ಮೆಟಲ್ ಡಿಟೆಕ್ಟರ್ ಸಹಾಯದಿಂದ ಮಿಲೇನಿಯರ್ ಆದ ಟಿಕ್ ಟಾಕರ್!

By Suvarna News  |  First Published Feb 10, 2024, 3:43 PM IST

ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ರೆ ಸಾಲದು, ಕೆಲಸವನ್ನು ಸ್ಮಾರ್ಟ್ ಆಗಿ ಮಾಡ್ಬೇಕು. ಆಗ್ಲೇ ಕೆಲಸ ಬೇಗ ಮುಗಿಯುವುದಲ್ಲದೆ ಹೆಚ್ಚಿನ ಲಾಭ ಸಿಗೋದು. ಈತ ಕೂಡ ತನ್ನ ಕೆಲಸದಲ್ಲಿ ಬುದ್ಧಿವಂತಿಕೆ ತೋರಿಸಿದ್ದಾನೆ. ಸಿಕ್ಕಿದ್ದನ್ನು ಮನೆಯಲ್ಲಿಟ್ಟುಕೊಳ್ಳದೆ ಮಾರಾಟ ಮಾಡಿ ಕೋಟ್ಯಾಧಿಪತಿ ಆಗಿದ್ದಾನೆ. 
 


ನಾವು ಯಾವುದೇ ಕೆಲಸ ಮಾಡಿದರೂ ಶೃದ್ಧೆ, ಸಮಾಧಾನದಿಂದ ಮಾಡಿದರೆ ಅದರಿಂದ ಒಳ್ಳೆಯ ಫಲ ದೊರೆಯುತ್ತೆ ಎಂದು ಹಿರಿಯರು ಹೇಳುತ್ತಾರೆ. ಕೆಲಸದ ಮೇಲೆ ನಮಗಿರುವ ನಿಷ್ಠೆ ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ. ನಮ್ಮ ಪರಿಶ್ರಮದ ಜೊತೆಗೆ ಅದೃಷ್ಟವೂ ಕೈ ಹಿಡಿದರೆ ಇಂದು ಬಡವನಾದವನು ನಾಳೆ ಕೋಟ್ಯಾಧಿಪತಿಯಾಗಬಹುದು. 

ಪ್ರಾಸ್ಪೆಕ್ಟರ್ ಎನ್ನುವ ವ್ಯಕ್ತಿ ಇದಕ್ಕೆ ಜೀವಂತ ಉದಾಹರಣೆಯಾಗಿದ್ದಾನೆ. ಈತ ತನ್ನ ಜೀವನದಲ್ಲಾದ ಆಶ್ಚರ್ಯಕರ ಘಟನೆಯ ಬಗ್ಗೆ ಟಿಕ್ ಟಾಕ್ (Tiktok) ನಲ್ಲಿ ಹೇಳಿಕೊಂಡಿದ್ದಾನೆ. ಪೆನ್ಸಿಲ್ವೇನಿಯಾದ ಮೆಟಲ್ ಡಿಟೆಕ್ಟರ್ (Metal detector) ಆಗಿರುವ ಪ್ರಾಸ್ಪೆಕ್ಟರ್ ತನ್ನ ವೃತ್ತಿ ಎಂದರೆ ಬಹಳ ಪ್ರೀತಿ. ಈತ ಯಾವಾಗಲೂ ಮೆಟಲ್ ಡಿಟೆಕ್ಟರ್ ಸಹಾಯದಿಂದ ಭೂಮಿ (land) ಯಲ್ಲಿ ಹೂತು ಹೋದ ನಿಧಿಯನ್ನು ಹುಡುಕುತ್ತಿದ್ದ. ಅನೇಕ ಬಾರಿ ಈತನಿಗೆ ಅಪರೂಪದ ಲೋಹ (metal) ಗಳು ಕೂಡ ದೊರಕಿವೆ. ಈತನ ಈ ಹವ್ಯಾಸ ಹಾಗೂ ಎಡಬಿಡದ ಪರಿಶ್ರಮವೇ ಮುಂದೆ ಈತನನ್ನು ಮಿಲೇನಿಯರ್ ಆಗಿಸಿದೆ.

