8 ಡಾಲರ್ ಶುಲ್ಕ ನೀಡಿ ಬ್ಲೂಟಿಕ್ ಪಡೆದ ಕೆಲವರು, ಔಷಧ ಕಂಪನಿಗಳು ಸೇರಿ ಹಲವಾರು ಕಂಪನಿಗಳ ಹೆಸರಲ್ಲಿ ನಕಲಿ ಸಂದೇಶ ಹರಿಬಿಟ್ಟಿದ್ದಾರೆ. ಇದರಿಂದ ಕಂಗೆಟ್ಟ ಟ್ವಿಟ್ಟರ್, 8 ಡಾಲರ್ ಯೋಜನೆಗೆ ಸದ್ಯಕ್ಕೆ ಬ್ರೇಕ್ ಹಾಕಿದೆ.
ದೃಢೀಕೃತ ಚಂದಾದಾರರಾಗಿ ಬ್ಲೂ ಟಿಕ್ (Blue Tick) ಪಡೆಯಲು 8 ಡಾಲರ್ ನೀಡಬೇಕು ಎಂಬ ಯೋಜನೆಯನ್ನು ಚುಟುಕು ಸಾಮಾಜಿಕ ಮಾದ್ಯಮ ಟ್ವಿಟ್ಟರ್ (Twitter), ತಾತ್ಕಾಲಿಕವಾಗಿ ಶುಕ್ರವಾರ ರಾತ್ರಿ ಸ್ಥಗಿತಗೊಳಿಸಿದೆ (Suspended). ಅಮೆರಿಕ (United States of America) ಸೇರಿ ಆಯ್ದ ಪಾಶ್ಚಾತ್ಯ ದೇಶಗಳಲ್ಲಿ ಈ ಯೋಜನೆಯನ್ನು ಟ್ವಿಟ್ಟರ್ ಜಾರಿಗೆ ತಂದಿತ್ತು. ಮುಂದಿನ ತಿಂಗಳು ಭಾರತಕ್ಕೂ (India) ವಿಸ್ತರಿಸುವುದಾಗಿ ಹೇಳಿತ್ತು.
ಆದರೆ 8 ಡಾಲರ್ (Dollar) ಶುಲ್ಕ ನೀಡಿ ಬ್ಲೂಟಿಕ್ ಪಡೆದ ಕೆಲವರು, ಔಷಧ ಕಂಪನಿಗಳು ಸೇರಿ ಹಲವಾರು ಕಂಪನಿಗಳ ಹೆಸರಲ್ಲಿ ನಕಲಿ ಸಂದೇಶ (Fake Message) ಹರಿಬಿಟ್ಟಿದ್ದಾರೆ. ಇದರಿಂದ ಕಂಗೆಟ್ಟ ಟ್ವಿಟ್ಟರ್, 8 ಡಾಲರ್ ಯೋಜನೆಗೆ ಸದ್ಯಕ್ಕೆ ಬ್ರೇಕ್ ಹಾಕಿದೆ. ಹಾಗೆಯೇ, ಪ್ರತಿಷ್ಠಿತರ ಅಧಿಕೃತ ಖಾತೆಗೆ ಬ್ಲೂಟಿಕ್ ಜತೆಗೆ ‘ವೆರಿಫೈಡ್’ (Verified) ಎಂದೂ ಬರೆಯಲಾಗುತ್ತಿತ್ತು. ಅದನ್ನೂ ಕೆಲ ಕಾಲ ನಿಲ್ಲಿಸಿತ್ತು.
ಇದನ್ನು ಓದಿ: Twitter ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್..!
ಪ್ರಮುಖ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲಿ ಬಳಕೆದಾರ ಖಾತೆಗಳ ಸಮಸ್ಯೆಯನ್ನು ಎದುರಿಸಲು ಈ ವಾರದ ಆರಂಭದಲ್ಲಿ ಟ್ವಿಟರ್‌ನಲ್ಲಿ ಚಂದಾದಾರಿಕೆಯ ನಿರ್ಧಾರ ಮಾಡಲಾಗಿತ್ತು. ಆದರೆ, 8 ಡಾಲರ್ ಶುಲ್ಕ ನೀಡಿದ ಬಳಿಕವೂ ಈಗ ಮತ್ತೆ ನಕಲಿ ಖಾತೆಗಳನ್ನು ತೆರೆದ ಘಟನೆಗಳು ಬೆಳಕಿಗೆ ಬಂದ ನಂತರ ಟ್ವಿಟ್ಟರ್ ಬ್ಲೂಟಿಕ್‌ಗೆ ಶುಲ್ಕದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡಿದೆ.
ಮನರಂಜನೆ, ರಾಜಕೀಯ, ಪತ್ರಿಕೋದ್ಯಮ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಪ್ರಸಿದ್ಧ ವ್ಯಕ್ತಿಗಳಿಗೆ ಮೊದಲು ಬ್ಲೂಟಿಕ್ ವೆರಿಫಿಕೇಶನ್ ಬ್ಯಾಡ್ಜ್ ನೀಡಲಾಗಿತ್ತು. ಆದರೆ ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ, ಕಂಪನಿಯು ಪರಿಶೀಲನೆ ನೀತಿಗೆ ತಿದ್ದುಪಡಿ ಮಾಡಲು ನಿರ್ಧರಿಸಿತು ಮತ್ತು 8 ಡಾಲರ್ ಪಾವತಿಸಲು ಸಿದ್ಧರಿರುವ ಯಾರಿಗಾದರೂ ಪರಿಶೀಲನೆ ಲೇಬಲ್ ಆಧ ಬ್ಲೂಟಿಕ್ ನೀಡಲು ನಿರ್ಧಾರ ಮಾಡಿತ್ತು.
