ಮುಕೇಶ್ ಅಂಬಾನಿ ಕೇವಲ ಒಂದೂವರೆ ತಿಂಗಳಲ್ಲಿ ಜಾಕ್‌ಪಾಟ್ ಹೊಡೆದಿದ್ದಾರೆ. ಜಿಯೋಹಾಟ್‌ಸ್ಟಾರ್ ಮೂಲಕ ಮುಕೇಶ್ ಅಂಬಾನಿ ಊಹೆಗೂ ನಿಲುಕದ ಆದಾಾಯ ಗಳಿಸುತ್ತಿದ್ದಾರೆ. 45 ದಿನದಲ್ಲಿ ಅಂಬಾನಿ ಬರೆದ ಹೊಸ ದಾಖಲೆ ಏನು?
ಮುಂಬೈ(ಮಾ.28) ವಿಶ್ವದ ಶ್ರೀಮಂತರ ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮುಂದಿನ ವರ್ಷದ ಪಟ್ಟಿಯಲ್ಲಿ ಅಂಬಾನಿ ವಿಶ್ವದ ಹಲವು ದಿಗ್ಗಜರನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಮುಕೇಶ್ ಅಂಬಾನಿಯ ಜಿಯೋಹಾಟ್‌ಸ್ಟಾರ್. ಡಿಸ್ನಿ ಹಾಟ್‌ಸ್ಟಾರ್ ಹಾಗೂ ಜಿಯೋ ಸಿನಿಮಾ ಫೆಬ್ರವರಿ 14ರಂದು ವಿಲೀನಗೊಂಡು, ಜಿಯೋಹಾಟ್‌ಸ್ಟಾರ್ ರೀಬ್ರ್ಯಾಂಡ್ ಮೂಲಕ ಲಾಂಚ್ ಆಗಿತ್ತು. ಇದೀಗ ಕೇವಲ ಒಂದೆವರೆ ತಿಂಗಳು ಪೂರ್ಣಗೊಂಡಿಲ್ಲ. ಈಗಲೇ ಜಿಯೋಹಾಟ್‌ಸ್ಟಾರ್ 100 ಮಿಲಿಯನ್ ಪಾವತಿ ಚಂದಾದಾರರನ್ನು ಪೂರ್ಣಗೊಳಿಸಿದೆ.
ಮಾರ್ಚ್ 28ರ ವೇಳೆಗೆ ಜಿಯೋಹಾಟ್‌ಸ್ಟಾರ್ ಪಾವತಿ ಸಬ್‌ಸ್ಕ್ರೈಬರ್ ಸಂಖ್ಯೆ ಬರೋಬ್ಬರಿ 100 ಮಿಲಿಯನ್ ದಾಟಿದೆ. ಇದಕ್ಕೆ ಮುಖ್ಯ ಕಾರಣ ಐಪಿಎಲ್ 2025. ಮಾರ್ಚ್ 22ರಿಂದ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಜಿಯೋಹಾಟ್‌ಸ್ಟಾರ್ ಮೂಲಕ ಐಪಿಎಲ್ ವೀಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.ಫೆಬ್ರವರಿಯಲ್ಲಿ ಜಿಯೋಹಾಟ್‌ಸ್ಟಾರ್ ಆರಂಭಗೊಂಡಾಗ 50 ಮಿಲಿಯನ್ ಪಾವತಿ ಸಬ್‌ಸ್ಕ್ರೈಬರ್ ಹಾಗೂ 500 ಮಿಲಿಯನ್ ಬಳಕೆದಾರರಿದ್ದರು. ಇದೀಗ ಎಲ್ಲವೂ ದುಪ್ಪಟ್ಟಾಗಿದೆ. ಜಿಯೋಹಾಟ್‌ಸ್ಟಾರ್ ಐಪಿಎಲ್ ಸೇರಿದಂತೆ ಇತರ ನೇರ ಪ್ರಾಸರ ಉಚಿತವಾಗಿ ನೀಡುತ್ತಿದೆ. ಹೀಗಾಗಿ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ವಿಶ್ವದ ಶ್ರೀಮಂತರ ಪೈಕಿ ಅದಾನಿ-ರೋಶ್ನಿ ನಾಡರ್ ದಾಖಲೆ , ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್
