ಬರೀ ಯೂಟ್ಯೂಬ್ ವೀವ್ಸ್ ನಿಂದ ಮಾತ್ರವಲ್ಲ ಹೀಗೂ ಹಣ ಗಳಿಸ್ಬಹುದು

Published : Apr 26, 2025, 02:27 PM ISTUpdated : Apr 27, 2025, 08:35 AM IST
ಬರೀ ಯೂಟ್ಯೂಬ್ ವೀವ್ಸ್ ನಿಂದ ಮಾತ್ರವಲ್ಲ ಹೀಗೂ ಹಣ ಗಳಿಸ್ಬಹುದು

ಸಾರಾಂಶ

ಯೂಟ್ಯೂಬ್‌ನಲ್ಲಿ ಹಣ ಗಳಿಸಲು ವೀಕ್ಷಣೆಗಳಷ್ಟೇ ಮುಖ್ಯವಲ್ಲ. ಪಾರ್ಟನರ್‌ ಶಿಪ್ ಮೂಲಕ ಜಾಹೀರಾತುಗಳಿಂದ, ಬ್ರ್ಯಾಂಡ್ ಪ್ರಚಾರ, ಲಿಂಕ್ ಮೂಲಕ ಕಮಿಷನ್ ಮತ್ತು ಸ್ವಂತ ಉತ್ಪನ್ನ ಮಾರಾಟದ ಮೂಲಕವೂ ಗಳಿಕೆ ಸಾಧ್ಯ. ಸಕ್ರಿಯ ಪ್ರೇಕ್ಷಕರು, ಉತ್ತಮ ವಿಷಯ ಮತ್ತು ಮಾರ್ಕೆಟಿಂಗ್ ಕೌಶಲ್ಯಗಳಿಂದ ಯಶಸ್ಸು ಗಳಿಸಬಹುದು.

ಯೂಟ್ಯೂಬ್ (YouTube) ಕೇವಲ ವಿಡಿಯೋ ವೇದಿಕೆ ಆಗಿಲ್ಲ. ಅದು ಗಳಿಕೆಗೆ ಅತ್ಯುತ್ತಮ ಮೂಲವಾಗಿ ಬದಲಾಗಿದೆ. ಯೂಟ್ಯೂಬ್ ಮೂಲಕ ಲಕ್ಷಾಂತರ ರೂಪಾಯಿ ಗಳಿಕೆ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ.  ಯೂಟ್ಯೂಬ್ ವಿಡಿಯೋ ಪೋಸ್ಟ್ ಮಾಡಿ ಜನರು ಹಣ ಸಂಪಾದನೆ ಮಾಡ್ತಾರೆ. ಕೇವಲ ವೀವ್ಸ್ (views) ನಿಂದ ಮಾತ್ರ ಹಣ ಬರೋದು ಎನ್ನುವ ಕಾರಣಕ್ಕೆ ಕೆಲವರು ವೀವ್ಸ್ ಮೇಲೆ ಹೆಚ್ಚಿನ ಗಮನ ಹರಿಸ್ತಾರೆ. ವೀವ್ಸ್ ಹೆಚ್ಚಿಸಿಕೊಳ್ಳೋಕೆ ಸಾಕಷ್ಟು ಪ್ರಯತ್ನ ನಡೆಸ್ತಾರೆ. ಯೂಟ್ಯೂಬ್ ಚಾನೆಲ್ (YouTube Channel) ಮೋನಿಟೈಸ್ ಆಗಿದೆ, ಆದ್ರೆ ವೀವ್ಸ್ ಚೆನ್ನಾಗಿ ಬರ್ತಿಲ್ಲ, ಗಳಿಕೆ ಇದ್ರಿಂದ ಕಡಿಮೆ ಆಗುತ್ತೆ ಅಂತ ಜನರು ಟೆನ್ಷನ್ ಮಾಡಿಕೊಳ್ಬೇಕಾಗಿಲ್ಲ.  ಬರೀ ವೀವ್ಸ್ ನಿಂದ ಮಾತ್ರವಲ್ಲ ಬೇರೆ ವಿಧಾನಗಳ ಮೂಲಕವೂ ನೀವು ಯೂಟ್ಯೂಬ್ ನಿಂದ ಹಣ ಸಂಪಾದನೆ ಮಾಡ್ಬಹುದು. ನಾವಿಂದು ಯೂಟ್ಯೂಬ್ ನಲ್ಲಿ ಹೇಗೆಲ್ಲ ಹಣ ಗಳಿಸಬಹುದು ಎನ್ನುವ ಟಿಪ್ಸ್ ನೀಡ್ತೇವೆ. 

