84 ಸಾವಿರ ಕೋಟಿಗೆ OpenAI ಖರೀದಿ ಪ್ರಸ್ತಾಪ ಮುಂದಿಟ್ಟ ಮಸ್ಕ್‌, 'ಎಕ್ಸ್‌ನ ಮಾರಾಟ ಮಾಡ್ತೀರಾ ಹೇಳಿ' ಎಂದ ಆಲ್ಟ್‌ಮನ್‌!

Published : Feb 11, 2025, 12:51 PM IST
84 ಸಾವಿರ ಕೋಟಿಗೆ OpenAI ಖರೀದಿ ಪ್ರಸ್ತಾಪ ಮುಂದಿಟ್ಟ ಮಸ್ಕ್‌, 'ಎಕ್ಸ್‌ನ ಮಾರಾಟ ಮಾಡ್ತೀರಾ  ಹೇಳಿ' ಎಂದ ಆಲ್ಟ್‌ಮನ್‌!

ಸಾರಾಂಶ

ಎಲಾನ್‌ ಮಸ್ಕ್‌ ಓಪನ್‌ಎಐಅನ್ನು 84,600 ಕೋಟಿ ರೂ.ಗೆ ಖರೀದಿಸಲು ಮುಂದಾಗಿದ್ದಾರೆ. ಆದರೆ, ಓಪನ್‌ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಈ ಆಫರ್‌ಅನ್ನು ತಿರಸ್ಕರಿಸಿದ್ದಾರೆ. ಮಸ್ಕ್‌ ಓಪನ್‌ಎಐ ಅನ್ನು ಮತ್ತೆ ಲಾಭರಹಿತ ಸಂಶೋಧನಾ ಪ್ರಯೋಗಾಲಯವನ್ನಾಗಿ ಮಾಡಲು ಬಯಸಿದ್ದಾರೆ.

ನ್ಯೂಯಾರ್ಕ್‌ (ಫೆ.11): ಟೆಸ್ಲಾ ಮಾಲೀಕ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌, ವಿಶ್ವದ ಅತ್ಯಂತ ಪ್ರಖ್ಯಾತ ಕೃತಕ ಬುದ್ದಿಮತ್ತೆ ಕಂಪನಿಯಾಗಿರುವ ಓಪನ್‌ಎಐಅನ್ನು ಖರೀದಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಕಂಪನಿಯ ಮಾಲೀಕರಾಗಿರುವ ಸ್ಯಾಮ್‌ ಆಲ್ಟ್‌ಮನ್‌ ಒಪ್ಪಿದರೆ 9.74 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ ಬರೋಬ್ಬರಿ 84,600 ಕೋಟಿ ರೂಪಾಯಿಗೆ ಓಪನ್‌ಎಐಅನ್ನು ಖರೀದಿ ಮಾಡುವುದಾಗಿ ತಿಳಿಸಿದ್ದಾರೆ. ಎಲಾನ್‌ ಮಸ್ಕ್‌ ಅವರ ಎಐ ಕಂಪನಿ ಎಕ್ಸ್‌ಎಐ ಹಾಗೂ ಅದರ ಹೂಡಿಕೆದಾರರಾಗಿರುವ ವಾಲೋರ್‌ ಈಕ್ವಿಟಿ ಪಾರ್ಟ್‌ನರ್ಸ್‌, ಬಾರನ್‌ ಕ್ಯಾಪಿಟಲ್‌ ಕೂಡ ಈ ಅಫರ್‌ ಮಾಡಿದೆ. ಆದರೆ, ಮಸ್ಕ್‌ ಅವರ ಆಫರ್‌ಅನ್ನು ಓಪನ್‌ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಆಲ್ಟ್‌ ಮನ್‌, 'ನೋ ಥ್ಯಾಂಕ್ಸ್‌. ಹಾಗೇನಾದರೂ ನಿಮಗೆ (ಮಸ್ಕ್‌)ಸಾಧ್ಯವಾದರೆ, ಟ್ವಿಟರ್‌ಅನ್ನು (ಈಗ ಎಕ್ಸ್‌) ಇಷ್ಟೇ ಮೊತ್ತಕ್ಕೆ ನಾವು ಖರೀದಿ ಮಾಡುತ್ತೇವೆ' ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಎಲಾನ್‌ ಮಸ್ಕ್‌, ಆಲ್ಟ್‌ಮನ್‌ರನ್ನು 'ಸ್ಕ್ಯಾಮ್‌ ಆಲ್ಟ್‌ಮನ್‌' ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಲಾನ್‌ ಮಸ್ಕ್‌ ಓಗ ಓಪನ್‌ಎಐ ಅನ್ನೋದು ಓಪನ್‌-ಸೋರ್ಸ್‌, ಸೇಫ್ಟಿ ಫೋಕಸ್‌ ಆಗಿರುವ ಫೋರ್ಸ್‌ ಆಗಿ ಬದಲಾಗಬೇಕು. ಇದು ಸಾಧ್ಯವಾಗಲಿದೆ ಅನ್ನೋ ಭರವಸೆ ನಾನು ನೀಡುತ್ತದೆ. ಈ ಸ್ವಾಧೀನದ ಮೂಲಕ ಮಸ್ಕ್ ಓಪನ್‌ಎಐ ಅನ್ನು ಮತ್ತೆ ಲಾಭರಹಿತ ಸಂಶೋಧನಾ ಪ್ರಯೋಗಾಲಯವನ್ನಾಗಿ ಮಾಡಲು ಬಯಸಿದ್ದಾರೆ.ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಸೋಮವಾರ ಮಸ್ಕ್ ಅವರ ವಕೀಲ ಮಾರ್ಕ್ ಟೊಬೆರಾಫ್ ಮೂಲಕ ಓಪನ್‌ಎಐ ಮಂಡಳಿಗೆ ಈ ಪ್ರಸ್ತಾಪವನ್ನು ನೀಡಲಾಯಿತು.

