ಸ್ವಂತ ಉದ್ಯೋಗ ಶುರು ಮಾಡುವ ಆಸೆ ಇದ್ರೂ ಯಾವುದನ್ನು ಮಾಡ್ಬೇಕು ಎಂಬ ಗೊಂದಲ ಬಹುತೇಕರಿಗೆ ಇರುತ್ತೆ. ಕಡಿಮೆ ಹೂಡಿಕೆ ಮಾಡಿ, ಹೆಚ್ಚಿನ ಹಣ ಸಂಪಾದನೆ ಮಾಡಬಹುದಾದ ಬ್ಯುಸಿನೆಸ್ ಐಡಿಯಾ ಇಲ್ಲಿದೆ.
ತಿಂಗಳು, ತಿಂಗಳು ಸಂಬಳ ತೆಗೆದುಕೊಂಡು, ಟೆನ್ಷನ್ ನಲ್ಲಿ ಕೆಲಸ ಮಾಡೋದು ಅನೇಕರಿಗೆ ಇಷ್ಟವಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಸ್ವಂತ ಉದ್ಯೋಗ ಶುರು ಮಾಡುವಂತೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ ಸಹಾಯ ಮಾಡ್ತಿದೆ. ನಾನಾ ಯೋಜನೆಯಡಿ ಸ್ವಂತ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ಕೂಡ ಸಿಗ್ತಿದೆ. ಸ್ವಂತ ಉದ್ಯೋಗದಲ್ಲಿ ಶ್ರಮ ಹೆಚ್ಚಿದ್ದರೂ ಮಾಡಿದ ಕೆಲಸಕ್ಕೆ ತಕ್ಕ ಫಲದ ಜೊತೆ ಸಂತೋಷ ಸಿಗುತ್ತದೆ ಎಂಬುದು ಅನೇಕರ ನಂಬಿಕೆ. ಇದೇ ಕಾರಣಕ್ಕೆ ಸಾಲ ಮಾಡಿಯಾದ್ರೂ ಒಂದು ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆಯನ್ನು ಜನರು ಮಾಡ್ತಾರೆ. ಇನ್ನು ಕೆಲವರಿಗೆ ಸ್ವಂತ ಕೆಲಸ ಶುರು ಮಾಡುವ ಆಸೆ ಇರುತ್ತದೆ. ಆದ್ರೆ ಯಾವುದು ಮಾಡ್ಬೇಕು ಎಂಬ ಗೊಂದಲ ಇರುತ್ತದೆ. ಎಲ್ಲಿ ನೋಡಿದ್ರೂ ಅಂಗಡಿ, ಶಾಪ್ ಗಳಿರುವ ಕಾರಣ ಯಾವುದನ್ನು ಆಯ್ಕೆ ಮಾಡಿಕೊಂಡ್ರೆ ಲಾಭ ಎಂಬುದು ಅವರಿಗೆ ತಿಳಿದಿರೋದಿಲ್ಲ. ಅಂಥವರಿಗೆ ಒಂದು ಒಳ್ಳೆ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ನೀವು ಇದನ್ನು ಶುರು ಮಾಡಿ, ಋತುವಿನಲ್ಲಿ ಮಾತ್ರವಲ್ಲ ಎಲ್ಲ ಸಮಯದಲ್ಲೂ ಹಣ ಸಂಪಾದನೆ ಮಾಡಬಹುದು. ಇದಕ್ಕೆ ಹೆಚ್ಚಿನ ಮಟ್ಟದ ಹೂಡಿಕೆ ಕೂಡ ಅಗತ್ಯವಿಲ್ಲ.
ಮದುವೆ (Marriage) ಋತುವಿನಲ್ಲಿ ಹೆಚ್ಚು ಬೇಡಿಕೆ ಇರುವ ಬ್ಯುಸಿನೆಸ್ (Business) ನಲ್ಲಿ ಕಾರ್ಡ್ (Card) ಮೇಕಿಂಗ್ ಕೂಡ ಒಂದು. ಮದುವೆ ಸಮಾರಂಭಕ್ಕಿಂತ ಮೊದಲು ಜನರು, ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಲು, ಕಾರ್ಡ್ ರೆಡಿ ಮಾಡ್ತಾರೆ. ಈಗ ಆನ್ಲೈನ್ ನಲ್ಲಿಯೇ ಕಾರ್ಡ್ ತಯಾರಿಸಿ, ವಾಟ್ಸ್ ಅಪ್, ಸಾಮಾಜಿಕ ಜಾಲತಾಣದಲ್ಲಿ ಸೆಂಡ್ ಮಾಡುವ ಆಯ್ಕೆ ಇದ್ದರೂ, ಅಧಿಕೃತವಾಗಿ ಕಾರ್ಡ್ ನೀಡುವ ಪದ್ಧತಿ ಈಗ್ಲೂ ಇದೆ. ಬರೀ ಮದುವೆ ಸಮಾರಂಭಕ್ಕೆ ಮಾತ್ರವಲ್ಲ ಬರ್ತ್ ಡೇ, ನಿವೃತ್ತಿ ಸಮಾರಂಭ, ವಿಶೇಷ ಸಮಾರಂಭಕ್ಕೂ ಕಾರ್ಡ್ ಸಿದ್ಧಪಡಿಸಲಾಗುತ್ತದೆ. ನೀವು ಕಾರ್ಡ್ ತಯಾರಿಸುವ ಬ್ಯುಸಿನೆಸ್ ಶುರು ಮಾಡಬಹುದು.
