
ಡಿಜಿಟಲ್ ದುನಿಯಾ (digital world ) ದಲ್ಲಿ ಜನರಿಗೆ ಎಲ್ಲವೂ ಮನೆ ಬಾಗಿಲಿಗೆ ಬೇಕು. ಅವರಿಗೆ ಅಗತ್ಯವಿರುವ ವಸ್ತು, ಅರೆ ಕ್ಷಣದಲ್ಲಿ ಕುಳಿತಲ್ಲೇ ಸಿಕ್ಕಿದ್ರೆ ಬಹಳ ಖುಷಿ. ಆಫೀಸ್ ಇರಲಿ ಇಲ್ಲ ಮನೆ ಇರಲಿ, ತಮಗೆ ಅಗತ್ಯವಿರುವ ವಸ್ತುಗಳನ್ನು ಅವರು ಅಲ್ಲಿಗೇ ತರಿಸಿಕೊಳ್ತಾರೆ. ಈಗಿನ ದಿನಗಳಲ್ಲಿ ಆಹಾರ, ಪೂಜಾ ಸಾಮಗ್ರಿ, ಮನೆಗೆ ಅಗತ್ಯವಿರುವ ವಸ್ತು, ಔಷಧಿ – ಮಾತ್ರೆ, ಸಲೂನ್ ಸೇವೆ ಹೀಗೆ ಬಹುತೇಕ ಎಲ್ಲ ಸೇವೆಯನ್ನು ನೀವು ಮನೆಯಲ್ಲೇ ಪಡೆಯಬಹುದು. ಈಗ ಈ ಪಟ್ಟಿಗೆ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel) ಕೂಡ ಸೇರಿದೆ. ಪ್ರತಿಯೊಬ್ಬರ ಮನೆಯಲ್ಲಿ ಎರಡರಿಂದ ಮೂರು ವಾಹನಗಳಿವೆ. ಪೆಟ್ರೋಲ್ ಬಂಕ್ ಗೆ ಹೋಗದೇ ಮನೆಯಲ್ಲೇ ಕುಳಿತು ಪೆಟ್ರೋಲ್ – ಡೀಸೆಲ್ ಆರ್ಡರ್ ಮಾಡುವ ಜನರಿದ್ದಾರೆ. ದೇಶದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದೆ, ಮನೆಗೆ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಿದೆ, ಆನ್ಲೈನ್ ಆರ್ಡರ್ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಈ ಸಂದರ್ಭದಲ್ಲಿ ನೀವು ಪೆಟ್ರೋಲ್ – ಡೀಸೆಲ್ ಮಾರಾಟದ ಬ್ಯುಸಿನೆಸ್ ಶುರು ಮಾಡಿ ಹಣ ಸಂಪಾದನೆ ಮಾಡಬಹುದು.
2016 ರ ಮೊದಲು ಸರ್ಕಾರ, ಪೆಟ್ರೋಲ್ – ಡೀಸೆಲ್ ಆನ್ಲೈನ್ ಮಾರಾಟಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ಸರ್ಕಾರ ಒಪ್ಪಿಗೆ ನೀಡಿದೆ. ಈ ಬ್ಯುಸಿನೆಸ್ ನಲ್ಲಿ ಸದ್ಯ ಸ್ಪರ್ಧೆ ಕೂಡ ಕಡಿಮೆ ಇದೆ. ಯಾವುದಾದ್ರೂ ಅಪರೂಪದ, ಹೆಚ್ಚು ಆದಾಯ ಬರುವ ಹೊಸ ವ್ಯವಹಾರ ಶುರು ಮಾಡಬೇಕು ಎನ್ನುವವರು ಪೆಟ್ರೋಲ್ – ಡೀಸೆಲ್ ಆನ್ಲೈನ್ ಮಾರಾಟವನ್ನು ಶುರು ಮಾಡಬಹುದು.
PF, ITR ಸೇರಿದಂತೆ ಈ ಕೆಲಸಗಳನ್ನ ಮಾರ್ಚ್ 31ರೊಳಗೆ ಮುಗಿಸಿಬಿಡಿ; ಇಲ್ಲಾಂದ್ರೆ ನಷ್ಟ ಗ್ಯಾರಂಟಿ!
