
ನವದೆಹಲಿ(ಸೆ.04): ಲಾಕ್‌ಡೌನ್ ಕಾರಣ ಹಲವು ಕೆಲಸ ಕಳೆದುಕೊಂಡಿದ್ದಾರೆ. ವೇತನ ಕಡಿತಗೊಂಡಿದೆ. ಹೀಗಾಗಿ ಸಾಲದ ಕಂತು ಪಾವತಿಯನ್ನು RBI ಒಟ್ಟು 6 ತಿಂಗಳ ಕಾಲ ಮೂಂದಿತ್ತು. ಆದರೆ ಬಡ್ಡಿ ಕಡಿತ ಮಾಡಲು ಹಿಂದೇಟು ಹಾಕಿತ್ತು. ಈ ಕುರಿತು ಬಡ್ಡಿ ಕಡಿತ ಮಾಡಬೇಕು ಎಂಬ ಪಿಟೀಶನ್ ಆಲಿಸಿದ ಸುಪ್ರೀಂ ಕೋರ್ಟ್ ಇದೀಗ ಆಗಸ್ಟ್ 31ರ ವರೆಗೆ ಖಾತೆಗಳಲ್ಲಿ ಯಾವುದೇ ಟ್ರಾನ್ಸಾನ್ ಇಲ್ಲದ ಖಾತೆಗಳನ್ನು ನಾನ್ ಪರ್ಫಾಮಿಂಗ್ ಅಸೆಟ್(NPA) ಎಂದು ಘೋಷಿಸಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ವಿನಾಯ್ತಿ ಮುಕ್ತಾಯ, ಮಂಗಳವಾರದದಿಂದ ಮತ್ತೆ ಇಎಂಐ ಆರಂಭ!.
ಜಸ್ಟೀಸ್ ಅಶೋಕ್ ಭೂಷಣ್, ಆರ್ ಸುಬ್ಬಾ ರೆಡ್ಡಿ ಹಾಗೂ ಎಂ.ಆರ್ ಸಾಹ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಮಧ್ಯಂತರ ಆದೇಶ ನೀಡಿದ ಬಳಿಕ , ಕುರಿತು ಸೆಪ್ಟೆಂಬರ್ 10 ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಕ್ರೆಡಿಟ್ ಸ್ಕೋರ್ ಗಳಿಸಲು ರಾಜಮಾರ್ಗ: ಇಲ್ಲಿದೆ ಸರಳ ವಿಧಾನ!.
ಕಳೆದ 6 ತಿಂಗಳಿನಿಂದ ಸಾಲ ಮರುಪಾವತಿ ಸೇರಿದಂತೆ ಕಂತಿನ ವ್ಯವಹಾರಗಳು ಮುಂದೂಡಿಕೆಯಾಗಿದೆ. ಹೀಗಾಗಿ ಹಲವು ಖಾತೆಗಳಲ್ಲಿ ಯಾವುದೇ ಟ್ರಾನ್ಸಾಕ್ಷನ್ ನಡೆದಿರುವುದಿಲ್ಲ. ಈ ಖಾತೆಯನ್ನು NAP ಎಂದು ಘೋಷಿಸಿ, ದಂಡ ಹಾಕುವ ಪ್ರಕ್ರಿಯೆಗೆ ಬ್ಯಾಂಕ್ ಮುಂದಾಗಬಾರದು. ಮುಂದಿನ ಆದೇಶದ ವರೆಗೆ ಆಗಸ್ಟ್ 31ರ ವರೆಗೆ ಕಾರ್ಯನಿರ್ವಹಿದಿರುವ ಖಾತೆಗಳನ್ನು NPA ಎಂದು ಘೋಷಿಸಿದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನೀಡಿರುವ ಸಾಲ ಮುಂದೂಡಿಕೆ ಮೇಲಿನ ಬಡ್ಡಿ ಮನ್ನಾ ಕೋರಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ(ಸೆ.03) ವಿಚಾರಣೆ ನಡೆಸಿದೆ. ಭಾರತದ ಸೆಂಟ್ರಲ್ ಬ್ಯಾಂಕ್ ಸಾಲಗಾರರಿಗೆ ಮೂರು ತಿಂಗಳ EMI(ಸಾಲದ ಕಂತು) ಮರುಪಾವತಿಯನ್ನು ಮುಂದೂಡಿಕೆ ಮಾಡಿತ್ತು. ಮಾರ್ಚ್ 1 ರಿಂದ ಮೇ 31ರವರಗೆ ಮುಂದೂಡಲಾಗಿತ್ತು. ಆದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆ ಹಾಗೂ ಬದುಕು ಸಹಜ ಸ್ಥಿತಿಗೆ ಬಾರದ ಕಾರಣ ಸಾಲ ಮರುಪಾತಿಯನ್ನು ಆಗಸ್ಟ್ 31 ರವರೆಗೆ ಮತ್ತೆ ಮುಂದೂಡಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.