Indian Economy Growth: Q3 GDP: ಭಾರತದ್ದು ವಿಶ್ವದಲ್ಲೇ ವೇಗದ ಆರ್ಥಿಕ ಪ್ರಗತಿ!
*ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.5.4ರಷ್ಟುಜಿಡಿಪಿ ಪ್ರಗತಿ
*ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್ 389 ಅಂಕ, ನಿಫ್ಟಿ135 ಅಂಕ ಏರಿಕೆ
*ಉದ್ಯಮ ವಲಯಕ್ಕೆ ಆಘಾತ: ಕಾರ್ಗೋ ಬುಕ್ಕಿಂಗ್ ನಿಲ್ಲಿಸಿದ ಶಿಪ್ಪಿಂಗ್ ಸಂಸ್ಥೆಗಳು!
ನವದೆಹಲಿ (ಮಾ. 01) : 2021-22ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸಮಗ್ರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ.5.4ರಷ್ಟುದಾಖಲಾಗಿದೆ. ಈ ಮೂಲಕ ದೊಡ್ಡ ಆರ್ಥಿಕತೆಗಳ ಪೈಕಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ದೇಶ ಎಂಬ ಹಿರಿಮೆಯನ್ನು ಉಳಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ಶೇ.20.3, ಎರಡನೇ ತ್ರೈಮಾಸಿಕದಲ್ಲಿ ಶೇ.8.5ರಷ್ಟುಪ್ರಗತಿ ಸಾಧಿಸಿತ್ತು.
ಇದೇ ವೇಳೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಪ್ರಸಕ್ತ ಹಣಕಾಸು ವರ್ಷದ ಒಟ್ಟಾರೆ ಜಿಡಿಪಿ ಬೆಳವಣಿಗೆ ದರದ ಕುರಿತು ಎರಡನೇ ಅಂದಾಜು ಮಾಡಿದ್ದು, ಅದರಲ್ಲಿ 2021-22ರಲ್ಲಿ ಭಾರತ ಒಟ್ಟಾರೆ ಶೇ.8.9ರಷ್ಟುಜಿಡಿಪಿ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದೆ. ಇದು ಈ ಹಿಂದಿನ ಅಂದಾಜು ಪ್ರಮಾಣವಾದ ಶೇ.9.2ಕ್ಕಿಂತ ಕಡಿಮೆ ಎಂಬುದು ಗಮನಾರ್ಹ.
ಇದನ್ನೂ ಓದಿ: Economic Survey 2022: 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಚೇತರಿಕೆ; ಮಾಸಿಕ 1ಲಕ್ಷ ಕೋಟಿ ರೂ. GST ಸಂಗ್ರಹ
ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್ 389 ಅಂಕ, ನಿಫ್ಟಿ135 ಅಂಕ ಏರಿಕೆ: ಯುದ್ಧದ ಕಾರಣ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ ಚೇತರಿಕೆ ಕಂಡಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 388.76 ಅಂಕ ಏರಿಕೆ ಕಾಣುವುದರೊಂದಿಗೆ 56,247.28ರಲ್ಲಿ ಅಂತ್ಯವಾಗಿದೆ. ಭಾರತೀಯ ಸಂವೇದಿ ಸೂಚ್ಯಂಕ ನಿಫ್ಟಿಸಹ 135.5 ಅಂಕ ಏರಿಕೆ ಕಾಣುವುದರೊಂದಿಗೆ 16,793.9 ರಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಇಸ್ಫೋಸಿಸ್‌ನ ಷೇರುಗಳು ಏರಿಕೆ ಕಂಡಿವೆ. ಇನ್ನು ಕಚ್ಚಾ ತೈಲದ ಬೆಲೆ ಹೆಚ್ಚಾದ ಕಾರಣ ಡಾಲರ್ ಎದುರು ರುಪಾಯಿ ಮೌಲ್ಯ 2 ಪೈಸೆ ಕುಸಿತ ಕಾಣುವ ಮೂಲಕ 75.35ಕ್ಕೆ ಇಳಿಕೆ ಕಂಡಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 103.28 ಡಾಲರ್‌ಗೆ ತಲುಪಿದೆ.