ಯೂಟ್ಯೂಬ್ ನಿಂದ ಗಳಿಕೆ ಹೇಗೆ? : 

ಪಾರ್ಟನರ್ ಶಿಪ್ (Partnership) ಮೂಲಕ ಹಣ ಗಳಿಸಿ : ನಿಮ್ಮ ಯೂಟ್ಯೂಬ್ ಚಾನಲ್  1000  ಸಬ್ಸ್ಕ್ರೈಬರ್ ಮತ್ತು 4000 ಗಂಟೆಗಳ ವೀಕ್ಷಣೆ ಸಮಯ ಮುಗಿಸಿ, ಮೋನಿಟೈಸ್ ಆಗಿದೆ ಎಂದಾದ್ರೆ ನೀವು ಯೂಟ್ಯೂಬ್ ಪಾರ್ಟನರ್ ಶಿಪ್ ಕಾರ್ಯಕ್ರಮಕ್ಕೆ ಸೇರಬಹುದು. ಇದಾದ ನಂತರ YouTube ನಿಮ್ಮ ವೀಡಿಯೊದಲ್ಲಿ ಜಾಹೀರಾತು ಹಾಕುತ್ತೆ. ಇದ್ರಿಂದ ನೀವು ಹಣ ಗಳಿಸಬಹುದು. ಆದ್ರೆ ಇದ್ರಲ್ಲಿ ನೀವು ವೀವ್ಸ್ ಬದಲು ಆಡ್ ಕ್ಲಿಕ್ ಹಾಗೂ ಜಾಹೀರಾತು ವೀಕ್ಷಣೆ ಮೇಲೆ  ಹಣ ಸಂಪಾದನೆ ಮಾಡ್ತೀರಿ. 

20 ವರ್ಷಗಳ ಹಿಂದೆ ಮೊದಲ ಬಾರಿ ಅಪ್ಲೋಡ್ ಆಗಿತ್ತು ಈ ಯುಟ್ಯೂಬ್

ಬ್ರ್ಯಾಂಡ್ (brand) ಪ್ರಚಾರ :  ನೀವು ಉತ್ತಮ ಸಬ್ಜೆಕ್ಟನ್ನು ಜನರಿಗೆ ನೀಡ್ತಿದ್ದು, ನಿಮ್ಮ ಬಳಕೆದಾರರು ನಿಮ್ಮ ವಿಡಿಯೋವನ್ನು ಹೆಚ್ಚು ವೀಕ್ಷಿಸ್ತಿದ್ದಾರೆ ಎಂದಾಗ ನಿಮ್ಮನ್ನು ಕೆಲ ಬ್ರ್ಯಾಂಡ್ ಮಾಲೀಕರು ಸಂಪರ್ಕಿಸ್ತಾರೆ. ಅವರ ಉತ್ಪನ್ನ, ವಸ್ತುಗಳ ಬಗ್ಗೆ ನೀವು ವಿಡಿಯೋದಲ್ಲಿ ಮಾಹಿತಿ ನೀಡ್ಬೇಕು. ಇದನ್ನು ಪ್ರಾಯೋಜಕತ್ವ ಅಥವಾ ಬ್ರ್ಯಾಂಡ್ ಒಪ್ಪಂದ ಎಂದು ಕರೆಯಲಾಗುತ್ತದೆ.  ನಿಮ್ಮ ವಿಡಿಯೋಗೆ ಉತ್ಪನ್ನದ ಮಾಲೀಕರು ನಿಮಗೆ ಹಣ ನೀಡ್ತಾರೆ. ಇಲ್ಲಿ ಮಿಲಿಯಸ್ ಸಬ್ಸ್ಕ್ರೈಬರ್ ಇರ್ಬೇಕಾಗಿಲ್ಲ. ಸಣ್ಣ ವೀವರ್ಸ್ ಇದ್ರೂ ಸಾಕು. ಆದ್ರೆ  ಆಕ್ಟಿವ್ ಆಡಿಯನ್ಸ್ ಬೇಸ್ ಇರ್ಬೇಕು. 

