ವಿಶ್ವ ಬೆಸೆದ ಕೇರಳ ಪ್ರವಾಹ: ಆ್ಯಪಲ್​, ಗೇಟ್ಸ್ ನೆರವು ವಾಹ್!

By Web DeskFirst Published Aug 25, 2018, 2:37 PM IST
Highlights

ಕೇರಳ ಪ್ರವಾಹಕ್ಕೆ ನೆರವಿನ ಹಸ್ತ ಚಾಚಿದ ಆ್ಯಪಲ್! ಕೇರಳಕ್ಕೆ 70 ಮಿಲಿಯನ್ ನೆರವು ಘೋಷಣೆ! ನೆರವಿಗೆ ಮುಂದಾದ ಬಿಲ್ ಗೇಟ್ಸ್ ಫೌಂಡೇಶನ್! ಬಿಲ್, ಮಿಲಿಂದಾ ಗೇಟ್ಸ್ ಫೌಂಡೇಶನ್ ವತಿಯಿಂದ 4 ಕೋಟಿ ರೂ.

ನವದೆಹಲಿ(ಆ.25): ವಿಶ್ವದ ಪ್ರಸಿದ್ಧ ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಕೇರಳಕ್ಕೆ 70 ಮಿಲಿಯನ್ ನೆರವು ಘೋಷಿಸಿದೆ. ಕೇರಳದ ಪ್ರವಾಹ ನಮ್ಮನ್ನು ತುಂಬ ದು:ಖಕ್ಕೆ ಈಡು ಮಾಡಿದ್ದು, ಕೇರಳ ಜನರ ಜೊತೆಗೆ ನಾವಿದ್ದೇವೆ ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಸ್ಥೆ ವತಿಯಿಂದ 70 ಮಿಲಿಯನ್ ನೆರವು ಕಳುಹಿಸುತ್ತಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.

ಇನ್ನು ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಕೂಡ ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ತಮ್ಮ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್ ವತಿಯಿಂದ 4 ಕೋಟಿ ರೂ. ನೆರವಿನ ಘೋಷಣೆ ಮಾಡಿದ್ದಾರೆ. ಕೇರಳಕ್ಕಾಗಿ ಯುನಿಸೆಫ್ ಮೂಲಕ ಬಿಲ್ ಗೇಟ್ಸ್ 4 ಕೋಟಿ ರೂ. ನೆರವು ನೀಡಿದ್ದಾರೆ.

ಒಟ್ಟಿನಲ್ಲಿ ಕೇರಳ ಪ್ರವಾಹ ಮಾನವೀಯತೆಯ ಅನಾವರಣಕ್ಕೂ ಕಾರಣವಾಗಿದ್ದು, ಜಾತಿ, ಧರ್ಮ, ಗಡಿಗಳ ಭೇದವಿಲ್ಲದೇ ವಿಶ್ವದ ಜನರನ್ನು ಒಂದುಗೂಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.

click me!