ಎಲಾನ್‌ ಮಸ್ಕ್‌ರೊಂದಿಗೆ ಓಪನ್‌ಎಐ ಆರಂಭಿಸಿದ್ದ ಆಲ್ಟ್‌ಮನ್‌: ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್‌ಮನ್ 2015 ರಲ್ಲಿ ಓಪನ್‌ಎಐ ಅನ್ನು ಸ್ಥಾಪಿಸಿದರು, ಆದರೆ ಮಸ್ಕ್ 2018 ರಲ್ಲಿ ಇದನ್ನು ತೊರೆದಿದ್ದರು. 2023 ರಲ್ಲಿ, ಮಸ್ಕ್ ಓಪನ್‌ಎಐನ ಪ್ರತಿಸ್ಪರ್ಧಿ ಎಐ ಸ್ಟಾರ್ಟ್‌ಅಪ್ xAI ಅನ್ನು ಪ್ರಾರಂಭಿಸಿದ್ದರು. 2024 ರಲ್ಲಿ, ಮಸ್ಕ್ ಓಪನ್‌ಎಐ ವಿರುದ್ಧ ಮೊಕದ್ದಮೆ ಹೂಡಿದ್ದಲ್ಲದೆ, ಒಪ್ಪಂದದ ಉಲ್ಲಂಘನೆಯನ್ನು ಆರೋಪಿಸಿದರು ಮತ್ತು ಓಪನ್‌ಎಐ ತನ್ನ ಲಾಭರಹಿತ ತತ್ವಗಳನ್ನು ತ್ಯಜಿಸಿದೆ ಮತ್ತು ಈಗ ವಾಣಿಜ್ಯ ಉದ್ಯಮದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪ ಮಾಡಿದ್ದರು. ಓಪನ್‌ಎಐ ಈಗ 'ಕ್ಯಾಪ್ಡ್ ಪ್ರಾಫಿಟ್' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಹೂಡಿಕೆದಾರರು ಸೀಮಿತ ಲಾಭವನ್ನು ಮಾತ್ರ ಗಳಿಸಬಹುದು. ಎಐ ಮಾನವೀಯತೆಗೆ ಪ್ರಯೋಜನಕಾರಿಯಾಗಿರಬೇಕು ಮತ್ತು ಅದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಸ್ಕ್‌ ಹೇಳಿದ್ದಾರೆ.

