ಡ್ರೆಸ್ ಇಸ್ತ್ರಿಗೆ ಹತ್ತೇ ರೂಪಾಯಿ, ತಿಂಗಳ ಗಳಿಕೆ ಮಾತ್ರ ಲಕ್ಷದಲ್ಲಿ, ಶಾಕ್ ಆಗುತ್ತೆ ಡ್ರೈ ಕ್ಲೀನರ್ ಸಂಪಾದನೆ

Published : Feb 11, 2026, 04:57 PM IST
Dry Cleaner Earning

ಸಾರಾಂಶ

ಮೋಮೋ ಮಾರಾಟಗಾರನ ಗಳಿಕೆ, ಪಾನಿಪುರಿ ವ್ಯಾಪಾರಿ ಗಳಿಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಹುಟ್ಟಿಸಿದೆ. ಈಗ ಡ್ರೈ ಕ್ಲೀನರ್ ಸಂಪಾದನೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕಠಿಣ ಪರಿಶ್ರಮಕ್ಕೆ ಸಿಗ್ತಿರೋ ಫಲ ಅಂತಿದ್ದಾರೆ. 

ಐಟಿ ಕಂಪನಿ, ಉನ್ನತ ಹುದ್ದೆಯಲ್ಲಿ ಕೆಲ್ಸ ಮಾಡುವವರು ಮಾತ್ರ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾರೆ ಎನ್ನುವ ನಂಬಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಇದು ಬದಲಾಗ್ತಿದೆ. ಬೀದಿ ಬದಿಯಲ್ಲಿ ಸಣ್ಣ ವ್ಯಾಪಾರ ಮಾಡ್ತಿರುವ ಅನೇಕರು ಲಕ್ಷಾಂತರ ರೂಪಾಯಿ ತಿಂಗಳಿಗೆ ದುಡಿತಿದ್ದಾರೆ. ಡ್ರೈ ಕ್ಲೀನರ್ (Dry cleaner) ಗಳಿಕೆ ಸೋಶಿಯಲ್ ಮೀಡಿಯಾ ಬಳಕೆದಾರರ ಹುಬ್ಬೇರಿಸುವಂತೆ ಮಾಡಿದೆ. ಬಟ್ಟೆ ಇಸ್ತ್ರಿ ಹಾಗೂ ಡ್ರೈ ಕ್ಲೀನ್ ಮಾಡುವ ಅಂಗಡಿ ಮಾಲೀಕ ತಿಂಗಳಿಗೆ ಎರಡು ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಒಬ್ಬರು ಅವರ ಅರ್ನಿಂಗ್ ಡಿಟೇಲ್ಸ್ ನೀಡಿದ್ದಾರೆ.

ತಿಂಗಳಿಗೆ 2 ಲಕ್ಷ ಸಂಪಾದಿಸುವ ಡ್ರೈ ಕ್ಲೀನರ್

ಮನೆಯಲ್ಲಿ ಇಸ್ತ್ರಿ ಮಾಡಲು ಜನರಿಗೆ ಟೈಂ ಇರೋದಿಲ್ಲ. ಕೆಲವೊಂದು ಬಟ್ಟೆ ಇಸ್ತ್ರಿ ಮಾಡೋದು ಕಷ್ಟದ ಕೆಲ್ಸ. ಈಗಿನ ಯುವಕರು ಬಟ್ಟೆ ವಾಶ್, ಇಸ್ತ್ರಿಗೆ ಡ್ರೈ ಕ್ಲೀನಿಂಗ್ ಶಾಪ್ ಅವಲಂಭಿಸಿದ್ದಾರೆ. ಇದ್ರಿಂದ ಡ್ರೈ ಕ್ಲೀನರ್ ವ್ಯಾಪಾರಿಗಳಿಗೆ ಕೈತುಂಬ ಕೆಲ್ಸ ಸಿಗ್ತಿದೆ. ನಳಿನಿ ಉಂಗಾರ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ನೋಡಿದ್ರೆ ಅಚ್ಚರಿಯಾಗುತ್ತೆ. ಅವರ ಮನೆ ಹತ್ತಿರ ಇರುವ ಡ್ರೈಕ್ಲೀನರ್ ಶಾಪ್ ಗೆ ನಳಿನಿ ಆಗಾಗ ಹೋಗ್ತಿರುತ್ತಾರೆ. ಮಾತಿನ ಮಧ್ಯೆ ಅವರು ತಮ್ಮ ಸಂಪಾದನೆ ಬಗ್ಗೆ ನಳಿನಿಗೆ ಮಾಹಿತಿ ನೀಡಿದ್ದಾರಂತೆ.

Top 8 Richest Royal Families: ನಮ್ಮ ಮೈಸೂರಿನ ಮಹಾರಾಜರ ಆಸ್ತಿ ಮೌಲ್ಯ ಎಷ್ಟಿದೆ?

