ಟ್ಯಾಕ್ಸಿ ಸೇವೆಗೆ ಹೊಸ ಕಾರು ಖರೀದಿಸಿ ಒಂದೇ ಟ್ರಿಪ್‌ನಿಂದ 59 ಸಾವಿರ ರೂ ಗಳಿಸಿದ ಚಾಲಕ

Published : Apr 25, 2025, 12:05 PM ISTUpdated : Apr 25, 2025, 12:14 PM IST
ಟ್ಯಾಕ್ಸಿ ಸೇವೆಗೆ ಹೊಸ ಕಾರು ಖರೀದಿಸಿ ಒಂದೇ ಟ್ರಿಪ್‌ನಿಂದ 59 ಸಾವಿರ ರೂ ಗಳಿಸಿದ ಚಾಲಕ

ಸಾರಾಂಶ

ಟ್ಯಾಕ್ಸಿ ಚಾಲಕನಾಗಿ ಸಂಪಾದನೆ ಮಾಡಲು ಈತ ಹೊಸ ಕಾರು ಖರೀದಿಸಿದ್ದಾನೆ. ಎಲ್ಲರಂತೆ ಕೆಲಸ ಆರಂಭಿಸಿಲ್ಲ, ಸಣ್ಣ ಬದಲಾವಣೆ,  ಭಿನ್ನ ಅಪ್ರೋಚ್‌ನಿಂದ ಈತ ಒಂದೇ ಟ್ರಿಪ್‌ನಿಂದ 59,000 ರೂ ಆದಾಯ ಗಳಿಸಿದ್ದಾನೆ. ಇಷ್ಟೇ ಅಲ್ಲ ತಿಂಗಳಿಗೆ ಖರ್ಚು ವೆಚ್ಚಾ ಎಲ್ಲಾ ಕಳೆದು 1.7 ಲಕ್ಷ ರೂ ಸಾಲದ ಇಎಂಐ ಪಾವತಿಸುತ್ತಿದ್ದಾನೆ.

ಬಿಜಿಂಗ್(ಏ.25) ಕೆಲಸಕ್ಕೆ ಗುಡ್ ಬೈ ಹೇಳಿ ಉದ್ಯಮ ಆರಂಭಿಸುತ್ತಿರುವವರ ಸಂಖ್ಯೆ ಹೆಚ್ಚು. ಹೊಸ ಆಲೋಚನೆ, ಭಿನ್ನ ನಡೆ, ಹೊಸ ಸೇವೆ ಹೀಗೆ ಹಲವು ರೀತಿಯಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಇಲ್ಲೊಬ್ಬ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಟ್ಯಾಕ್ಸಿ ಸೇವೆಯಲ್ಲೇ ಹೆಚ್ಚು ಆದಾಯಗಳಿಸಲು ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಹೊಸ ಕಾರು ಖರೀದಿಸಿದ್ದಾನೆ. ಈತನ ಭಿನ್ನ ಆಲೋಚನೆ, ಧೈರ್ಯ ಹಾಗೂ ಸಾಹಸ ಕೈಹಿಡಿದಿದೆ. ಒಂದೇ ಟ್ರಿಪ್‌ನಲ್ಲಿ 59,000 ರೂಪಾಯಿ ಗಳಿಸಿದ್ದಾನೆ. ಇದೀಗ ಈತ, ಕುಟುಂಬದ ಖರ್ಚು ವೆಚ್ಚ ಎಲ್ಲವನ್ನೂ ಕಳೆದು 1.7 ಲಕ್ಷ ರೂಪಾಯಿ ಸಾಲದ ಕಂತು ಕೂಡ ಪಾವತಿಸಿ ಸಂತೋಷವಾಗಿದ್ದಾನೆ.

ಸೇಮ್ ಚಾಲಕ ವೃತ್ತಿ, ಆದಾಯ ಮಾತ್ರ ಡಬಲ್
ಸದ್ಯ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿರುವ ಚಾಲಕ ಚೀನಾದ ಹೆನಾನ್ ಪ್ರಾಂತ್ಯದ ಯುಆನ್. 2019 ರಿಂದ ಈತ ಬೀಜಿಂಗ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇತರ ಕಂಪನಿಗಳ ಕಾರು ಚಾಲಕನಾಗಿ ಕೆಲಸ ಮಾಡಿದ್ದಾನೆ. ಈ ವೇಳೆ ಚಾಲಕ ವೃತ್ತಿ, ಉದ್ಯಮ ಎಲ್ಲವನ್ನೂ ಅರಿತುಕೊಂಡಿದ್ದಾನೆ. ಇದೇ ಉದ್ಯಮವನ್ನು ಭಿನ್ನವಾಗಿ ಹಾಗೂ ಹೆಚ್ಚು ಆದಾಯಗಳಿಸವಂತೆ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ಹಲವು ರೀತಿಯಲ್ಲಿ ಆಲೋಚಿಸಿದ್ದಾನೆ. ಕೊನೆಗೆ ಈತ ಧೈರ್ಯ ಮಾಡಿ ಮರ್ಸಿಡಿಸ್ ಮೇಬ್ಯಾಕ್ ಕಾರು ಖರೀದಿಸಿದ್ದಾನೆ. ಈ ಲಕ್ಷುರಿ ಕಾರನ್ನು ಟ್ಯಾಕ್ಸಿ ಕಾರಾಗಿ ಉಪಯೋಗಿಸಲು ಖರೀದಿಸಿದ್ದಾನೆ.ಹಲವರು ಐಷಾರಾಮಿ ಕಾರುಗಳಲ್ಲಿ ಬಂದರೆ ಒಳ್ಳೆ ಆದಾಯ, ಆದರೆ ಸಿಗದೇ ಇದ್ದರೆ ಎಲ್ಲವೂ ಲಾಸ್. ಇದಕ್ಕಿಂತ ಸಾಮಾನ್ಯ ಕಾರು ಖರೀದಿಸಿದರೆ ಪ್ರತಿ ದಿನದ ಆದಾಯಕ್ಕೆ ಯಾವುದೇ ಮೋಸ ಆಗಲ್ಲ ಎಂದು ಹಲವರು ಸಲಹೆ ನೀಡಿದ್ದಾರೆ.

ಊಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಕರು ಬಿಟ್ಟುಹೋದ ವಸ್ತುಗಳ ಪಟ್ಟಿ ಬಿಡುಗಡೆ; ಈ ಗೋಲ್ಡ್ ಬಿಸ್ಕತ್, ಮದುವೆ ಸೀರೆ ನಿಮ್ಮದೇ?

ಒಂದೇ ಟ್ರಿಪ್‌ನಲ್ಲಿ 59,000 ರೂ 
ಧೈರ್ಯ ಮಾಡಿದ ಈತ 1.8 ಕೋಟಿ ರೂಪಾಯಿ ನೀಡಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಖರೀದಿಸಿದ್ದಾನೆ. ತನ್ನದ ಸ್ವಂತ ಕಾರು, ತಾನೇ ಚಾಲಕ, ತನ್ನದೇ ಉದ್ಯಮ. ಆರಂಭಗೊಂಡ ಆರಂಭಿಕ ದಿನದಲ್ಲೇ ಉದ್ಯಮಿಯೊಬ್ಬರು ಇಡೀ ದಿನ ಕಾರು ಬುಕ್ ಮಾಡಿದ್ದರು. ಬೀಜಿಂಗ್ ನಗರದಲ್ಲೇ ಕಾರ್ಯಕ್ರಮ, ಮೀಟಿಂಗ್ ಸೇರಿದಂತೆ ಹಲವು ಕಾರಣಗಳಿಂದ ಕಾರು ಬುಕ್ ಮಾಡಿದ್ದಾರೆ. ಉತ್ತಮ ಸೇವೆ ನೀಡಿದ ಚಾಲಕನ ಲಕ್ಷುರಿ ಕಾರಿನ ಪ್ರತಿ ಕಿಲೋಮೀಟರ್, ವೈಟಿಂಗ್ ಚಾರ್ಜ್ ಸೇರಿ ಎಲ್ಲಾ ಬಿಲ್ ಒಟ್ಟು ಸೇರಿಸಿ 59,000 ರೂಪಾಯಿ ಆದಾಯ ಪಡೆದಿದ್ದಾರೆ. ಒಂದೇ ಟ್ರಿಪ್‌ನಲ್ಲಿ, ಒಂದೇ ದಿನ 59,000 ರೂಪಾಯಿ ಆದಾಯ ಪಡೆದು ಸಂಭ್ರಮಿಸಿದ್ದಾನೆ.

ಲಕ್ಷುರಿ ಟ್ಯಾಕ್ಸಿ ಕಾರು ಆದರೆ ಕಡಿಮೆ ಬಾಡಿಗೆ ಕಾರಣದಿಂದ ಹಲವು ಉದ್ಯಮಿಗಳು ಇದೇ ಕಾರು ಬುಕ್ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಈತನ ಆದಾಯ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ. ಈತನ ಕುಟುಂಬದ ಖರ್ಚು ವೆಚ್ಚಾ ಎಲ್ಲವನ್ನು ಈ ಕಾರು ಚಾಲನೆಯಿಂದಲೇ ನೋಡಿಕೊಳ್ಳುತ್ತಿದ್ದಾನೆ. 1.8 ಕೋಟಿ ರೂಪಾಯಿ ನೀಡಿ ಖರೀದಿಸಿದ ಈ ಕಾರಿಗೆ ಪ್ರತಿ ತಿಂಗಳು ಇದೀಗ 1.7 ಲಕ್ಷ ರೂಪಾಯಿ ಲೋನ್ ಪಾವತಿ ಮಾಡುತ್ತಿದ್ದಾನೆ.

ಒಂದೇ ದಿನ 1.1 ಲಕ್ಷ ರೂ ಗಳಿಕೆ
ತಿಂಗಳಿಗೆ ಈತ ಸಾರಸರಿ 40 ಆರ್ಡರ್ ಪಡೆಯುತ್ತಾನೆ. ಈ ಮೂಲಕ ಪ್ರತಿ ತಿಂಗಳು ಕನಿಷ್ಠ ಅಂದರೆ 15 ರಿಂದ 20 ಲಕ್ಷ ರೂಪಾಯಿ ದುಡಿಯುತ್ತಿದ್ದಾನೆ. ಈ ಪೈಕಿ ಒಂದೇ ದಿನ 1.1 ಲಕ್ಷ ರೂಪಾಯಿ ಪಡೆದಿರುವುದು ಗರಿಷ್ಠ ಎಂದು ಯುಆನ್ ಹೇಳಿದ್ದಾರೆ. 

ಬೆಂಗಳೂರು: ಇನ್ಫೋಸಿಸ್ ಉದ್ಯೋಗಿ, ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!