 

ಮೋದಿ ಸಂದರ್ಶನಕ್ಕೂ ಮುನ್ನ 3 ದಿನ ಉಪವಾಸ ವ್ರತ ಮಾಡಲಿದ್ದಾರೆ ಅಮೆರಿಕನ್ ಪಾಡ್‌ಕಾಸ್ಟರ್

ಚಾಟ್‌ಜಿಪಿಟಿಯ ಮಾತೃಸಂಸ್ಥೆ: OpenAI ಜನಪ್ರಿಯ AI ಚಾಟ್‌ಬಾಟ್ ChatGPT ಯ ಮೂಲ ಕಂಪನಿಯಾಗಿದೆ. OpenAI ನವೆಂಬರ್ 2022 ರಲ್ಲಿ ChatGPT ಅನ್ನು ಜಗತ್ತಿಗೆ ಅನಾವರಣಗೊಳಿಸಿತು. ಈ AI ಪರಿಕರವು ವೇಗವಾಗಿ ಜನಪ್ರಿಯತೆಯನ್ನು ಗಳಿಸಿದೆ. ಸಂಗೀತ ಮತ್ತು ಕವನ ಬರೆಯುವುದರಿಂದ ಹಿಡಿದು ಪ್ರಬಂಧ ಬರೆಯುವವರೆಗೆ, ChatGPT ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಇದು ಸಂವಾದಾತ್ಮಕ AI. ಮನುಷ್ಯರಂತೆ ನಿಮಗೆ ಉತ್ತರಿಸುವ ಕೃತಕ ಬುದ್ಧಿಮತ್ತೆಯಾಗಿದೆ.

 

ಎಲೋನ್ ಮಸ್ಕ್, ಮುಖೇಶ್ ಅಂಬಾನಿ, ಬಿಲ್ ಗೇಟ್ಸ್ ಸೇರಿದಂತೆ ವಿಶ್ವದ 10 ಶ್ರೀಮಂತ ವ್ಯಕ್ತಿಗಳ ರಾಶಿ ಯಾವವು ಗೊತ್ತಾ?

3.6 ಲಕ್ಷ ಕೋಟಿಗೆ ಟ್ವಿಟರ್‌ ಖರೀದಿಸಿದ್ದ ಮಸ್ಕ್‌: ಎಲಾನ್‌  ಮಸ್ಕ್ 2022ರ ಅಕ್ಟೋಬರ್  27  ರಂದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ (ಈಗ X) ಅನ್ನು ಖರೀದಿದಿದ್ದರು. ಬರೋಬ್ಬರಿ $44 ಬಿಲಿಯನ್ ಒಪ್ಪಂದ ಇದಾಗಿತ್ತು. ಇಂದಿನ ದರದ ಪ್ರಕಾರ, ಈ ಮೊತ್ತವು ರೂ. 3.6 ಲಕ್ಷ ಕೋಟಿಗಿಂತ ಹೆಚ್ಚು. ಅಂದಿನಿಂದ, ವೇದಿಕೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 27 ಅಕ್ಟೋಬರ್ 2022 ರಂದು ಟ್ವಿಟರ್ ಅನ್ನು ಖರೀದಿಸಿದ ನಂತರ, ಮಸ್ಕ್ ಮೊದಲು ಕಂಪನಿಯ ನಾಲ್ಕು ಉನ್ನತ ಅಧಿಕಾರಿಗಳನ್ನು ವಜಾಗೊಳಿಸಿದರು. ಇವರಲ್ಲಿ ಸಿಇಒ ಪರಾಗ್ ಅಗರ್ವಾಲ್, ಹಣಕಾಸು ಮುಖ್ಯಸ್ಥ ನೆಡ್ ಸೆಗಲ್, ಕಾನೂನು ಕಾರ್ಯನಿರ್ವಾಹಕ ವಿಜಯ ಗಡ್ಡೆ ಮತ್ತು ಸೀನ್ ಎಡ್ಗೆಟ್ ಸೇರಿದ್ದಾರೆ. ಮಸ್ಕ್ X ನ ಕಮಾಂಡ್ ಅನ್ನು ವಹಿಸಿಕೊಂಡಾಗ, ಅದು ಸುಮಾರು 7500 ಉದ್ಯೋಗಿಗಳನ್ನು ಹೊಂದಿತ್ತು, ಆದರೆ ಈಗ ಕೇವಲ 2500 ಉದ್ಯೋಗಿಗಳು ಮಾತ್ರ ಉಳಿದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?