ಡ್ರೈ ಕ್ಲೀನರ್ ಪ್ರತಿದಿನ ಸುಮಾರು 350 ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾರೆ ಅಂತ ನಳಿನಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಪ್ರತಿ ಬಟ್ಟೆ ಇಸ್ತ್ರಿಗೆ ಅವರು 10 ರೂಪಾಯಿ ತೆಗೆದುಕೊಳ್ತಾರಂತೆ. ಅಂದ್ರೆ ದಿನಕ್ಕೆ 350 ಬಟ್ಟೆ ಇಸ್ತ್ರಿ ಮಾಡಿದ್ರೆ 3,500 ರೂಪಾಯಿ ಬಂದಂಗಾಯ್ತು. ಇದಲ್ದೆ ಸುಮಾರು 20 ದುಬಾರಿ ಡ್ರೆಸನ್ನು ಪ್ರತಿ ದಿನ ಡ್ರೈ ಕ್ಲೀನ್ ಮಾಡ್ತಾರೆ. ಒಂದು ಡ್ರೆಸ್ ಡ್ರೈ ಕ್ಲೀನ್ ಬೆಲೆ 350 ರೂಪಾಯಿ. ಅಂದ್ರೆ ಅವರು ಸುಮಾರು 7,000 ರೂಪಾಯಿ ದಿನಕ್ಕೆ ಡ್ರೈ ಕ್ಲೀನ್ ನಿಂದ ಗಳಿಸಿದಂತಾಯ್ತು. ಎಲ್ಲಸ ಏರಿ ಅವರು ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಅಂತ ನಳಿನಿ ಹೇಳ್ತಾರೆ.

ಖರ್ಚು ಕಳೆದು ಉಳಿಯೋದು ಎಷ್ಟು?

ಅಂಗಡಿ ಮಾಲೀಕ ನೀಡಿದ ಮಾಹಿತಿ ಪ್ರಕಾರ, ಶಾಪ್ ಸ್ವಂತದ್ದು. ಹಾಗಾಗಿ ಬಾಡಿಗೆ ನೀಡುವ ಅಗತ್ಯವಿಲ್ಲ. ತಿಂಗಳಿಗೆ 6 ಸಾವಿರ ಕರೆಂಟ್ ಬಿಲ್ ಬರುತ್ತದೆ. ಇಬ್ಬರು ಸಹಾಯಕರಿದ್ದು ಅವರಿಗೆ ಒಟ್ಟೂ 40 ಸಾವಿರ ಸಂಬಳದ ರೂಪದಲ್ಲಿ ಖರ್ಚಾಗುತ್ತದೆ. ಎಲ್ಲ ಖರ್ಚು ಕಳೆದು 2.3 ಲಕ್ಷ ರೂಪಾಯಿ ಉಳಿಯುತ್ತದೆ.

300 ರೂಪಾಯಿಗೆ ಖರೀದಿಸಿದ ಡೊಮೇನ್ ಇಂದು 634 ಕೋಟಿ! ಮಲೇಷ್ಯಾ ಉದ್ಯಮಿಯ ಅಚ್ಚರಿಯ 'ಜಾಕ್‌ಪಾಟ್'!

ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ ಬಂದಿದೆ. ಹಣ ಸಂಪಾದನೆಗೆ ಪದವಿ ಮಾತ್ರ ಮುಖ್ಯವಲ್ಲ, ಕೌಶಲ್ಯ ಹಾಗೂ ಕಠಿಣ ಪರಿಶ್ರಮದಿಂದಲೂ ಸಂಪದಾನೆ ಮಾಡ್ಬಹುದು ಅಂತ ಕೆಲವರು ಹೇಳಿದ್ದಾರೆ. ಸಣ್ಣ ಉದ್ಯೋಗ ದೊಡ್ಡ ಶಕ್ತಿ ಹೊಂದಿದೆ ಅಂತ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತೆರಿಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಎಐ ರಿಪ್ಲೇಸ್ ಮಾಡದ ಕೆಲ್ಸವನ್ನು ಅವರು ಆಯ್ಕೆ ಮಾಡ್ಕೊಂಡಿದ್ದಾರೆ ಅಂತ ಡ್ರೈಕ್ಲೀನರ್ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬೆವರು ಹರಿಸಿ, ಬಿಸಿಯಲ್ಲಿ ಪ್ರತಿ ನಿತ್ಯ 350 ಡ್ರೆಸ್ ಇಸ್ತ್ರಿ ಮಾಡೋದು ಸುಲಭವಲ್ಲ. ಅದಕ್ಕೆ ತಕ್ಕ ಸಂಪಾದನೆ ಅನ್ನೋದು ಮತ್ತೊಂದಿಷ್ಟು ಮಂದಿ ಅಭಿಪ್ರಾಯ.

 

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Top 8 Richest Royal Families: ನಮ್ಮ ಮೈಸೂರಿನ ಮಹಾರಾಜರ ಆಸ್ತಿ ಮೌಲ್ಯ ಎಷ್ಟಿದೆ?
300 ರೂಪಾಯಿಗೆ ಖರೀದಿಸಿದ ಡೊಮೇನ್ ಇಂದು 634 ಕೋಟಿ! ಮಲೇಷ್ಯಾ ಉದ್ಯಮಿಯ ಅಚ್ಚರಿಯ 'ಜಾಕ್‌ಪಾಟ್'!