ಇದನ್ನೂ ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್ ಮಸ್ಕ್ ಘೋಷಣೆ
ಆದರೆ, ಈ ಸಬ್‌ಸ್ಕ್ರಿಪ್ಷನ್ ಪ್ರಾರಂಭದ ನಂತರ, ಎಲೋನ್ ಮಸ್ಕ್ ಅವರ ಸ್ವಂತ ಕಂಪನಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸೇರಿದಂತೆ ಹಲವಾರು ನಕಲಿ ಖಾತೆಗಳು ಬ್ಲೂ ಟಿಕ್‌ನೊಂದಿಗೆ ಕಾಣಿಸಿಕೊಂಡವು. ನಕಲಿ ಖಾತೆಯೊಂದು "ಇನ್ಸುಲಿನ್ ಉಚಿತ" ಎಂದು ಟ್ವೀಟ್ ಮಾಡಿದ್ದು, ಇದರಿಂದ ವಿಶ್ವದ ಅತಿದೊಡ್ಡ ಔಷಧೀಯ ಕಂಪನಿ ಎಲಿ ಲಿಲ್ಲಿ & ಕಂಪನಿ ಅದು ನಕಲಿ ಖಾತೆಯೆಂದು ಸ್ಪಷ್ಟನೆ ನೀಡಿ ಕ್ಷಮೆಯನ್ನೂ ಕೋರಿದೆ.
ಇನ್ನು, ನಕಲಿ ಖಾತೆಗಳನ್ನು ಎದುರಿಸಲು, ನಾವು ಕೆಲವು ಖಾತೆಗಳಿಗೆ 'ಅಧಿಕೃತ' ಲೇಬಲ್ ಅನ್ನು ಸೇರಿಸಿದ್ದೇವೆ ಎಂದು ಟ್ವಿಟ್ಟರ್ ಸಪೋರ್ಟ್ ಎಂಬ ಖಾತೆ ಶುಕ್ರವಾರ ಟ್ವೀಟ್ ಮಾಡಿದೆ. ಅದೇ ರೀತಿ, ವಿಡಂಬನೆಯಲ್ಲಿ ತೊಡಗಿರುವ ಎಲ್ಲಾ ಖಾತೆಗಳು ತಮ್ಮ ಹೆಸರಿನಲ್ಲಿ ‘’ಪರೋಡಿ’’ ಎಂದು ಸೇರಿಸಬೇಕು, ಕೇವಲ ಬಯೋದಲ್ಲಿ ಅಲ್ಲ ಎಂದೂ ಎಲಾನ್ ಮಸ್ಕ್ ಅದೇ ದಿನ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್ ಮಸ್ಕ್ ಪ್ಲ್ಯಾನ್..!
ಆದರೆ, ಟ್ವಿಟ್ಟರ್ ಮೂಲದ ಪ್ರಕಾರ ಉನ್ನತ-ಪ್ರೊಫೈಲ್ ಖಾತೆಗಳಿಗಾಗಿ ಅಧಿಕೃತ ಬ್ಯಾಡ್ಜ್‌ಗಳನ್ನು ಟ್ವಿಟ್ಟರ್ ಮರಳಿ ತಂದಿದೆ ಎಂದು ಹೇಳಿದ್ದಾರೆ. ಆಂತರಿಕ ಅನುಮೋದಿತ ಪಟ್ಟಿಯನ್ನು ಆಧರಿಸಿ ಕಂಪನಿಗಳು ಮತ್ತು ಗಮನಾರ್ಹ ಮಾಧ್ಯಮ ಸೈಟ್‌ಗಳ ಪ್ರೊಫೈಲ್‌ಗಳ ಕೆಳಗೆ ಬೂದು ಬಣ್ಣದ ಬ್ಯಾಡ್ಜ್ ಶುಕ್ರವಾರ ಮತ್ತೆ ಕಾಣಿಸಿಕೊಂಡಿದೆ. ಗುರುತಿನ ಟ್ಯಾಗ್ ಅನ್ನು ಈ ವಾರದ ಆರಂಭದಲ್ಲಿ ಅಳವಡಿಸಲಾಗಿತ್ತಾದರೂ, ಅದನ್ನು ಮತ್ತೆ ತೆಗೆದುಹಾಕಿತ್ತು. ಆದರೀಗ, ಕೆಲವು ಖಾತೆಗಳಿಗೆ ಮತ್ತೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ಎಲಾನ್ ಮಾಸ್ಕ್ ಟ್ವಿಟ್ಟರ್ ಸಿಬ್ಬಂದಿಗೆ ವಾರಕ್ಕೆ 80 ಗಂಟೆ ಕೆಲಸ ಮಾಡಲು ಸೂಚಿಸಿದೆ. ಅಲ್ಲದೆ, ಉಚಿತ ಊಟ - ತಿಂಡಿ ಸೌಲಭ್ಯವನ್ನೂ ಕಡಿತಗೊಳಿಸಿದೆ.
ಇದನ್ನೂ ಓದಿ: Twitter ಭಾಗವಾಗಿಲ್ಲ ಎಂದು ಪರಾಗ್ ಅಗರ್ವಾಲ್ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?