
ಲಾಸ್ ಏಂಜಲೀಸ್(ಸೆ.26): ಇತ್ತೀಚೆಗಷ್ಟೇ ವಿಶ್ವದ ಅತಿ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ದಂಪತಿ ವಿಚ್ಛೇದನ(Divorce) ನೀಡಿದ್ದರು. ಇದರ ಬೆನ್ನಲ್ಲೇ ಶತಕೋಟ್ಯಧಿಪತಿ ಎಲಾನ್ ಮಸ್ಕ್(Elon Musk) ಹಾಗೂ ಅವರ ಪತ್ನಿ, ಗಾಯಕಿ ಗ್ರಿಮ್ಸ್(Grimes) ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.
ಇಬ್ಬರು ದೂರವಾದರೂ ಪ್ರೀತಿ ಕಡಿಮೆಯಾಗುವುದಲ್ಲ ಹಾಗೂ ಮಗುವನ್ನು ಇಬ್ಬರು ಸೇರಿ ಬೆಳೆಸುವುದಾಗಿ ಅವರು ಹೇಳಿದ್ದಾರೆ.
ಟೆಸ್ಲಾ(Tesla) ಮತ್ತು ಸ್ಪೇಸ್ ಎಕ್ಸ್(Space X) ಕಂಪೆನಿಗಳ ಸ್ಥಾಪಕರಾದ ಎಲಾನ್ ಮಸ್ಕ್ ಹಾಗೂ ಗಾಯಕಿ ಗ್ರಿಮ್ಸ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಅವರಿಗೆ ಒಂದು ವರ್ಷದ ಮಗುವಿದೆ. ‘ನಾವು ಸಂಪೂರ್ಣವಾಗಿ ಬೇರೆಯಾಗುತ್ತಿಲ್ಲ, ಪರಸ್ಪರ ಪ್ರೀತಿ ಇರುತ್ತದೆ. ಮಗುವನ್ನೂ ನೋಡಿಕೊಳ್ಳುತ್ತೇವೆ. ಕೆಲಸದ ಒತ್ತಡದಿಂದಾಗಿ ನಾನು ಟೆಕ್ಸಾಸ್‌ನಲ್ಲಿ ವಾಸ ಮಾಡಬೇಕಾಗಿದೆ ಹಾಗೂ ಗ್ರಿಮ್ಸ್ ಲಾಸ್ ಏಂಜಲೀಸ್‌ನಲ್ಲೇ ಇರುತ್ತಾರೆ ಹಾಗಾಗಿ ಇಬ್ಬರು ದೂರಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಗ್ರಿಮ್ಸ್ ಅನ್ನು ಮದುವೆಯಾಗುವ ಮೊದಲು ಎಲಾನ್ ಮಸ್ಕ್(Elon Musk) ಕೆನಡಾದ ಲೇಖಕಿ ಜಸ್ಟೀನ್ ವಿಲ್ಸನ್ ಅವರನ್ನು ಮದುವೆಯಾಗಿದ್ದರು. ಇವರಿಬ್ಬರಿಗೂ 5 ಜನ ಮಕ್ಕಳಿದ್ದಾರೆ.
27 ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದ ಗೇಟ್ಸ್ ದಂಪತಿ
ಇದೇ ವರ್ಷದ ಮೇ ತಿಂಗಳಲ್ಲಿ ಮೈಕ್ರೋಸಾಫ್ಟ್ ದಿಗ್ಗಜ ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ವಿಚ್ಚೇದನ ಪಡೆದಿದ್ದರು. ಬಿಲ್ ಗೇಟ್ಸ್ ವಿಚ್ಛೇದನದ ಬಗ್ಗೆ ಟ್ವೀಟ್ ಮಾಡಿ ಬಿಲ್ ಗೇಟ್ಸ್, ‘27 ವರ್ಷಗಳ ದಾಂಪತ್ಯದ ಬಳಿಕ ನಾವು ವಿಚ್ಛೇದನ ಘೋಷಿಸಿದ್ದೇವೆ. ಜಾಗತಿಕ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವ ಕೆಲಸ ಮಾಡುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಜಂಟಿ ಸಹಭಾಗಿತ್ವ ಮುಂದುವರಿಸುತ್ತೇವೆ’ ಎಂದಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.