ನಾ ಹೇಳ್ದಂಗ್ ಕೇಳಿ, ಮೋದಿಗೂ ಇದನ್ನೇ ಹೇಳಿ: ರಾಜನ್!

By Web Desk  |  First Published Aug 25, 2018, 3:09 PM IST

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ತಾತ್ಕಾಲಿಕ! ಆರ್ ಬಿಐ ಮಾಜಿ ಗರ್ವನರ್ ರಘುರಾಮ್ ರಾಜನ್ ಅಭಿಮತ! ಚಾಲ್ತಿ ಖಾತೆ ಕೊರತೆ ಸರಿಪಡಿಸಿಕೊಳ್ಳಲು ಸರ್ಕಾರಕ್ಕೆ ಸಲಹೆ! ಹಣಕಾಸು ಕೊರತೆ ಮೇಲೂ ಹತೋಟಿ ಒಳ್ಳೆಯದು ಎಂದ ರಾಜನ್


ನವದೆಹಲಿ(ಆ.25): ಡಾಲರ್​ ವಿರುದ್ಧ ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಕುರಿತು ಭಯ ಬೇಡ ಎಂದು ಆರ್ ಬಿಐ ಮಾಜಿ ಗರ್ವನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಪ್ರಸ್ತುತ ಇರುವ ಚಾಲ್ತಿ ಖಾತೆ ಕೊರತೆಯನ್ನು ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ತನ್ನಿಂದ ತಾನೇ ಬಲಗೊಳ್ಳುತ್ತದೆ . ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಕೇವಲ ತಾತ್ಕಾಲಿಕ ಹಿನ್ನಡೆ ಎಂದು ರಾಜನ್ ತಿಳಿಸಿದ್ದಾರೆ.

Tap to resize

Latest Videos

ನವದೆಹಲಿಯಲ್ಲಿ ಮಾತನಾಡಿದ ರಾಜನ್, ಭಾರತ ಸರ್ಕಾರ ತನ್ನ ಚಾಲ್ತಿ ಖಾತೆ ಕೊರತೆಯನ್ನು ನೀಗಿಸಿಕೊಂಡರೆ ಎಲ್ಲವೂ ಸರಿಹೋಗುತ್ತದೆ.  ಅಲ್ಲದೇ ಹಣಕಾಸು ಕೊರತೆಯನ್ನು ಸಹ ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಕಚ್ಚಾತೈಲ ಬೆಲೆ ಏರಿಕೆ ಬಹಳಷ್ಟು ಕೊಡುಗೆ ನೀಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್​ ತನ್ನ ಮೌಲ್ಯ ವೃದ್ಧಿಸಿಕೊಂಡಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ರಾಜನ್ ಹೇಳಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್​ ಹಾಗೂ ಭಾರತ ಚುನಾವಣೆಗೆ ತೆರಳುತ್ತಿರುವುದರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬೇಕಾಗಿರುವುದು ಅಗತ್ಯ ಎಂದೂ ರಾಜನ್ ಪ್ರತಿಪಾದಿಸಿದ್ದಾರೆ. ಕಳೆದ ವಾರ ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ 70.32 ರೂ.ಗೆ ಕುಸಿದಿತ್ತು. ಆದರೆ ಮತ್ತೆ ಚೇತರಿಕೆ ಹಾದಿ ಹಿಡಿದಿರುವ ರೂಪಾಯಿ ಮೌಲ್ಯ, ಸದ್ಯ ಡಾಲರ್ ಎದುರು 69.91 ರೂ ಗೆ ಇಳಿಕೆಯಾಗಿದೆ.

ಡಾಲರ್ ಸಮುದ್ರದಲ್ಲಿ ಮುಳುಗುತ್ತಿರುವ ರೂಪಾಯಿ: ಸಾರ್ವಕಾಲಿಕ ಕುಸಿತ!

ರೂಪಾಯಿ ಮೌಲ್ಯ ಕುಸಿತ ನಿಮ್ಮ ಜೇಬಿನ ಹಣ ಖಾಲಿ ಮಾಡ್ಸತ್ತಾ?

ಏನಾಗುತ್ತಿದೆ?: ಮತ್ತೆ ಡಾಲರ್ ಎದುರು ಮಂಕಾದ ರೂಪಾಯಿ ಮೌಲ್ಯ!

ರುಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ?

click me!