Tap to resize

Latest Videos

ಬೀದಿಬದಿ ವ್ಯಾಪಾರಿಗಳಿಗೆ ವರದಾನ ಪಿಎಂ ಸ್ವನಿಧಿ ಯೋಜನೆ; ಈ ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?

ಅನುಪಯುಕ್ತ ಎಂದು ತಿಳಿದ ವಸ್ತು ಕೋಟಿ ಬೆಲೆ ಬಾಳುತ್ತಿತ್ತು : ಕೆಲವೊಮ್ಮೆ ನಮಗೇ ತಿಳಿಯದಂತೆ ಯಾವುದೋ ಒಂದು ಅಪರೂಪದ ವಸ್ತು ನಮ್ಮ ಕೈ ಸೇರುತ್ತದೆ. ಆ ಸಮಯದಲ್ಲಿ ಅದರ ಬೆಲೆ ನಮಗೆ ತಿಳಿದಿರುವುದಿಲ್ಲ. ಮೆಟಲ್ ಡಿಟೆಕ್ಟರ್ ಆಗಿರುವ ಪ್ರಾಸ್ಪೆಕ್ಟರ್ ಜೀವನದಲ್ಲಿಯೂ ಇಂತಹುದೇ ಒಂದು ಘಟನೆ ನಡೆಯಿತು. ಒಮ್ಮೆ ಆತ 1700ರ ದಶಕದಲ್ಲಿ ನಿರ್ಮಿಸಲಾದ ಮನೆಯನ್ನು ಉತ್ಖನನ ಮಾಡುತ್ತಿದ್ದ. ಎಂದಿನಂತೆ ಅವನು ಮೆಟಲ್ ಡಿಟೆಕ್ಟರ್ ಸಹಾಯದಿಂದ ಅಮೆರಿಕನ್ ನಾಣ್ಯಗಳನ್ನು ಹುಡುಕುತ್ತಿದ್ದ. ಅಂತಹ ಸಮಯದಲ್ಲಿ ಪ್ರಾಸ್ಪೆಕ್ಟರ್ ಗೆ ಸಿಕ್ಕ ಎರಡು ನಾಣ್ಯಗಳು ಬಹಳ ಅಪರೂಪದ ನಾಣ್ಯಗಳಾಗಿದ್ದವು. ಆತ ಅಂತಹ ನಾಣ್ಯಗಳನ್ನು ಈ ಮೊದಲು ಎಲ್ಲೂ ನೋಡಿರಲೇ ಇಲ್ಲ. ಆತನಿಗೆ ಅವುಗಳ ಬೆಲೆಯೂ ತಿಳಿದಿರಲಿಲ್ಲ.

ನಿಮ್ಮ ಪರ್ಸ್‌ಗೂ ಸಿಗುತ್ತೆ ವಿಮೆ; ಪಡೆಯೋದು ಹೇಗೆ?