ಟ್ರಾಕ್ಟರ್ ರಾಣಿ ಎಂದೇ ಜನಪ್ರಿಯತೆ ಗಳಿಸಿರುವ ಭಾರತೀಯ ಮಹಿಳಾ ಉದ್ಯಮಿ ಈಕೆ; ಇವರ ಸಂಪತ್ತು ಎಷ್ಟು ಕೋಟಿ ಗೊತ್ತಾ?
ಆಕರ್ಷಕ ಕಾರ್ಡ್ ತಯಾರಿಸೋದು ಬಹಳ ಮುಖ್ಯ. ಕಾರ್ಡನ್ನು ಎಲ್ಲರೂ ತಯಾರಿಸ್ತಾರೆ. ಆದ್ರೆ ಕಾರ್ಡ್ ಎಷ್ಟು ಸುಂದರವಾಗಿದೆ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಕಲೆಯನ್ನು ಇದ್ರಲ್ಲಿ ಸೇರಿಸುವುದು ಮುಖ್ಯ. ಫ್ಯಾಷನ್ ಗೆ ತಕ್ಕಂತೆ ಕಾರ್ಡ್ ಡಿಸೈನ್ ಕೂಡ ಬದಲಾಗಬೇಕು. ಹೊಸತನಕ್ಕೆ ನೀವು ಅಪ್ಡೇಟ್ ಆಗೋದು ಒಳ್ಳೆಯದು.
ಕಾರ್ಡ್ ತಯಾರಿಸುವ ವ್ಯವಹಾರವನ್ನು ನೀವು ಕಡಿಮೆ ಹಣ ಹೂಡಿ ಶುರು ಮಾಡಬಹುದು. ಅದಕ್ಕೆ ಅಗತ್ಯವಿರುವ ಕಂಪ್ಯೂಟರ್, ಪ್ರಿಂಟರ್, ಕಾರ್ಡ್ ಮಶಿನ್ ಹಾಗೂ ಕವರ್ ಸೇರಿದಂತೆ ಕಚ್ಚಾ ವಸ್ತುವಿಗೆ ಹಣ ಹೂಡಬೇಕಾಗುತ್ತದೆ. ಒಂದು ಕಾರ್ಡ್ ಬೆಲೆ ಹತ್ತು ರೂಪಾಯಿ ಇರುತ್ತದೆ. ಕಾರ್ಡ್ ಕ್ವಾಲಿಟಿ ಹೆಚ್ಚಾದಂತೆ ಅದ್ರ ಬೆಲೆ ಕೂಡ ಹೆಚ್ಚಾಗುತ್ತದೆ. ಮದುವೆಯಲ್ಲಿ ಐದು ನೂರರಿಂದ ಒಂದು ಸಾವಿರದವರೆಗೆ ಕಾರ್ಡ್ ಅಗತ್ಯವಿರುತ್ತದೆ. ನೀವು ಒಂದು ಕಾರ್ಡ್ ಗೆ ಹತ್ತು ರೂಪಾಯಿ ಅಂತೆ ವ್ಯವಹಾರ ನಡೆಸಿದ್ರೂ ಎಲ್ಲ ಖರ್ಚು ಕಳೆದು ನಿಮಗೆ ಒಂದು ಕಾರ್ಡ್ ಗೆ ಮೂರರಿಂದ ಐದರಷ್ಟು ರೂಪಾಯಿ ಸಿಗುತ್ತದೆ.
ಬೀದಿಬದಿ ವ್ಯಾಪಾರಿಗಳಿಗೆ ವರದಾನ ಪಿಎಂ ಸ್ವನಿಧಿ ಯೋಜನೆ; ಈ ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?
ನೀವು ಕಾರ್ಡ್ ತಯಾರಿ ಬ್ಯುಸಿನೆಸ್ ಮನೆಯಲ್ಲೂ ಶುರು ಮಾಡಬಹುದು. ನೌಕರಿ ಮಾಡ್ತಾ, ಪಾರ್ಟ್ ಟೈಮ ಬ್ಯುಸಿನೆಸ್ ರೂಪದಲ್ಲೂ ಇದನ್ನು ಶುರು ಮಾಡಬಹುದು. ನೀವು ಬರೀ ಮದುವೆ, ಸಮಾರಂಭದ ಕಾರ್ಡ್ ಮಾಡಬೇಕಾಗಿಲ್ಲ. ವಿಸಿಟಿಂಗ್ ಕಾರ್ಡ್, ಪೋಸ್ಟರ್ ತಯಾರಿಸಿಯೂ ಹಣ ಸಂಪಾದನೆ ಮಾಡಬಹುದು. ನೀವು ಕಾರ್ಡ್ ಡಿಸೈನ್ ಗೆ ಸಂಬಂಧಿಸಿದಂತೆ ಹೆಚ್ಚು ಜ್ಞಾನ ಪಡೆದಲ್ಲಿ, ಅಗತ್ಯ ತರಬೇತಿ ಪಡೆದಲ್ಲಿ ನಿಮ್ಮ ವ್ಯವಹಾರವನ್ನು ಮತ್ತಷ್ಟು ಉನ್ನತಮಟ್ಟಕ್ಕೆ ಕೊಂಡೊಯ್ಯಬಹುದು.