ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು

Published : Jun 18, 2024, 08:02 PM IST
ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು

ಸಾರಾಂಶ

ಟಾಟಾ ಮೋಟಾರ್ಸ್ 2023-24 ಆರ್ಥಿಕ ವಾರ್ಷಿಕ ಆದಾಯ 52.44 ಕೋಟಿ ಡಾಲರ್ (4.38 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಟಾಟಾ ಮೋಟಾರ್ಸ್ ಮಾತ್ರವಲ್ಲದೇ ಎಲಾನ್ ಮಸ್ಕ್ ಅವರ ಆದಾಯ ಹೆಚ್‌ಪಿಸಿಎಲ್ 52.09 ಶತಕೋಟಿ ಡಾಲರ್, ರಾಜೇಶ್ ಎಕ್ಸ್‌ಪೋರ್ಟ್ 37.48 ಶತಕೋಟಿ ಡಾಲರ್, ಟಿಸಿಎಸ್‌ 29.04 ಶತಕೋಟಿ ಡಾಲರ್ ಕಂಪನಿಗಳತ್ತ ಹೆಚ್ಚಾಗಿದೆ.

ನವದೆಹಲಿ: ಟೆಸ್ಲಾ ಶೇರುದಾರರ ಸಭೆಯಲ್ಲಿ ಸಿಇಒ ಎಲಾನ್ ಮಸ್ಕ್ (Elon Musk) ಅವರ ಸಂಬಳವನ್ನು ಅನುಮೋದಿಸಲಾಗಿದೆ. ಎರಡನೇ ಬಾರಿಗೆ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಿಗೆ ವಾರ್ಷಿಕ 56 ಬಿಲಿಯನ್ ಡಾಲರ್ (4.67 ಲಕ್ಷ ಕೋಟಿ ರೂ) ಒಪ್ಪಿಗೆ ನೀಡಲಾಗಿದೆ. ಎಲಾನ್ ಮಸ್ಕ್ ಪ್ಯಾಕೇಜ್ ಮೊತ್ತ 2023-24 ಸಾಲಿನ ಟಾಟಾ ಮೋಟಾರ್ಸ್ ಆದಾಯಕ್ಕಿಂತ ಹೆಚ್ಚಾಗಿದೆ. ಟಾಟಾ ಮೋಟಾರ್ಸ್ 2023-24 ಆರ್ಥಿಕ ವಾರ್ಷಿಕ ಆದಾಯ 52.44 ಕೋಟಿ ಡಾಲರ್ (4.38 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಟಾಟಾ ಮೋಟಾರ್ಸ್ ಮಾತ್ರವಲ್ಲದೇ ಎಲಾನ್ ಮಸ್ಕ್ ಅವರ ಆದಾಯ ಹೆಚ್‌ಪಿಸಿಎಲ್ 52.09 ಶತಕೋಟಿ ಡಾಲರ್, ರಾಜೇಶ್ ಎಕ್ಸ್‌ಪೋರ್ಟ್ 37.48 ಶತಕೋಟಿ ಡಾಲರ್, ಟಿಸಿಎಸ್‌ 29.04 ಶತಕೋಟಿ ಡಾಲರ್ ಕಂಪನಿಗಳತ್ತ ಹೆಚ್ಚಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ (RIL) (108.62 ಶತಕೋಟಿ ಡಾಲರ್), ಭಾರತೀಯ ಜೀವ ವಿಮಾ ನಿಗಮ (LIC) (96.10 ಶತಕೋಟಿ ಡಾಲರ್), ಇಂಡಿಯನ್ ಆಯಿಲ್ (IOC) (93.84 ಶತಕೋಟಿ ಡಾಲರ್) ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) (77.54 ಶತಕೋಟಿ ಡಾಲರ್) ಈ ಕಂಪನಿಗಳಿಗಿಂತ ಕಡಿಮೆಯಾಗಿದೆ.

ಎರಡನೇ ಬಾರಿಗೆ ದೊಡ್ಡ ಮೊತ್ತಕ್ಕೆ ಅನುಮೋದನೆ ನೀಡಿದ ಹಿನ್ನೆಲೆ ಎಲಾನ್ ಮಸ್ಕ್ ಕಂಪನಿ ತೊರೆಯುವ ಸಾಧ್ಯತೆಗಳು ಎಂದು ಮಾರುಕಟ್ಟೆ  ತಜ್ಞರು ವಿಶ್ಲೇಷಣೆ ಮಾಡುತ್ತಾರೆ. ಎಲಾನ್ ಮಸ್ಕ್ ಅವರ 56 ಬಿಲಿಯನ್ ಡಾಲರ್ ಪ್ಯಾಕೇಜ್‌ನಲ್ಲಿ ಟೆಸ್ಲಾ ಕಂಪನಿಯ ಆದಾಯ ಮತ್ತು ಮುಂದಿನ ಆರ್ಥಿಕ ವರ್ದ ಲಾಭಂಶವನ್ನು ಒಳಗೊಂಡರುತ್ತದೆ. ಸತತ ನಾಲ್ಕು ಹಣಕಾಸು ತ್ರೈಮಾಸಿಕಗಳಲ್ಲಿ ಟೆಸ್ಲಾ ಕಂಪನಿಯ ಗರಿಷ್ಠ ಆದಾಯದ ಗುರಿಯನ್ನು $ 175 ಬಿಲಿಯನ್‌ಗೆ ನಿಗದಿಪಡಿಸಲಾಗಿದೆ.

