ದೇಶದ ಅಪಘಾತ ಪರಿಹಾರ ಇತಿಹಾಸದಲ್ಲೇ ದಾಖಲೆ: 32 ವರ್ಷಗಳ ಬಳಿಕ ಮೃತರ ಕುಟುಂಬಕ್ಕೆ ₹33.6 ಕೋಟಿ ಪರಿಹಾರ!

Published : Aug 28, 2026, 11:15 AM IST
court verdict

ಸಾರಾಂಶ

32 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಂಟೀರಿಯರ್ ಡಿಸೈನರ್ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು ಬಡ್ಡಿ ಸಹಿತ ₹33.6 ಕೋಟಿ ಪರಿಹಾರ ನೀಡಲು ಆದೇಶಿಸಿದೆ. ಸುದೀರ್ಘ ಕಾನೂನು ಹೋರಾಟದ ನಂತರ, ಮೃತರ ಪತಿ ಮತ್ತು ಇಬ್ಬರು ಮಕ್ಕಳಿಗೆ ಈ ಐತಿಹಾಸಿಕ ಪರಿಹಾರ ಮೊತ್ತ ದೊರೆಯಲಿದೆ.

ಮುಂಬೈ (ಆ.28): ದೇಶದ ರಸ್ತೆ ಅಪಘಾತ ಪರಿಹಾರ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ತೀರ್ಪೊಂದರಲ್ಲಿ, 32 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ದುಬೈ ಮೂಲದ ಭಾರತೀಯ ಇಂಟೀರಿಯರ್ ಡಿಸೈನರ್ ಅವರ ಕುಟುಂಬಕ್ಕೆ ಬಡ್ಡಿ ಸೇರಿ ₹33.6 ಕೋಟಿ ಪರಿಹಾರ ನೀಡುವಂತೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ವಿಮಾ ಸಂಸ್ಥೆಗೆ ಆದೇಶಿಸಿದೆ.

1994ರ ಜುಲೈ 3ರಂದು ಥಾಣೆ-ನಾಸಿಕ್ ಹೆದ್ದಾರಿಯಲ್ಲಿ ನಡೆದ ಭೀಕರ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಕವಿತಾ ಸೌಲಾನಿ ಎಂಬುವವರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಾರಿನಲ್ಲಿ ಪ್ರಯಾಣಿಕರಾಗಿದ್ದ ಕವಿತಾ ಅವರದ್ದು ಅಪಘಾತ ಸಂಭವಿಸುವಲ್ಲಿ ಯಾವುದೇ ತಪ್ಪಿರಲಿಲ್ಲ, ಬದಲಾಗಿ ಎರಡೂ ವಾಹನಗಳ ಚಾಲಕರ ನಿರ್ಲಕ್ಷ್ಯವೇ ಕಾರಣವಾಗಿತ್ತು. ಈ ಸಂಬಂಧ ಕವಿತಾ ಅವರ ಕುಟುಂಬವು 1994ರ ಡಿಸೆಂಬರ್ 23ರಂದು ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು.

ಸುದೀರ್ಘ 32 ವರ್ಷಗಳ ಹೋರಾಟ

ಅಪಘಾತದಲ್ಲಿ ಭಾಗಿಯಾಗಿದ್ದ ಎರಡೂ ವಾಹನಗಳಿಗೆ ವಿಮೆ ಒದಗಿಸಿದ್ದ ‘ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್’ಗೆ (Oriental Insurance Company Ltd) ಈಗ ನ್ಯಾಯಾಧಿಕರಣವು ಈ ಬೃಹತ್ ಮೊತ್ತವನ್ನು ಪಾವತಿಸುವಂತೆ ನಿರ್ದೇಶಿಸಿದೆ. ಮೃತ ಕವಿತಾ ಅವರ ಪತಿ ಸುರೇಶ್ (ಈಗ 76 ವರ್ಷ) ಹಾಗೂ ಅವರ ಇಬ್ಬರು ಮಕ್ಕಳಿಗೆ (ಪ್ರಸ್ತುತ 47 ಮತ್ತು 46 ವರ್ಷ) ಈ ಪರಿಹಾರ ಮೊತ್ತ ದೊರೆಯಲಿದೆ.

ಆರಂಭದಲ್ಲಿ 2003ರ ಜೂನ್‌ನಲ್ಲಿ ಮೂಲ ನ್ಯಾಯಾಧಿಕರಣವು ₹5.5 ಕೋಟಿ ಪರಿಹಾರವನ್ನು ಘೋಷಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ವಿಮಾ ಸಂಸ್ಥೆ ಹಾಗೂ ಕವಿತಾ ಅವರ ಕುಟುಂಬ ಎರಡೂ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ ತಿಂಗಳಿನಲ್ಲಿ ಮರುಲೆಕ್ಕಾಚಾರ ಮಾಡುವಂತೆ ನ್ಯಾಯಾಧಿಕರಣಕ್ಕೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ ಸೂಚನೆಯಂತೆ ಮರುಪರಿಶೀಲನೆ ನಡೆಸಿದ ನ್ಯಾಯಾಧಿಕರಣವು, ಇದೀಗ ಬಡ್ಡಿ ಮೊತ್ತವನ್ನೂ ಸೇರಿಸಿ ಒಟ್ಟು ₹33.6 ಕೋಟಿ ಪರಿಹಾರ ನೀಡಲು ಆದೇಶಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

₹40 ಲಕ್ಷ ಸಂಬಳವಿದ್ದರೂ ತೀರದ ದುರಾಸೆ: ಟ್ರೇಡಿಂಗ್‌ನಲ್ಲಿ ₹50 ಲಕ್ಷ ಕಳೆದುಕೊಂಡು ಜಮೀನು ಮಾರಲು ನಿಂತ ಟೆಕ್ಕಿ!
ತಿಂಗಳ ಅಂತ್ಯ, ವರ್ಷದ ಕೊನೆ ಅಥವಾ ಹಬ್ಬದ ಸೀಸನ್? ಹಣ ಉಳಿಸಿ ಹೊಸ ಕಾರು ಖರೀದಿಸಲು ಸೂಕ್ತ ಸಮಯ ಯಾವುದು?