ಇನ್ವೆಸ್ಟ್ ಕರ್ನಾಟಕ 2025: ಹೂಡಿಕೆ ಸಮಾವೇಶಕ್ಕಿಂದು ಚಾಲನೆ, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಚಾಲನೆ

Published : Feb 11, 2025, 06:30 AM IST
ಇನ್ವೆಸ್ಟ್ ಕರ್ನಾಟಕ 2025: ಹೂಡಿಕೆ ಸಮಾವೇಶಕ್ಕಿಂದು ಚಾಲನೆ, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಚಾಲನೆ

ಸಾರಾಂಶ

ರಾಜ್ಯದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸುವ ಸಿದ್ಧತೆ ರೂಪದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ಬೆಂಗಳೂರು ಅರಮನೆಯಲ್ಲಿ ಫೆ.12 ರಿಂದ 14ರವರೆಗೆ ಸಮಾವೇಶ ನಡೆಯಲಿದೆ. 

ಬೆಂಗಳೂರು(ಫೆ.11):  ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಿಸುವ ಉದ್ದೇಶದೊಂದಿಗೆ ಫೆ.12ರಿಂದ 14ರವರೆಗೆ ಆಯೋಜಿಸ ಲಾಗಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಮಂಗಳವಾರ ಸಂಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ.

ರಾಜ್ಯದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸುವ ಸಿದ್ಧತೆ ರೂಪದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ಬೆಂಗಳೂರು ಅರಮನೆಯಲ್ಲಿ ಫೆ.12 ರಿಂದ 14ರವರೆಗೆ ಸಮಾವೇಶ ನಡೆಯಲಿದೆ. ಸಮಾವೇಶಕ್ಕೂ ಒಂದು ದಿನ ಮುಂಚಿತವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಂದು(ಮಂಗಳವಾರ) ಸಂಜೆ 4 ಗಂಟೆಗೆ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ.

Invest Karnataka 2025ರಲ್ಲಿ 19 ದೇಶಗಳು ಭಾಗಿ: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಲೋಕಸಭೆ ವಿರೋಧ ಪಕದ ನಾಯಕ ರಾಹುಲ್‌ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವರಾದ ಎಚ್ .ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರು, ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹಿಂದ್ರಾ ಸೇರಿ ಇನ್ನಿತರ ಉದ್ಯಮಿಗಳು ಉಪಸ್ಥಿತರಿರಲಿದ್ದಾರೆ.  ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರು ಕೈಗಾರಿಕಾ ಇಲಾಖೆಯು ಮೈಕ್ರೋ ಸಾಫ್ಟ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಏಕಗವಾಕ್ಷಿ ತಂತ್ರಾಂಶಕ್ಕೆ ಚಾಲನೆ ನೀಡಲಿದ್ದಾರೆ.

ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್, ಕೇಂದ್ರದ ಸಚಿವರು, ರಾಜ್ಯ ಸಚಿವರು, ಉದ್ಯಮಿಗಳು, ಇತರರು ಉಪಸ್ಥಿತರಿರಲಿದ್ದಾರೆ.

19 ದೇಶಗಳು, 10 ಲಕ್ಷ ಕೋಟಿ ಹೂಡಿಕೆ: 

