ಕ್ವಾಲ್ಕಾಮ್‌ ಉದ್ಯೋಗಿಗಿಂತ ಹೆಚ್ಚು ಗಳಿಸ್ತಾನೆ ಈ ಇಂಜಿನಿಯರ್ ಕ್ಯಾಬ್ ಡ್ರೈವರ್ !

By Suvarna NewsFirst Published Aug 8, 2023, 5:45 PM IST
Highlights

ಗಳಿಕೆ ವಿಷ್ಯಕ್ಕೆ ಬಂದಾಗ ಬರೀ ಇಂಜಿನಿಯರ್ಸ್, ಡಾಕ್ಟರ್ ಮಾತ್ರ ಹೆಚ್ಚಿನ ಸಂಪಾದನೆ ಮಾಡೋದಿಲ್ಲ. ಕೆಲ ಬೀದಿ ಬದಿ ವ್ಯಾಪಾರಿಗಳು, ಕ್ಯಾಬ್ ಚಾಲಕರ ಸಂಪಾದನೆ ಇವರಿಗಿಂತ ಹೆಚ್ಚಿರುತ್ತದೆ. ಅದಕ್ಕೆ ಈ ಟ್ವೀಟ್ ಎಗ್ಸಾಂಪಲ್.
 

ವಿದ್ಯೆಗೆ ತಕ್ಕಂತೆ ಉದ್ಯೋಗ ಹುಡುಕ್ತಾ ಕುಳಿತ್ರೆ ಅದು ಸಿಗೋದು ಕಷ್ಟ. ಸಿಕ್ಕಿದ್ರೂ ಕೆಲವೊಮ್ಮೆ ನೀವು ನಿರೀಕ್ಷೆ ಮಾಡಿದಷ್ಟು ಸಂಬಳ ಸಿಗೋದಿಲ್ಲ. ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಅಪಾರ್ಟ್ಮೆಂಟ್ ನಿರ್ಮಾಣದ ವೇಳೆ ಮೇಲೆ ಓಡಾಡ್ತಿರುವ ಗಾಡಿಯೊಂದರಲ್ಲಿ ಕುಳಿತಿರುವ ವ್ಯಕ್ತಿಯನ್ನು ಕೆಳಗಿರುವ ಇಂಜಿನಿಯರ್ ಓದಿದ ವ್ಯಕ್ತಿ ಕೀಳಾಗಿ ನೋಡ್ಬಹುದು. ಆದ್ರೆ ಮೇಲಿರುವ ಆ ವ್ಯಕ್ತಿ ಸಂಬಳ ಒಂದೋ ಎರಡೋ ಲಕ್ಷವಿರುತ್ತದೆ. ಬರೀ ಇದೊಂದು ಉದಾಹರಣೆ ಅಷ್ಟೆ. ಕ್ಯಾಬ್ ಚಾಲನೆ ಮಾಡುವ ವ್ಯಕ್ತಿ ಅವಿದ್ಯಾವಂತ, ಕಡಿಮೆ ಸಂಬಳ ಪಡೆಯುವ ವ್ಯಕ್ತಿ ಎಂದು ಎಸಿ ರೂಮಿನಲ್ಲಿ ಕುಳಿತ ಐಟಿ ವ್ಯಕ್ತಿ ಭಾವಿಸಿದ್ರೆ ಅದು ಕೂಡ ತಪ್ಪು. ಓದು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆಯೇ ವಿನಃ ನಿಮ್ಮ ಸಂಪಾದನೆಯಲ್ಲ. ಸಂಪಾದನೆಗೆ ಬೇಕಾಗಿರುವುದು ಶ್ರದ್ಧೆ ಹಾಗೂ ಕೆಲಸದ ಮೇಲಿನ ಪ್ರೀತಿ. 

ನಿತ್ಯ ಗಿಜಿಗಿಡುವ ರಸ್ತೆಯಲ್ಲಿ ಕ್ಯಾಬ್ (Cab) ಓಡಿಸುವ ವ್ಯಕ್ತಿ ಕೂಡ ಇಡೀ ದಿನ ಕಂಪ್ಯೂಟರ್ (Computer) ಮುಂದೆ ಕುಳಿತುಕೊಳ್ಳುವ ಇಂಜಿನಿಯರ್ (Engineer) ಗಿಂತ ಹೆಚ್ಚು ಸಂಪಾದನೆ ಮಾಡ್ತಾನೆ ಅಂದ್ರೆ ನಿಮಗೆ ನಂಬಲು ಸಾಧ್ಯವಾಗದೆ ಹೋಗ್ಬಹುದು. ಆದ್ರೆ ಇದು ಸತ್ಯ. ಕೆಲ ಕ್ಯಾಬ್ ಚಾಲಕರು ಐಟಿ ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದನೆ ಮಾಡೋದಲ್ಲದೆ ಹೈ ಕ್ವಾಲಿಫೈ ಆಗಿರ್ತಾರೆ. ಕೊರೊನಾ ನಂತ್ರ ಅನೇಕರ ಜೀವನದಲ್ಲಿ ಬದಲಾವಣೆಯಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಕುಕ್ರೇಜಾ ಎನ್ನುವವರು ಇಂಜಿನಿಯರಿಂಗ್ ಮುಗಿಸಿದ ಕ್ಯಾಬ್ ಚಾಲಕನ ಕೆಲಸ ಹಾಗೂ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದು ಎಲ್ಲರೂ ಅಚ್ಚರಿಗೊಂಡಿದ್ದಾರೆ.