ಆನ್ಲೈನ್ ಪೆಟ್ರೋಲ್ – ಡೀಸೆಲ್ ಮಾರಾಟಕ್ಕೆ ಖರ್ಚು : ನೀವು ಈ ಆನ್ಲೈನ್ ಬ್ಯುಸಿನೆಸ್ ಶುರು ಮಾಡುವ ಆಲೋಚನೆ ಮಾಡಿದ್ರೆ ಅದಕ್ಕೆ ಎಷ್ಟು ಖರ್ಚು ಬರುತ್ತೆ ಎಂಬುದನ್ನು ತಿಳಿಯಿರಿ. ಸುಮಾರು 12 -15 ಲಕ್ಷ ರೂಪಾಯಿ ಖರ್ಚು ಬರುತ್ತದೆ. ನೀವು ಬ್ಯಾಂಕ್ ನಿಂದ ಸಾಲ ಮಾಡಿ ಈ ವ್ಯಾಪಾರ ಶುರು ಮಾಡಬಹುದು. ಸರ್ಕಾರ ಸ್ಟಾರ್ಟ್ ಅಪ್ ಅಥವಾ ಬ್ಯುಸಿನೆಸ್ ಶುರು ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ನೀವು ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದು ಈ ವ್ಯಾಪಾರ ಶುರು ಮಾಡಬಹುದು.
ಈ ಬ್ಯುಸಿನೆಸ್ ಶುರು ಮಾಡಲು ತೈಲ ಕಂಪನಿಗಳ ಒಪ್ಪಿಗೆ ಅಗತ್ಯವಿರುತ್ತದೆ. ನೀವು ನಿಮ್ಮ ಪ್ರಾಜೆಕ್ಟ್ ಮಾಹಿತಿಯನ್ನು ತೈಲ ಕಂಪನಿಗೆ ನೀಡಬೇಕು. ಅವರಿಗೆ ನಿಮ್ಮ ಆಫರ್ ಇಷ್ಟವಾದ್ರೆ ಆನ್ಲೈನ್ ಮಾರಾಟಕ್ಕೆ ಒಪ್ಪಿಗೆ ಸಿಗುತ್ತದೆ. ನೀವು ಮೊಬೈಲ್ ಅಪ್ಲಿಕೇಷನ್ ಅಥವಾ ವೆಬ್ಸೈಟ್ ರಚಿಸಿ, ಅದ್ರ ಮೂಲಕ ಆನ್ಲೈನ್ ಪೆಟ್ರೋಲ್ – ಡೀಸೆಲ್ ವ್ಯವಹಾರ ಶುರು ಮಾಡಬೇಕಾಗುತ್ತದೆ.
ಮುಕೇಶ್ ಅಂಬಾನಿಗೆ ಜಾಕ್‌ಪಾಟ್, ಒಂದೂವರೆ ತಿಂಗಳಲ್ಲಿ 100 ಮಿಲಿಯನ್ ಬಂಪರ್
ಪೆಟ್ರೋಲ್ – ಡೀಸೆಲ್ ಮಾರಾಟ ಮಿತಿ : ಪೆಟ್ರೋಲ್ ಮತ್ತು ಡೀಸೆಲ್ ಆನ್ಲೈನ್ ಮಾರಾಟಕ್ಕೆ ಮಿತಿ ಇದೆ. ಒಬ್ಬ ವ್ಯಕ್ತಿ ಗರಿಷ್ಠ 300 ಲೀಟರ್ ಪೆಟ್ರೋಲ್ ಮತ್ತು 25,000 ಲೀಟರ್ ಡೀಸೆಲ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಅದಕ್ಕಿಂತ ಹೆಚ್ಚಿನ ಆರ್ಡರ್ ತೆಗೆದುಕೊಳ್ಳುವಂತಿಲ್ಲ.
ಪೆಟ್ರೋಲ್ – ಡೀಸೆಲ್ ಮಾರಾಟದಿಂದ ಗಳಿಕೆ ಎಷ್ಟು? : ನೀವು ಎಷ್ಟು ಆರ್ಡರ್ ಪಡೆಯುತ್ತೀರಿ ಎಂಬುದನ್ನು ಗಳಿಕೆ ಅವಲಂಭಿಸಿದೆ. ನೀವು ತಿಂಗಳಿಗೆ 10 ರಿಂದ 20 ಆರ್ಡರ್ ಪಡೆದ್ರೂ ಪ್ರತಿ ತಿಂಗಳು ನಿಮ್ಮ ಗಳಿಗೆ 5 ರಿಂದ ಆರು ಲಕ್ಷವಾಗುತ್ತದೆ. ಹೆಚ್ಚೆಚ್ಚು ಆರ್ಡರ್ ಸಿಕ್ಕಂತೆ ಗಳಿಕೆ ಏರಿಕೆಯಾಗ್ತಾ ಹೋಗುತ್ತದೆ. ಸದ್ಯ ಆನ್ಲೈನ್ ಆರ್ಡರ್ ಸಂಖ್ಯೆ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಆನ್ಲೈನ್ನಲ್ಲಿಯೇ ಪೆಟ್ರೋಲ್ ಆರ್ಡರ್ ಮಾಡುವ ಸಾಧ್ಯತೆ ದಟ್ಟವಾಗ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.