ಮೋದಿ ಆಡಳಿತದಲ್ಲಿ ಭಾರತದ ಸುವರ್ಣಯುಗ, ವಿದೇಶಿ ಬರ್ನ್‌ಸೈನ್ ಸಂಸ್ಥೆ ವರದಿ ಪ್ರಕಟ!

Published : Jul 17, 2023, 11:13 PM IST
ಮೋದಿ ಆಡಳಿತದಲ್ಲಿ ಭಾರತದ ಸುವರ್ಣಯುಗ, ವಿದೇಶಿ ಬರ್ನ್‌ಸೈನ್ ಸಂಸ್ಥೆ ವರದಿ ಪ್ರಕಟ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಮಹತ್ತರ ಬದಲಾವಣೆ ಕಂಡಿದೆ. 5ನೇ ಆರ್ಥಿಕತೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಜಿಎಸ್‌ಟಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳು ಬದಲಾದ ಭಾರತಕ್ಕೆ ಸಾಕ್ಷಿ ಎಂದು ವಿದೇಶಿ ಸಂಸ್ಥೆ ಬರ್ನ್‌ಸೈನ್ ವರದಿ ಬಿಡುಗಡೆ ಮಾಡಿದೆ. 31 ಪುಟದ ವರದಿಯಲ್ಲಿ ಪ್ರಧಾನಿ ಮೋದಿ ಆಡಳಿತದ ಇಂಚಿಂಚು ಮಾಹಿತಿ ನೀಡಿದೆ.  

ನವದೆಹಲಿ(ಜು.17) ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಬದಲಾಗಿದೆ ಅನ್ನೋದನ್ನು ಇದೀಗ ವಿದೇಶಿ ಸಂಸ್ಥೆಗಳು ಅಧ್ಯಯನ ವರದಿ ಮೂಲಕ ಹೇಳಿದೆ. ಮೋದಿ, ಬಿಜೆಪಿಯನ್ನು ಟೀಕಿಸಿದ್ದ ಹಲವು ವಿದೇಶಿ ಎಜೆನ್ಸಿಗಳು ಇದೀಗ ಮಹತ್ತರ ಬದಲಾವಣೆಯನ್ನು ಮೆಚ್ಚಿಕೊಂಡಿದೆ. ಇದೀಗ ವಿದೇಶಿ ಎಜೆನ್ಸಿ ಬರ್ನ್‌ಸೈನ್ ಸಂಸ್ಥೆ 31 ಪುಟಗಳ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೋದಿ ಆಡಳಿತದಲ್ಲಿ ಭಾರತದ ಸುವರ್ಣಯುಗ ಮತ್ತೆ ಆರಂಭಗೊಂಡಿದೆ ಎಂದಿದೆ.2014ರಲ್ಲಿ ಭಾರತ ವಿಶ್ವದ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು. ಇದೀಗ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಇದು ಸಾಧಾಕರಣ ಸಾಧನೆಯಲ್ಲ ಎಂದು ಬರ್ನ್‌ಸೈನ್ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಮೋದಿ ಆಡಳಿತದ ದಶಕ- ಆಳ ಅಧ್ಯಯನ ಅನ್ನೋ ಶೀರ್ಷಿಕೆಯಲ್ಲಿ ಈ ವರದಿ ಪ್ರಕಟಿಸಲಾಗಿದೆ. ಭಾರತದಲ್ಲಿ ನಡೆದಿರುವ ಸುಧಾರಣೆಗಳು, ಅಭಿವೃದ್ಧಿ, ಆರ್ಥಿಕತೆಯ ವೇಗ, ಡಿಜಿಟಲ್ ಕ್ರಾಂತಿ,  ಹಣದುಬ್ಬರ ನಿಯಂತ್ರಣ ಸೇರಿದಂತೆ ಹಲವು ವಿಚಾರಗಳ ಕುರಿತು ಈ ವರದಿ ಬೆಳಕು ಚೆಲ್ಲಿದೆ. ಭಾರತ ಅನುವಂಶಿಯಾವಾಗಿ ದುರ್ಬಲ ಆರ್ಥಿಕತೆ ಪಡೆದಿದೆ. ಇದೇ ರೀತಿ ಹಲವು ರಾಷ್ಟ್ರಗಳು ದುರ್ಬಲ ಆರ್ಥಿಕತೆಯಲ್ಲಿದೆ. ಈ ರಾಷ್ಟ್ರಗಳು ಮತ್ತಷ್ಟು ಸಂಕಷ್ಟದಲ್ಲಿದ್ದರೆ, ಭಾರತದಲ್ಲಿ ಚಿತ್ರಣ ಬದಲಾಗಿದೆ ಎಂದು ವರದಿ ಹೇಳಿದೆ.