Latest Videos

PERSONAL FINANCE : ಒಂದು ಸ್ಕೂಟಿ ಮೇಲೆ ಶೋ ರೂಂ ಮಾಲೀಕರಿಗೆ ಲಾಭವಿರುತ್ತೆ, ಚೌಕಾಸಿ ಮಾಡ್ಬಹುದು!

ಈಗಿನ ದಿನಗಳಲ್ಲಿ ಕಾರ್ಪೊರೇಟ್ ಉದ್ಯೋಗಿಗಳಿಗೆ ಸೂಕ್ತ ಸಂಬಳ ಸಿಗ್ತಿಲ್ಲ. ಕೆಲ ಉದ್ಯೊಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಈ ಮಧ್ಯೆ ಟ್ವಿಟರ್‌ನಲ್ಲಿ,  ಶ್ವೇತಾ ಕುಕ್ರೇಜಾ ಎಂಬ ಮಹಿಳೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಶ್ವೇತಾ ಕ್ಯಾಬ್ ಹತ್ತಿದಾಗ, ಕ್ಯಾಬ್ ಚಾಲಕ ಇಂಜಿನಿಯರ್ ಪದವಿದರ ಎಂಬುದು ಗೊತ್ತಾಗಿದೆ. ಅಲ್ಲದೆ  ಕ್ವಾಲ್ಕಾಮ್‌ನಲ್ಲಿನ ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಡ್ರೈವಿಂಗ್  ಹೆಚ್ಚು ಗಳಿಸುತ್ತಾನೆ ಎಂದು ಶ್ವೇತಾ ಪತ್ತೆ ಮಾಡಿದ್ದಾರೆ.  ಶ್ವೇತಾ ಟ್ವಿಟರ್ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ.

ನಾನು ನಿನ್ನೆ ಕ್ಯಾಬ್‌ನಲ್ಲಿದ್ದೆ ಮತ್ತು ಆ ಕ್ಯಾಬ್ ಚಾಲಕ ಇಂಜಿನಿಯರ್. ಕ್ವಾಲ್‌ಕಾಮ್‌ನಲ್ಲಿನ ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್‌ನಿಂದ ಆತ ಹೆಚ್ಚು ಗಳಿಸುತ್ತಾನೆ ಎಂದು ಶ್ವೇತಾ ಟ್ವೀಟ್ ಮಾಡಿದ್ದಾರೆ. ಕ್ವಾಲ್ಕಾಮ್ ಕಂಪನಿಯು ದೇಶದ ಅತ್ಯುತ್ತಮ ಸಂಭಾವನೆ ನೀಡುವ ಕಂಪನಿಗಳಲ್ಲಿ ಒಂದಾಗಿರುವುದರಿಂದ ಅನೇಕ ಜನರು ಈ ಟ್ವೀಟ್‌ನ ಹಿಂದಿನ ಸತ್ಯವನ್ನು ಅನುಮಾನಿಸಿದ್ದಾರೆ. ಮತ್ತೆ ಕೆಲವರು ಬೇರೆಕೆಲಸ ಮಾಡುವವರ ಗಳಿಕೆ ಉದಾಹರಣೆ ಹಾಗೂ ಅವರ ಶ್ರಮದ ಬಗ್ಗೆ ಮಾತನಾಡಿದ್ದಾರೆ.

ನನ್ನ ಮನೆ  ಬಳಿ ಪಾನಿಪುರಿ ವಾಲಾ  ತಿಂಗಳಿಗೆ 3-4 ಲಕ್ಷ ಗಳಿಸುತ್ತಾರೆ. ಅವರು ಕೇವಲ 6 ನೇ ತರಗತಿ ಪಾಸಾಗಿದ್ದಾರೆ. ಈಗ ಅವರು ಬೇರೆ ಸ್ಥಳದಲ್ಲಿ ಮತ್ತೊಂದು ಸ್ಟಾಲ್ ತೆರೆದಿರೋದಾಗಿ ನನಗೆ ಹೇಳಿದ್ದಾರೆ ಎಂದು ಟ್ವಿಟ್ ಮಾಡಿರುವ ಒಬ್ಬರು, ಲ್ಲಿ ಕೇವಲ ಗಳಿಕೆ ವಿಷಯ ಬರೋದಿಲ್ಲ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತು ಮೀಟಿಂಗ್ ನಲ್ಲಿ ಪಾಲ್ಗೊಳ್ಳುವ ಬದಲು ಅವರು ಇಡೀ ದಿನ ಟ್ರಾಫಿಕ್ ಹಾಗೂ ಮಾಲಿನ್ಯದಲ್ಲಿ ಇರ್ತಾರೆಂದು ಅವರು ಸೇರಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಓದಿ 1 ಕೋಟಿ ರೂ. ಗಳಿಸಿದ ಚಾಮರಾಜನಗರ ಟೊಮೆಟೊ ಬೆಳೆಗಾರರು: ರೈತರಿಗೆ ಹೆಣ್ಣು ಕೊಡುವಂತೆ ಮನವಿ

ಕ್ಯಾಬ್ ಚಲಾಯಿಸೋದು ಸುಲಭದ ಕೆಲಸವಲ್ಲ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಜಾಗಕ್ಕೆ ತಲುಪಿಸಬೇಕು. ಸರಿಯಾದ ರೇಟಿಂಗ್ ಸಿಕ್ಕಾಗ ಅವರ ಗಳಿಕೆ ಹೆಚ್ಚಾಗುತ್ತದೆ. ಇದು ನ್ಯಾಯಯುತವಾಗಿದೆ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. 
 

I was in a cab yesterday and that driver was an engineer.

He said he earns more from the cab driving than his corporate job at Qualcomm. 🥲

— Shweta Kukreja (@ShwetaKukreja_)
click me!