Bengaluru: ಕನೆಕ್ಟ್ ಕರ್ನಾಟಕ ಎಕ್ಸ್‌ಪೋಗೆ ಚಾಲನೆ ನೀಡಿದ ಸಚಿವ ಅಶ್ವತ್ಥ್‌

By Govindaraj S  |  First Published Nov 12, 2022, 11:59 AM IST

ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭ, ಇಂಡ್‌ ವೇಲ್ಸ್‌ ಕಂಪನಿಯ ಸಹಯೋಗದಲ್ಲಿ ಕನೆಕ್ಟ್ ಕರ್ನಾಟಕ ಎಕ್ಸ್ ಪೋ ಇಂದಿನಿಂದ ಆರಂಭಗೊಂಡಿದ್ದು, ಸಚಿವ ಅಶ್ವಥ್ ನಾರಾಯಣ ಚಾಲನೆ ನೀಡಿದ್ದಾರೆ.


ಬೆಂಗಳೂರು (ನ.12): ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭ, ಇಂಡ್‌ ವೇಲ್ಸ್‌ ಕಂಪನಿಯ ಸಹಯೋಗದಲ್ಲಿ ಕನೆಕ್ಟ್ ಕರ್ನಾಟಕ ಎಕ್ಸ್ ಪೋ ಇಂದಿನಿಂದ ಆರಂಭಗೊಂಡಿದ್ದು, ಸಚಿವ ಅಶ್ವಥ್ ನಾರಾಯಣ ಚಾಲನೆ ನೀಡಿದ್ದಾರೆ. ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ 4ರಲ್ಲಿ ಎಕ್ಸ್ ಪೋ ಆಯೋಜನೆಗೊಂಡಿದ್ದು, ಬೃಹತ್ ಫ್ರ್ಯಾಂಚಾಯ್ಸಿಗಳ  ಮತ್ತು ಉತ್ಪಾದಕರ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಎಕ್ಸ್‌ಪೋ ನಲ್ಲಿ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. MSME ಇಲಾಖೆ ಹಾಗೂ KIADB ಸಹಯೋಗದಲ್ಲಿ ಆಯೋಜನೆಗೊಂಡಿದ್ದು, ಎಕ್ಸ್ ಪೋ ಎರಡು ದಿನ ನಡೆಯಲಿದೆ. ಇದರಲ್ಲಿ ಡೀಲರ್‌ಶಿಪ್, ಬಿಸಿನೆಸ್, ಪ್ರಾಂಚೈಸಿ, ಬಗ್ಗೆ ಮಾಹಿತಿ ನೀಡಲಾಗುತ್ತದೆ. 

ಹಲವು ಗೋಷ್ಠಿ ಆಯೋಜನೆ: ಎರಡು ದಿನ ನಡೆಯುವ ಈ ಎಕ್ಸ್‌ಪೋದಲ್ಲಿ ಬ್ಯಾಂಕರ್ಸ್‌, ಫ್ರಾಂಚೈಸಿ ಓನರ್‌, ಡಿಸ್ಟ್ರಿಬ್ಯೂಟರ್ಸ್‌, ಟ್ರೇಡರ್ಸ್‌, ಜಿಎಸ್‌ಟಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನ.12ರಂದು ಬೆಳಗ್ಗೆ 11.30ರಿಂದ 11.45ರವರೆಗೂ ಬಿಎನ್‌ಐ ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಅನಂತರಾಮ್‌ ವರಯೂರ್‌ ಅವರು ‘ಕನೆಕ್ಟ್ ಕರ್ನಾಟಕ ಮಹತ್ವ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಣ್ಣ, ಅತಿಸಣ್ಣ, ಸೂಕ್ಷ್ಮ ಉದ್ದಿಮೆಗಳ ಸಂಸ್ಥೆ ಐಇಡಿಎಸ್‌ ಉಪ ನಿರ್ದೇಶಕ ಆರ್‌.ಗೋಪಿನಾಥ್‌ ರಾವ್‌ ಅವರು ‘ಉದ್ದಿಮೆಗಳಿಗೆ ಎಂಎಸ್‌ಎಂಇ ಯೋಜನೆ’ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.