Indian Economy: ಆದಾಯಕ್ಕಿಂತ ಹೆಚ್ಚು ಖರ್ಚು ಮಾಡೋ ಭಾರತೀಯರಿಗೆ EMI ಅಚ್ಚುಮೆಚ್ಚು

ಪ್ರಧಾನಿ ಮೋದಿ ಆಡಳಿತದ ಕಳೆದ ಒಂದು ದಶಕದಲ್ಲಿ ಭಾರತದ ಹೊಸ ದಿಕ್ಕಿನತ್ತ ಸಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಅಳವಡಿಕೆ, ಸುಧಾರಣಾ ಯೋಜನೆಗಳು ಸೇರಿದಂತೆ ಹಲವು ಮಹತ್ವದ ಯೋಜನೆಗಳು ಭಾರತಕ್ಕೆ ವರವಾಗಿದೆ. ಕುಟುಂತ್ತಾ ಸಾಗುತ್ತಿದ್ದ ಭಾರತದ ಆರ್ಥಿಕತೆಗೆ ಹೊಸ ವೇಗ ನೀಡಲಾಗಿದೆ ಜಿಎಸ್‌ಟಿ ಜಾರಿ ಭಾರತದಲ್ಲಿನ ಆದಾಯ ಕ್ರೋಡಿಕರಣ, ಮೂಲಭೂತ ಸೌಕರ್ಯಕ್ಕೆ ವಿನಿಯೋಗ ಸೇರಿದಂತೆ ಹಲವು ಸುಧಾರಣೆಗಳು ಆಗಿವೆ ಎಂದಿದೆ. ಮೋದಿ ಪ್ರಧಾನಿಯಾದ ಬಳಿಕ ಭಾರತದ ಜೆಡಿಪಿಯಲ್ಲಿನ ಪ್ರಗತಿ, ತಲಾ ಆದಾಯ ಏರಿಕೆಗಳು ಭಾರತದ ಆರ್ಥಿಕತೆಗೆ ಹೊಸ ವೇಗ ನೀಡಿದೆ.9 ವರ್ಷಗಳ ಹಿಂದೆ ಅಭೂತಪೂರ್ವ ಗೆಲುವಿನೊಂದಿಗೆ ಪ್ರಧಾನಿ ಮೋದಿ ಅಧಿಕಾರಕ್ಕೇರಿದರು. ಭ್ರಷ್ಟಾಚಾರ ರಹಿತ ಆಡಳಿತ ಭರವಸೆಯಂತೆ ಸರ್ಕಾರ ನಡೆಸಿದ್ದಾರೆ. ಇದರ ಪರಿಣಾಮ ಭಾರತದ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟ ಹಿಂದೆಂದೂ ಕಾಣದಂತೆ ಬದಲಾಗಿದೆ ಎಂದು ಬರ್ನ್‌ಸೈನ್ ವರದಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತವು ಜಿಎಸ್‌ಟಿಯಂತಹ ಕ್ರಾಂತಿಕಾರಿ ಆರ್ಥಿಕ ಸುಧಾರಣಾ ಕ್ರಮಗಳಿಂದ ಈಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆಸ್ತಿ ನಿರ್ವಹಣೆ ಏಜೆನ್ಸಿ ಬರ್ನ್‌ಸ್ಟೀನ್‌ ಶ್ಲಾಘಿಸಿದೆ. ‘ಮೋದಿ ಆಡಳಿತದ ಒಂದು ದಶಕ- ಭಾರಿ ಜಿಗಿತ’ ಎಂಬ ಈ ವರದಿಯಲ್ಲಿ ಹಣದುಬ್ಬರ ನಿಯಂತ್ರಣ, ಆರ್ಥಿಕ ಒಳಗೊಳ್ಳುವಿಕೆ, ಡಿಜಿಟಲೀಕರಣ, ಜಿಎಸ್‌ಟಿ, ಕೋವಿಡ್‌ ನಿರ್ವಹಣೆ, ಕೃಷ್ಯುತ್ಪನ್ನಗಳಿಗೆ ಬೆಂಬಲ ಬೆಲೆ ಮುಂತಾದ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಹೂಡಿಕೆಗೆ ಭಾರತವೇ ನಂ.1 ಪ್ರಶಸ್ತ ಸ್ಥಳ: ಚೀನಾವನ್ನು ಹಿಂದಿಕ್ಕಿದ ಭಾರತ

‘ಕೆಲವರಿಗೆ ರಾತ್ರೋರಾತ್ರಿ ಅದೃಷ್ಟಖುಲಾಯಿಸುತ್ತದೆ. ಆದರೆ ಭಾರತದ ವಿಷಯದಲ್ಲಿ ಇದು ತೀವ್ರ ಪರಿಶ್ರಮದಿಂದ ಗಳಿಸಿದ ಯಶಸ್ಸಾಗಿದೆ. ಅಧಿಕಾರಕ್ಕೆ ಬಂದಾಗ ದುರ್ಬಲ ಆರ್ಥಿಕತೆಯಾಗಿದ್ದ ದೇಶವನ್ನು ಮೋದಿ ಪ್ರಬಲ ಆರ್ಥಿಕತೆಯಾಗಿ ಕಟ್ಟಿನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಇಂದು ದೇಶ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ದೇಶದಲ್ಲೀಗ ಉತ್ತಮ ನೀತಿಗಳು, ಹೂಡಿಕೆಯ ವಾತಾವರಣ, ಉತ್ಪಾದನಾ ಅವಕಾಶ, ಮೂಲಸೌಕರ್ಯಗಳು ನಿರ್ಮಾಣವಾಗಿವೆ’ ಎಂದು ವರದಿ ಹೇಳಿದೆ.

ಕಳೆದ ದಶಕದಲ್ಲಿ ಕೆಲ ವರ್ಷಗಳ ಕಾಲ ಆರ್ಥಿಕಾಭಿವೃದ್ಧಿ ದರ ಕಡಿಮೆಯಿದ್ದರೂ ಸತತ ಪ್ರಯತ್ನ ಹಾಗೂ ಸುಧಾರಣಾ ಕ್ರಮಗಳಿಂದಾಗಿ ಅದು ಈಗ ಉತ್ತಮ ಸ್ಥಿತಿಗೆ ತಲುಪಿದೆ. ಭಾರತವೀಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ವರದಿ ಶ್ಲಾಘಿಸಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?