ಉದ್ಯಮ ವಲಯಕ್ಕೆ ಆಘಾತ: ರಷ್ಯಾ (Russia) - ಉಕ್ರೇನ್ (Ukraine) ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ (India) ಶಿಪ್ಪಿಂಗ್ (Shipping) ಕಂಪೆನಿಗಳು ಉಭಯ ರಾಷ್ಟ್ರಗಳ ಬಂದರುಗಳಿಗೆ ಸರಕು ರಫ್ತಿಗೆ (Export) ಕಾರ್ಗೋ (Cargo) ಕಾಯ್ದಿರಿಸೋದನ್ನು ನಿಲ್ಲಿಸಿವೆ ಎಂದು ಅಧಿಕೃತ ಮೂಲಗಳು
ಮಾಹಿತಿ ನೀಡಿವೆ.
ಇದನ್ನೂ ಓದಿ: Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ
ಸ್ವತಂತ್ರ ರಾಷ್ಟ್ರಗಳ ಕಾಮನ್ ವೆಲ್ತ್ (CIS) ವಿಭಾಗದಲ್ಲಿ ಭಾರತದ ಇಂಜಿನಿಯರಿಂಗ್ (Engineering) ಸರಕುಗಳ ರಫ್ತಿಗೆ (Export) ರಷ್ಯಾ (Russia) ನೆಚ್ಚಿನ ತಾಣವಾಗಿದೆ. ಹೀಗಾಗಿ ಶಿಪ್ಪಿಂಗ್ ಕಂಪೆನಿಗಳ ಈ ನಡೆ ಈಗಾಗಲೇ ಒಪ್ಪಂದ ಪಡೆದಿರೋ ಉತ್ಪಾದನಾ ಕಂಪನಿಗಳಿಗೆ ಮಾತ್ರವಲ್ಲ, ಭವಿಷ್ಯದ ಸಾಗಣೆ ಮೇಲೂ ಪರಿಣಾಮ ಬೀರಿದ್ದು, ಅನಿಶ್ಚಿತತೆ ಮನೆ ಮಾಡಿದೆ.
'ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಅನೇಕ ಶಿಪ್ಪಿಂಗ್ ಕಂಪೆನಿಗಳು (Sipping Companies) ರಷ್ಯಾದ (Russia) ಬಂದರುಗಳಿಗೆ (Ports) ಕಂಟೈನರ್ ಗಳನ್ನು(Containers) ಪೂರೈಕೆ ಮಾಡೋದನ್ನು ನಿಲ್ಲಿಸಿರೋದರ ಜೊತೆಗೆ ರಷ್ಯಾದ ಬಂದರುಗಳಿಗೆ ಸರಕು ಸಾಗಣೆ ಬುಕ್ಕಿಂಗ್ ಕೂಡ ನಿಲ್ಲಿಸಿವೆ. ಎಂಎಸ್ ಸಿ ( MSC), ಮೇರ್ಸಕ್ (Maersk), ಹ್ಯಾಪ್ಯಾಗ್ -ಲಲ್ಯೋಡ್ (Hapag-Llyod)ಮುಂತಾದ ಕಂಟೈನರ್ ಸಾಗಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರೋ ಸಂಸ್ಥೆಗಳು ಕೂಡ ಬುಕ್ಕಿಂಗ್ ನಿಲ್ಲಿಸಿವೆ' ಎಂದು ಪಶ್ಚಿಮ ಬಂಗಾಳ ಕಸ್ಟಮ್ ಹೌಸ್ ಏಜೆಂಟ್ಸ್ ಸೊಸೈಟಿ ಅಧ್ಯಕ್ಷ ಸುಜಿತ್ ಚಕ್ರಬೊರ್ತಿ ಪಿಟಿಐಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಇಂಜಿನಿಯರಿಂಗ್ ಉತ್ಪನ್ನಗಳ ರಫ್ತು ಸಂಸ್ಥೆ ನಿಫಾ ರಫ್ತು ಕಂಪೆನಿ ನಿರ್ದೇಶಕ ರಾಕೇಶ್ ಸಹ ನಮ್ಮ ಕಂಪನಿಯಿಂದ ರಷ್ಯಾಕ್ಕೆ ಸರಕು ಸಾಗಣೆ ಮಾಡಬೇಕಿತ್ತು. ಆದ್ರೆ ಶಿಪ್ಪಿಂಗ್ ಸಂಸ್ಥೆ ಹ್ಯಾಪ್ಯಾಗ್ ಲಲ್ಯೋಡ್ ಕಂಟೈನರ್ ಬುಕ್ಕಿಂಗ್ ನಿಲ್ಲಿಸಿದೆ ಎಂಬ ಮಾಹಿತಿ ನೀಡಿದ್ದಾರೆ.