ಲಿಂಕ್ ಮೂಲಕ ಕಮಿಷನ್ :  ಅಂಗಸಂಸ್ಥೆ ಮಾರ್ಕೆಟಿಂಗ್ ಮೂಲಕ ನೀವು ಯಾವುದೇ ಉತ್ಪನ್ನದ ಲಿಂಕ್ ಅನ್ನು ನಿಮ್ಮ ವಿಡಿಯೋ ಡಿಟೇಲ್ ನಲ್ಲಿ ಹಾಕಬಹುದು. ಜನರು ಆ ಲಿಂಕ್ಓಪನ್ ಮಾಡಿ, ಅದ್ರಿಂದ ಏನಾದ್ರೂ ಖರೀದಿ ಮಾಡಿದ್ರೆ ನಿಮಗೆ ಕಮಿಷನ್ ಸಿಗುತ್ತದೆ. ಟೆಕ್ನಾಲಜಿ, ಫ್ಯಾಷನ್, ಬ್ಯೂಟಿ ಪ್ರಾಡೆಕ್ಟ್   ಕಾನ್ಸೆಪ್ಟ್ ಮಾಡ್ತಿದ್ದರೆ ನೀವು ಅದಕ್ಕೆ ಸಂಬಂಧಿಸಿದ ಲಿಂಕ್ ಹಾಕ್ಬಹುದು. 

ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್ ಲಕ್ಷ

ಸ್ವಂತ ಉತ್ಪನ್ನ, ಸ್ವಂತ ಮಾರಾಟ : ನೀವು ಯೂಟ್ಯೂಬ್ ಚಾನೆಲ್ ಹೊಂದಿದ್ದರೆ ಅದ್ರ ಮೂಲಕ ನಿಮ್ಮ ವಸ್ತು ಹಾಗೂ ಉತ್ಪನ್ನಗಳನ್ನು ನೀವು ಅಲ್ಲಿಯೇ ಪ್ರಚಾರ ಮತ್ತು ಮಾರಾಟ ಮಾಡಬಹುದು. ಇ-ಪುಸ್ತಕ, ಆನ್ಲೈನ್ ಕೋರ್ಸ್ನಂತಹ  ಯಾವುದೇ ಡಿಜಿಟಲ್ ಉತ್ಪನ್ನವನ್ನು ಅಥವಾ  ಟಿ-ಶರ್ಟ್, ಗಿಫ್ಟ್ ಉತ್ಪನ್ನ ಹೊಂದಿದ್ದರೆ  ಅದನ್ನು ನಿಮ್ಮ ಚಾನಲ್ ಮೂಲಕ ಪ್ರಚಾರ ಮಾಡಬಹುದು. ಪ್ರೇಕ್ಷಕರಿಗೆ ಇದು ಇಷ್ಟವಾಗಿದ್ರೆ ನಿಮ್ಮನ್ನು ಅವರು ಸಂಪರ್ಕಿಸುತ್ತಾರೆ. ನಿಮ್ಮ ಉತ್ಪನ್ನವನ್ನು ಖರೀದಿ ಮಾಡ್ತಾರೆ. ಇದ್ರ ಮೂಲಕ ನಿಮ್ಮ ಬ್ರ್ಯಾಂಡ್ ಕ್ರಿಯೇಟ್ ಮಾಡ್ಬಹುದು ಜೊತೆಗೆ ಹಣ ಸಂಪಾದನೆ ಮಾಡ್ಬಹುದು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