ಒಂದು ನಾಣ್ಯ ಲಕ್ಷ ಬೆಲೆಗೆ ಹಾಗೂ ಮತ್ತೊಂದು ಕೋಟಿಗೆ ಮಾರಾಟವಾಗಿತ್ತು : ಮೆಟಲ್ ಡಿಟೆಕ್ಟರ್ ಸಹಾಯದಿಂದ ಪ್ರಾಸ್ಪೆಕ್ಟರ್ ನೆಲವನ್ನು ಅಗೆಯುತ್ತ ಹೋದಂತೆ ಆತನಿಗೆ ಪ್ರಾಚೀನ ಕಾಲದ ನಾಣ್ಯಗಳು ದೊರಕಿದವು. ಇದರಲ್ಲಿ ಒಂದು 1918ರ ಸ್ಟ್ಯಾಂಡಿಗ್ ಲಿಬರ್ಟಿ ಕ್ವಾರ್ಟರ್ ಚಿಕ್ಕ ನಾಣ್ಯವಾಗಿತ್ತು. ಈ ನಾಣ್ಯದಲ್ಲಿ ಹೆಚ್ಚಿನ ವಿವರಗಳು ಅಳಿಸಿಹೋಗಿದ್ದರೂ ಡೆನ್ವರ್ ನ “ಡಿ” ಮಿಂಟ್ ಮಾರ್ಕ್ ಸರಿಯಾಗಿ ಕಾಣಿಸುತ್ತಿತ್ತು. ನಂತರ ಇದನ್ನು ಹರಾಜಿಗೆ ಇಟ್ಟಾಗ ಈ ಚಿಕ್ಕ ನಾಣ್ಯ ಬರೋಬ್ಬರಿ 15.75 ಲಕ್ಷಕ್ಕೆ ಮಾರಾಟವಾಯ್ತು.

ಪ್ರಾಸ್ಪೆಕ್ಟರ್ ಗೆ ದೊರೆತ ಇನ್ನೊಂದು ನಾಣ್ಯ 1816ರ ಮ್ಯಾಟ್ರಾನ್ ಹೆಡ್ ಸೆಂಟ್ ಆಗಿತ್ತು. ಈ ನಾಣ್ಯ 3.12 ಕೋಟಿಗೆ ಹರಾಜಾಗಿತ್ತು. ಇದರ ಹೊರತಾಗಿ 1800ರ ನಾಣ್ಯ ಹಾಗೂ 1858ರ ಫ್ಲೈಯಿಂಗ್ ಈಗಲ್ ನಾಣ್ಯ 72000 ಡಾಲರ್ ಅಂದರೆ ಸುಮಾರು 59.75 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಈ ನಾಣ್ಯಗಳನ್ನು 1856-1858ರ ನಡುವೆ ಮುದ್ರಿಸಲಾಗಿದೆ ಮತ್ತು ಇದು ಅಮೆರಿಕ ದೇಶದ ‘ಎ’ ಮತ್ತು ‘ಎಮ್’ ಅಕ್ಷರವನ್ನು ಹೊಂದಿದೆ ಎನ್ನಲಾಗಿದೆ.

ಪ್ರಾಸ್ಪೆಕ್ಟರ್ ಗೆ ದೊರೆತ 1921ರ ಸೇಂಟ್ ಗೌಡೆನ್ಸ್ ಡಬಲ್ ಈಗಲ್ ಇತ್ತೀಚೆಗೆ 4.8 ಕೋಟಿ ರೂಪಾಯಿಗೆ ಹರಾಜಾಗಿದೆ. ಇದರ ಹೊರತಾಗಿ ಐದು ಮಿಲಿಯನ್ ಡಾಲರ್ ಬೆಲೆ ಬಾಳುವ ಬೆಳ್ಳಿಯ ಡಾಲರ್ ಕೂಡ ಮಾರಾಟವಾಗಿದೆ. ಈ ನಾಣ್ಯದಲ್ಲಿ ಲೇಡಿ ಲಿಬರ್ಟಿ ಮಧ್ಯ ಭಾಗದಲ್ಲಿರುವ ಹೇರ್ ಬ್ಯಾಂಡ್ ನಲ್ಲಿ ‘ಲಿಬರ್ಟಿ’ ಎಂಬ ಶಬ್ದವನ್ನು ಬರೆಯಲಾಗಿದೆ. ಇದರ ಸುತ್ತ ಹದಿಮೂರು ನಕ್ಷತ್ರಗಳಿದ್ದು ಅವು ಹದಿಮೂರು ವಸಾಹತುಗಳನ್ನು ಪ್ರತಿನಿಧಿಸುತ್ತವೆ.

click me!