ಲೇಟಾಗಿ ಪಿಎಫ್‌ ಜಮೆ ಮಾಡುವ ಕಂಪನಿಗೆ ಕುತ್ತು: ಉದ್ಯೋಗಿಗಳ ಪರ ನಿರ್ಮಲಾ ಬಜೆಟ್!

By Suvarna News  |  First Published Feb 1, 2021, 4:14 PM IST

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ 2020-21ನಲ್ಲಿ ವೇತನ| ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಳಂಬ ನೀತಿ| ಪಿಎಫ್‌ ಪಾವತಿಸುವ ಕಂಪನಿಗಳಿಗೆ ಯಾವುದೇ ಬಗೆಯ ರಿಯಾಯಿತಿ ಇಲ್ಲ


ನವದೆಹಲಿ(ಫೆ.01): ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ 2020-21ನಲ್ಲಿ ವೇತನ ಪಡೆಯುವವರ ಪರ ಕ್ರಮ ಕೈಗೊಂಡಿದ್ದಾರೆ. ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಳಂಬವಾಗಿ ಪಿಎಫ್‌ ಪಾವತಿಸುವ ಕಂಪನಿಗಳಿಗೆ ಯಾವುದೇ ಬಗೆಯ ರಿಯಾಯಿತಿ ನೀಡುವುದಿಲ್ಲ ಎಂದಿದ್ದಾರೆ. ಕಂಪನಿಯ ಈ ನಡೆಯಿಂದ ಸಮಸ್ಯೆ ಅನುಭವಿಸುವ ಉದ್ಯೋಗಿಗಳ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಕೆಲವು ಉದ್ಯೋಗದಾತರು ಭವಿಷ್ಯನಿಧಿ (ಪಿಎಫ್) ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳ ಹೆಸರಿನಲ್ಲಿ ನೌಕರರ ವೇತನದಿಂದ ಹಣವನ್ನು ಕಡಿತಗೊಳಿಸುವುದನ್ನು ನಾವು ನೋಡಿದ್ದೇವೆ, ಆದರೆ ಅದನ್ನು ಸಮಯಕ್ಕೆ ಜಮಾ ಮಾಡದಿರುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.

"

Tap to resize

Latest Videos

undefined

ಉದ್ಯೋಗದಾತರು ಅನುಸರಿಸುತ್ತಿರುವ ಈ ವಿಳಂಬವನ್ನು ಸರ್ಕಾರ ಗಮನಿಸಿದೆ. ಕಂಪನಿಯ ಈ ನಡೆಯಿಂದ ಉದ್ಯೋಗಿಗಳುಬಡ್ಡಿ ಮತ್ತು ಗಳಿಕೆಯಲ್ಲಿ ನಷ್ಟ ಅನುಭವಿಸುತ್ತಾರೆ ಎಂದಿದ್ದಾರೆ. ಯಾವುಉದೇ ಕಂಪನಿಯಾಗಲಿ ಉದ್ಯೋಗಿಗಳಿಗೆ ಪಿಎಫ್‌ ಎಂಬುವುದು ಬಹಳ ಲಾಭದಾಯಕ ಯೋಜನೆಯಾಗಿದೆ. ಇದು ಕೇವಲ ಉಳಿತಾಯ ಮಾಡಲಷ್ಟೇ ಉತ್ತಮ ಮಾರ್ಗವಲ್ಲ, ಬದಲಾಗಿ ಇದರ ಮೇಲೆ ಅತ್ಯುತ್ತಮ ಬಡ್ಡಿ ಹಾಗೂ ತೆರಿಗೆ ಉಳಿತಾಯವೂ ಆಗುತ್ತದೆ. 

ಏನಿದು ಪಿಎಫ್?

ನೌಕರರ ಭವಿಷ್ಯ ನಿಧಿ (ನೌಕರರ ಭವಿಷ್ಯ ನಿಧಿ). ಇದನ್ನು ನಿವೃತ್ತಿಯ ಸಮಯದಲ್ಲಿ ಮತ್ತು ಕೆಲಸವನ್ನು ಬಿಡುವ ಹಂತದಲ್ಲಿ ನೀಡಲಾಗುತ್ತದೆ. ಹೀಗಿದ್ದರೂ, ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ ಅವಧಿಯ ನಡುವೆಯೇ ಭಾಗಶಃ ಮೊತ್ತವನ್ನು ಪಡೆಯುವ ಅಅವಕಾಶ ಇದೆ.

ಪಿಎಫ್‌ ಪಡೆಯಲು ಯಾರು ಅರ್ಹರು?

20 ಕ್ಕೂ ಹೆಚ್ಚು ಉದ್ಯೋಗಿಗಳು ಉದ್ಯೋಗಿ ಹೊಂದಿರುವ ಕಂಪನಿ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ನೋಂದಾಯಿಸುವುದು ಕಡ್ಡಾಯವಾಗಿದೆ. ಇದರ ಅಡಿಯಲ್ಲಿ, ಉದ್ಯೋಗಿಗಳಿಗೆ ಪಾವತಿಸುವ ಸಂಬಳದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ. ಇದನ್ನು ನಿವೃತ್ತಿ ಅಥವಾಕೆಲಸ ಬಿಡುವ ಸಂದರ್ಭದಲ್ಲಿ ನೀಡಲಾಗುತ್ತದೆ.

click me!