ಜಿಯೋಹಾಟ್‌ಸ್ಟಾರ್‌ಗಾಗಿ ರಿಲಯನ್ಸ್ ಜಿಯೋ ಹಲವು ಪ್ಲಾನ್ ಘೋಷಿಸಿದೆ. ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಮೂಲಕ ಐಪಿಎಲ್ ಕ್ರಿಕೆಟ್ ವೀಕ್ಷಿಸಲು ಜಿಯೋ ಅನುವು ಮಾಡಿಕೊಟ್ಟಿದೆ. ಇದರ ಜೊತೆಗೆ ಏರ್ಟೆಲ್, ವೋಡಾಫೋನ್ ಐಡಿಯಾ ಸೇರಿದಂತೆ ಇತರ ಟೆಲಿಕಾಂ ನೆಟ್‌ವರ್ಕ್ ಕೂಡ ಅತೀ ಕಡಿಮೆಯ ರೀಚಾರ್ಜ್ ಪ್ಲಾನ್ ನೀಡಿದೆ. ಹೀಗಾಗಿ ಬಹುತೇಕ ಎಲ್ಲಾ ಟೆಲಿಕಾಂ ನೆಟ್‌ವರ್ಕ್ ಬಳೆಕೆದಾರರು ಜಿಯೋಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಪಡೆದುಕೊಂಡಿದ್ದಾರೆ.
ಜಿಯೋಹಾಟ್‌ಸ್ಟಾರ್ ಅಂಬಾನಿ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿದೆ.ಭಾರತದ ಪ್ರಮುಖ ಕ್ರಿಕೆಟ್ ನೇರ ಪ್ರಸಾರ ಸೇರಿದಂತೆ ಸಿನಿಮಾ ಹಾಗೂ ಇತರ ಮನೋರಂಜನೆಗಳನ್ನು ಪ್ರಸಾರ ಮಾಡುತ್ತಿದೆ. ಮನೋರಂಜನೆ ವಿಭಾಗದಲ್ಲಿ ಇದೀಗ ಜಿಯೋಹಾಟ್‌ಸ್ಟಾರ್ ಏಕಸ್ವಾಮ್ಯ ಸಾಧಿಸಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಯಾವುದೂ ಇಲ್ಲ. ಹೀಗಾಗಿ ಮುಕೇಶ್ ಅಂಬಾನಿ ಉದ್ಯಮ ಹಾಗೂ ಆದಾಯ ಡಬಲ್ ಆಗಿದೆ. ಜಿಯಹಾಟ್‌ಸ್ಟಾರ್ 10 ಭಾಷೆಗಳಲ್ಲಿ ಕಾರ್ಯಕ್ರಮ ನೀಡುತ್ತಿದೆ. ಗ್ರಾಹಕರಿಗೆ ಒಂದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹಾಲಿವುಡ್‌ನಿಂದ ಬಾಲಿವುಡ್, ಒಟಿಟಿಯಿಂದ ಹಿಡಿದು ಸ್ಥಳೀಯ ಭಾಷೆಗಳ ಎಲ್ಲಾ ಸಿನಿಮಾ, ಮನೋರಂಜನೆ ಕಾರ್ಯಕ್ರಮಗಳು, ಐಪಿಎಲ್, ಟೀಂ ಇಂಡಿಯಾ ಸರಣಿ ಸೇರಿದಂತೆ ಎಲ್ಲವೂ ಜಿಯೋಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
ಕಳೆದ 10 ವರ್ಷದಲ್ಲಿ ಜಿಡಿಪಿ ಡಬಲ್ IMF ವರದಿ, 3 ತಿಂಗಳಲ್ಲಿ ಜಪಾನ್ ಹಿಂದಿಕ್ಕಿಲಿದೆ ಭಾರತ