ಸಮಾವೇಶದಲ್ಲಿ 19 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ 9 ದೇಶಗಳ ಪೆವಿಲಿಯನ್‌ಗಳು ಹಾಗೂ ವಿಶೇಷ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. 2 ಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಸಾವಿರಕ್ಕೂ ಕೈಗಾರಿಕೆಗಳುಸಮಾವೇಶದಭಾಗವಾಗಿರಲಿವೆ. ಇನ್ವೆಸ್ಟ್ ಕರ್ನಾಟಕದ ಅಂಗವಾಗಿ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿ ಹೆಚ್ಚಿನ ಇನ್ಸೆಂಟಿವ್ (ರಿಯಾಯಿತಿ) ನೀಡುವಂತಹ ಹೊಸ ಕೈಗಾರಿಕಾ ನೀತಿಯನ್ನೂ ಬಿಡುಗಡೆ ಮಾಡಲಾಗುತ್ತಿದೆ. ನೂತನ ನೀತಿಯಲ್ಲಿ ರಾಜ್ಯದ ಉತ್ಪಾದನಾ ಕ್ಷೇತ್ರ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವತ್ತ ಗಮನಹರಿಸಲಾಗುತ್ತಿದೆ. ಹಾಗೆಯೇ, 3 ದಿನಗಳ ಸಮಾವೇಶದಲ್ಲಿ 60ಕ್ಕೂ ಹೆಚ್ಚಿನ ವಿಷಯ ತಜ್ಞರು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ.
ಇನ್ವೆಸ್ಟ್‌ ಕರ್ನಾಟಕದಲ್ಲಿ ಮಷಿನ್ ಟೂಲ್, ಎಲೆಕ್ಟ್ರಾನಿಕ್ಸ್, ಡಿಫೆನ್ಸ್, ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ. ಇನ್ವೆಸ್ಟ್ ಕರ್ನಾಟಕದಲ್ಲಿ ಒಟ್ಟು 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ. ಅಲ್ಲದೆ, ಒಡಂಬಡಿಕೆ ನಂತರ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ತಿಳಿಯಲಿದೆ.

ವಿವಿಧ ಪ್ರಶಸ್ತಿ ಪ್ರದಾನ: 

ರಾಜ್ಯದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ 14 ಸಂಸ್ಥೆಗಳಿಗೆ ಫೆ.12ರಂದು ಪುರಸ್ಕರಿಸಲಾಗು ವುದು. ಫೆ.13ರಂದು ಎಸ್‌ಎಂಇ ಕನೆಕ್ಟ್‌ ಅಡಿ 35ಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಫೆ.14ರಂದು ನಡೆಯಲಿರುವ ಸಮಾರೋಪ ದಲ್ಲಿ ವೆಂಚುರೈಸ್ ಕಾರ್ಯಕ್ರಮದ ಅಡಿ ಎಲೆಕ್ಟ್ರಿಕ್ ವಾಹನ ಸೇರಿ ಇನ್ನಿತರ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ತಲಾ 3 ಸಂಸ್ಥೆಗಳಿಗೆ ಒಟ್ಟು 3 ಲಕ್ಷ ಡಾಲರ್ ಪ್ರಶಸ್ತಿ ಮೊತ್ತವನ್ನು ವಿತರಿಸಲಾಗುತ್ತದೆ.

ಇನ್ವೆಸ್ಟ್‌ ಕರ್ನಾಟಕ ಹೂಡಿಕೆ ಸಮಾವೇಶ: 3 ದಿನದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಸೆಳೆವ ಗುರಿ

ಉಪಮುಖ್ಯಮಂತ್ರಿ ಡಿಕೆಶಿ ಪರಿಶೀಲನೆ

ಬೆಂಗಳೂರು ಅರಮನೆಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಇನ್ವೆಸ್ಟ್ ಕರ್ನಾಟಕದ ಸಿದ್ಧತೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಪರಿಶೀಲನೆ ನಡೆಸಿದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆ, ಪ್ರದರ್ಶಕ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ಸಿದ್ದತೆ ಮತ್ತು ಕಾರ್ಯಕ್ರಮಗಳ ಮಾಹಿತಿ ಪಡೆದರು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಆಯುಕ್ತ ಗುಂಜನ್ ಕೃಷ್ಣ ಇತರರಿದ್ದರು.

19 ದೇಶಗಳು 

ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ವಿದೇಶಿ ಪ್ರತಿನಿಧಿಗಳು

2000 ಉದ್ದಿಮೆ 

ಸಣ್ಣ, ಮಧ್ಯಮ ಕೈಗಾರಿಕೆಗಳು ಸಮಾವೇಶದಲ್ಲಿ ಸಕ್ರಿಯವಾಗಿ ಭಾಗಿ

60 ತಜ್ಞರು 

3 ದಿನಗಳ ಸಮಾವೇಶದಲ್ಲಿ ವಿಷಯ ಪ್ರಸ್ತುತಪಡಿಸಲಿರುವ ಪರಿಣತರು

10 ಲಕ್ಷ ಕೋಟಿ 

ಸಮಾವೇಶದಲ್ಲಿ ಕರ್ನಾಟಕ ನಿರೀಕ್ಷೆ ಮಾಡಿರುವ ಹೂಡಿಕೆ ಮೊತ್ತ 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