Tap to resize

Latest Videos

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ಬಳಿಕ ಆರ್ಥಿಕತೆಯ ಬಗ್ಗೆ ಮಹದೇವ್‌ ಚಿಕ್ಕಣ್ಣ ವಿವರಿಸಲಿದ್ದು, ಕೈಗಾರಿಕೆಗಳ ಸ್ಥಿತಗತಿ ಕುರಿತು ಫಾಲ್ಕಾನ್‌ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್‌ ಸುಹಾನ್‌ ಮಾಹಿತಿ ನೀಡಲಿದ್ದಾರೆ. ಕರ್ನಾಟಕ ವಿತರಕರ ಸಂಘದಿಂದ ಸಮೂಹ ಚರ್ಚೆ ನಡೆಯಲಿದೆ. ತಮ್ಮಲ್ಲಿನ ವ್ಯಾಪಾರದ ಅವಕಾಶಗಳ ಬಗ್ಗೆ ವಿತರಕರು ಮಾಹಿತಿ ನೀಡಲಿದ್ದಾರೆ. ವ್ಯಾಪಾರದಲ್ಲಿ ಡಿಜಿಟಲೀಕರಣ ಕುರಿತು ಪ್ರೊ.ಕುಮೈಲ್‌ ಕಿರ್ಮಾನಿ ಉಪನ್ಯಾಸ ನೀಡಲಿದ್ದಾರೆ. ವ್ಯಾಪಾರದಲ್ಲಿನ ಹೊಸ ಟ್ರೆಂಡ್‌ಗಳ ಬಗ್ಗೆ ಗ್ರೋಥ್‌ ಹ್ಯಾಕಿಂಗ್‌ನ ಡಾ.ಬಾಲ ಮುರುಗನ್‌ ಹಾಗೂ ಹೊಸ ಟ್ರೆಂಡ್‌ಗಳ ಕೌಶಲದ ಬಗ್ಗೆ ಬಗ್ಗೆ ಸ್ಪೀಕ್‌ ಕಾರ್ಪೊರೇಟ್‌ ಸವೀರ್ಸ್‌ನ ಶಂತನ್‌ ಮಾಲಶೆಟ್ಟರ್‌ ಉಪನ್ಯಾಸ ನೀಡಲಿದ್ದಾರೆ.

ಇವಿ ಬೈಕ್‌ ಗೆಲ್ಲುವ ಅವಕಾಶ: ಎಂಎಸ್‌ಎಂಇ ಇಲಾಖೆ ಹಾಗೂ ಕೆಐಎಡಿಬಿ ಸಹಯೋಗದಲ್ಲಿ ಎಕ್ಸ್‌ಪೋ ಆಯೋಜಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಎಕ್ಸ್‌ಪೋಗೆ ಭೇಟಿ ನೀಡಿ ಲಕ್ಕಿ ಡ್ರಾದಲ್ಲಿ ಪಾಲ್ಗೊಂಡರೆ ಅತಿಯಾಸ್‌ ಇ-ಬೈಕ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನೂರಾರು ಉದ್ಯಮಿಗಳು ಡೀಲರ್‌ಗಳನ್ನು ಹುಡುಕುತ್ತಿರುತ್ತಾರೆ. ಮತ್ತೊಂದೆಡೆ ಡೀಲರ್‌ಶಿಪ್‌ ಪಡೆಯಬೇಕು ಎನ್ನುವವರಿಗೂ ಇದು ಸೂಕ್ತ ವೇದಿಕೆಯಾಗಿದೆ.

ಯಾವ್ಯಾವ ಕಂಪನಿಗಳು ಭಾಗಿ?: ಶಶಿ ಸೋಫ್ಸ್‌, ಇಂಡಸ್‌ ತ್ರಿಪಲ್‌ ಫೈವ್‌ ಡಿ ಟಿಎಂಟಿ, ಸ್ಪಶ್‌ರ್‍ ಮಸಾಲಾ, ಬಾಯರ್ಸ್‌ ಕಾಫಿ, ಐಯ್ಯಂಗಾರ್‌ ಪುಳಿಯೊಗರೆ, ಅತಿಯಾಸ್‌ ಇವಿ ಬೈಕ್ಸ್‌, ಕೆಎಂಎಫ್‌ ನಂದಿನಿ, ಭಾಗ್ಯಲಕ್ಷ್ಮಿ ಟ್ರೇಡರ್ಸ್‌, ಅಮೃತ್‌ ಬಿಂದು, ಸುಭಾಸ್‌ ಇವಿಎಸ್‌, ಟ್ಯಾಲಿ, ಮೈ ಬಿಲ್‌ ಬುಕ್‌, ದೀಪಂ ಆಯಿಲ್‌, ಇಂದಿರಾ ಫುಡ್ಸ್‌ ಸೇರಿದಂತೆ ನೂರಾರು ಕಂಪನಿಗಳು ಎಕ್ಸ್‌ಪೋದಲ್ಲಿ ಭಾಗವಹಿಸಲಿವೆ.

ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ

ಮಾಹಿತಿಗೆ ಸಂಪರ್ಕಿಸಿ: ‘ಕನೆಕ್ಟ್ ಕರ್ನಾಟಕ’ ಎ ಮೆಗಾ ಮ್ಯಾನ್ಯುಫಾಕ್ಚರರ್ಸ್‌ ಆ್ಯಂಡ್‌ ಫ್ರಾಂಚೈಸಿ ಎಕ್ಸಪೋ ಕುರಿತ ಹೆಚ್ಚಿನ ಮಾಹಿತಿಗೆ 78920 23434, 99865 65888, 8971 519734 ಸಂಪರ್ಕಿಸಬಹುದು.

click me!