
ನವದೆಹಲಿ[ಮೇ.15]: ನೀವು ದೂರದರ್ಶನವನ್ನು ನೋಡಿ ಬೆಳೆದಿದ್ದರೆ, ಅದರಲ್ಲಿ ಪ್ರಸಾರವಾದ ರಾಮಾಯಣ, ಮಹಾಭಾರತ, ಮಾಲ್ಗುಡಿ ಡೇಸ್, ಚಿತ್ತಾರ ಮತ್ತಿತರ ಕಾರ್ಯಕ್ರಮಗಳು ನೆನಪಿರಬಹುದು.
ಇದೀಗ ಈ ಕಾರ್ಯಕ್ರಮಗಳ ಹೆಸರಿನಲ್ಲಿ ಟೀ ಶರ್ಟ್, ಕಾಫಿ ಮಗ್‌ಗಳು, ನೀರಿನ ಬಾಟಲಿ ಹೀಗೆ ವಿವಿಧ ರೀತಿಯ ಉತ್ಪನ್ನಗಳು ಅಮೆಜಾನ್ ಇಂಡಿಯಾ ವೆಬ್ ಪೋರ್ಟ್‌ಲ್ ಮೂಲಕ ದೂರದರ್ಶನ ಮಾರಾಟ ಮಾಡುತ್ತಿದೆ.
ಅಮೆಜಾನ್‌ನಲ್ಲಿ ದೂರದರ್ಶನದ ಉತ್ಪನ್ನಗಳ ಮಾರಾಟ ಮಳಿಗೆ ಸೋಮವಾರದಿಂದ ಆರಂಭಗೊಂಡಿದೆ. ಪ್ರೇಕ್ಷಕರ ಜೊತೆಗಿನ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವ ನಿಟ್ಟಿನಿಂದ ತನ್ನ ಜನಪ್ರಿಯ ಕಾರ್ಯಕ್ರಮಗಳ ಹೆಸರಿನಲ್ಲಿ ದೂರದರ್ಶನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.