟ್ epfindia.gov.in.ಭೇಟಿ ನೀಡಿ.
ಹಂತ 2:‘Services’ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ‘Member Passbook’ ಮೇಲೆ ಕ್ಲಿಕ್ ಮಾಡಿ. ಈಗ ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿ. ಕ್ಯಾಪ್ಚ ಕೋಡ್ ಕೂಡ ನಮೂದಿಸಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
ನ.19ರಂದು ಬ್ಯಾಂಕ್ ನೌಕರರ ಮುಷ್ಕರ; ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ!
ಒಂದು ವೇಳೆ ನಿಮಗೆ ಯುಎಎನ್ ಸಂಖ್ಯೆ ಗೊತ್ತಿಲ್ಲದಿದ್ರೆ ಆಗ epfoservices.in/epfo/ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮ್ಮ ಆಫೀಸ್ ಲಿಂಕ್ ಕ್ಲಿಕ್ ಮಾಡುವ ಮುನ್ನ ನಿಮ್ಮ ರಾಜ್ಯ ಆಯ್ಕೆ ಮಾಡಿ.ನಿಮ್ಮ ಪಿಎಫ್ ಖಾತೆ ಸಂಖ್ಯೆ (EPFO account number), ಹೆಸರು (Name) ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ (Mobile number) ನಮೂದಿಸಿ ಹಾಗೂ ‘Submit’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಪಿಎಫ್ ಬ್ಯಾಲೆನ್ಸ್ (PF balance) ಕಾಣಿಸುತ್ತದೆ. ನಿಮ್ಮ ಖಾತೆಗೆ (Account) ಎಷ್ಟು ಬಡ್ಡಿ (Interest) ಕ್ರೆಡಿಟ್ (Credit) ಆಗಿದೆ ಎಂಬುದು ಕೂಡ ತಿಳಿಯುತ್ತದೆ. ಇಪಿಎಫ್ ಒ ಐಡಿ ನಿಮ್ಮ ವೇತನ ಚೀಟಿಯಲ್ಲಿ (Salary Slip) ನಮೂದಾಗಿರುತ್ತದೆ.
ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ. ಮೇಲೆ ಹೇಳಿದ ಈ ಎಲ್ಲ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ UAN ಜೊತೆಗೆ ಬ್ಯಾಂಕ್ ಖಾತೆ (Bank account), ಆಧಾರ್ (Aadhaar), ಪ್ಯಾನ್ ಸಂಖ್ಯೆ (PAN number) ಲಿಂಕ್ (link) ಆಗಿರುವುದು ಅಗತ್ಯ.