ಸ್ಪೂರ್ತಿ ಕತೆ; ಅಂದು 500 ರೂ. ಸಾಲ ಪಡೆದಿದ್ದ ಈಕೆ ಇಂದು 5 ಕೋಟಿ ವ್ಯವಹಾರ ನಡೆಸುವ ಕಂಪನಿ ಒಡತಿ!

ಎಲಾನ್ ಮಸ್ಕ್ ಸಂಭಾವನೆಗೆ ವಿಶ್ವಾಸಮತ ಸಿಕ್ಕರೂ, ಟೆಸ್ಲಾ ಕಂಪನಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಳೆದ ಕೆಲ ತ್ರೈಮಾಸಿಕಗಳಲ್ಲಿ ಕಂಪನಿಯ ಮಾರಾಟ ಕುಸಿದಿದೆ. 2024ರ ಮೊದಲ ತ್ರೈಮಾಸಿಕದ ಫಲಿತಾಂಶಗಳ ಮಾಹಿತಿಯ ಪ್ರಕಾರ, ಟೆಸ್ಲಾ ಕಂಪನಿಯ ಒಟ್ಟು ಆದಾಯವು 8.7% ರಷ್ಟು ಕುಸಿದಿದೆ. $2,33,290 ರಿಂದ $2,13,010ಕ್ಕೆ ಇಳಿಕೆಯಾಗಿದೆ. ಈವರೆಗೆ ಟೆಸ್ಲಾ ಶೇರುಗಳ ಮೌಲ್ಯ ಶೇ.25ರಷ್ಟು ಕುಸಿದಿವೆ. ಕಳೆದ ವರ್ಷ ಈ ಕುಸಿತ ಶೇ.32ರಷ್ಟು ಕುಸಿತವಾಗಿತ್ತು.

ಸುಂದರ್ ಪಿಚೈ ಅತಿ ಹೆಚ್ಚು ಸಂಭಾವನೆ ಪಡೆಯೋ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಸುಂದರ್ ಪಿಚೈ 2022ರಲ್ಲಿ 226 ಮಿಲಿಯನ್ ಡಾಲರ್ ಪ್ಯಾಕೇಜ್ ಪಡೆದುಕೊಂಡಿದ್ದರು ಬ್ರಾಡ್‌ಕಾಮ್‌ನ ಹಾಕ್ ಟಾನ್ 161.83 ಮಿಲಿಯನ್ ಡಾಲರ್ ಮತ್ತು ಆಪಲ್‌ನ ಟಿಮ್ ಕುಕ್ 63.21 ಮಿಲಿಯನ್ ಡಾಲರ್ ಪಡೆದುಕೊಂಡಿದ್ದರು.

Youtubeನಲ್ಲಿ ಹಣ ಗಳಿಸೋದು ಅಂದು ಕೊಂಡಷ್ಟು ಈಸಿ ಅಲ್ಲ, ಹೀಗ್ ಮಾಡಿ ನೋಡಿ!

ಟಾಟಾ ಮೋಟಾರ್ಸ್‌ನ ಆರ್ಥಿಕ ಸಾಧನೆ

ಟಾಟಾ ಮೋಟಾರ್ಸ್ 2023-24ರ ಆರ್ಥಿಕ ವರ್ಷದಲ್ಲಿ 4,37,900 ಕೋಟಿ ರೂಪಾಯಿ(52.44 ಶತಕೋಟಿ ಡಾಲರ್) ಆದಾಯ ಹೊಂದಿರೋದಾಗಿ ಘೋಷಿಸಿಕೊಂಡಿತ್ತು. ಇದೇ ವರ್ಷದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 62,800 ಕೋಟಿ ರೂಪಾಯಿ (7.52 ಬಿಲಿಯನ್ ಡಾಲರ್) ಮತ್ತು  31,800 ಕೋಟಿ ರೂಪಾಯಿ (3.8 ಶತಕೋಟಿ ಡಾಲರ್) ನಿವ್ವಳ ಲಾಭ ಗಳಿಸಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!