ಏನ್ರೀ ಇದು: 1 ಕೆಜಿ ಚಹಾಪುಡಿಗೆ 40 ಸಾವಿರ ಕೊಡ್ಬೇಕಂತೆ!

By Web DeskFirst Published Aug 25, 2018, 7:48 PM IST
Highlights

ಒಂದು ಕೆಜಿ ಟೀ ಪುಡಿ ಬೆಲೆ 40 ಸಾವಿರ ರೂ! ಅರುಣಾಚಲ ಪ್ರದೇಶದ ವಿಶಿಷ್ಟ ಮಾದರಿ ಪುಡಿ! ವಿಶ್ವದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಟೀ ಪುಡಿ! ಗೋಲ್ಡನ್‌ ನೀಡಲ್ಸ್‌ ಟೀ ತಳಿಯ ವಿಶೀಷ್ಟ ಪುಡಿ
 

ಗುವಹಾಟಿ(ಆ.25): ನೀವು ಚಹಾ ಭಕ್ತರೇ?. ದಿನಕ್ಕೆ ಎಷ್ಟು ಬಾರಿ ಚಹಾ ಸೇವನೆ ಮಾಡ್ತೀರಿ?. ಅಷ್ಟಕ್ಕೂ ನಿಮ್ಮ ಟೀ ಪುಟಿಯ ಬೆಲೆ ಎಷ್ಟು?. ಇದೆನಿದು ಕುಡಿಯೋ ಒಂದು ಕಪ್ ಟೀಗೆ ಇಷ್ಟೆಲ್ಲಾ ಪ್ರಶ್ನೆಗಳೇಕೆ ಅಂತಾ ಯೋಚನೆ ಮಾಡ್ತಾ ಇದ್ದೀರಾ?. ಇಷ್ಟೆಲ್ಲಾ ಪ್ರಶ್ನೆ ಯಾಕಂದ್ರೆ ನೀವು ಎಂದಾದರೂ ಉತ್ಕೃಷ್ಟ ಮಾದರಿಯ ಟೀ ಪುಡಿಯಿಂದ ಮಾಡಿದ ಚಹಾದ ರುಚಿ ನೋಡಿದ್ದೀರಾ ಅಥವಾ ಇಲ್ವಾ ಎಂದು ತಿಳಿಯಲು.

ಅರುಣಾಚಲ ಪ್ರದೇಶದ ವಿಶಿಷ್ಟ ಮಾದರಿಯ ಚಹಾ ಪುಡಿಯು ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ ಕೆ.ಜಿಗೆ 40 ಸಾವಿರ ರೂ.ಗೆ ಮಾರಾಟವಾಗಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಟೀ ಪುಡಿ ಎಂಬ ಹೆಗ್ಗಳಿಕೆಗೆ ಈ ಚಹಾ ಪುಡಿ ಪಾತ್ರವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಈ ಚಹಾ ಪುಡಿ ಬರೋಬ್ಬರಿ 40 ಸಾವಿರ ರೂ.ಗೆ ಮಾರಾಟವಾಗಿದೆ.

ಕಳೆದ ತಿಂಗಳು ನಡೆದಿದ್ದ ಹರಾಜಿನಲ್ಲಿ ಇದೇ ಅಸ್ಸಾಂನ ಮತ್ತೊಂದು ಮಾದರಿಯ ಚಹಾ ಪುಡಿ 39,001 ರೂ.ಗೆ ಮಾರಾಟವಾಗಿ ದಾಖಲೆ ಬರೆದಿತ್ತು. 

ದೋನಿ ಪೋಲೊ ಎಸ್ಟೇಟ್‌ನಲ್ಲಿ ಬೆಳೆದ ಗೋಲ್ಡನ್‌ ನೀಡಲ್ಸ್‌ ಟೀ ತಳಿಯ 1.1 ಕೆ.ಜಿ ತೂಕದ ಚಹಾ ಪುಡಿಗೆ ಹರಾಜಿನಲ್ಲಿ 40 ಸಾವಿರ ರೂ. ದೊರೆತಿದೆ. ಈ ಕುರಿತು ಮಾಹಿತಿ ನೀಡಿರುವ ಗುವಹಾಟಿ ಚಹಾ ಹರಾಜು ಖರೀದಿದಾರರ ಸಂಘದ ಕಾರ್ಯದರ್ಶಿ ದಿನೇಶ್‌ ಬಿಹಾನಿ, ಈ ಚಹಾ ಪುಡಿಯನ್ನು ಆನ್‌ಲೈನ್‌ನಲ್ಲೂ ಖರೀದಿಸಬಹುದು ಎಂದು ತಿಳಿಸಿದ್ದಾರೆ. 

ಟೀ ಮಾರುಕಟ್ಟೆಯಲ್ಲಿ ಅಸ್ಸಾಂನ ಚಹಾಕ್ಕೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಸಾಂಪ್ರದಾಯಿಕ ಚಹಾಗೆ ಅಸ್ಸಾಂ ಜಗತ್ತಿನ ಗಮನ ಸೆಳೆದಿದೆ.

click me!