
ಬಿಜಿಂಗ್(ಮೇ.14): ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದ ಅಮೆರಿಕಕ್ಕೆ, ಚೀನಾ ಕೂಡ ಸೂಕ್ತ ತಿರುಗೇಟು ನೀಡಿದೆ.
ಅಮೆರಿಕ ಆರಂಭಿಸಿದ್ದ ವ್ಯಾಪಾರ ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಚೀನಾ, ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ರಷ್ಟು ಹೆಚ್ಚಳ ಮಾಡಿದೆ.
ಈ ಹಿಂದೆ ಚೀನಾ ಮೂಲದ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ತೆರಿಗೆ ಹೆಚ್ಚಳ ಮಾಡಿತ್ತು. ಅಮೆರಿಕ ಸರ್ಕಾರದ ಈ ನಡೆಗೆ ಅದೇ ಧಾಟಿಯಲ್ಲಿ ಉತ್ತರ ನೀಡಿರುವ ಚೀನಾ, ಅಮೆರಿದ ಸುಮಾರು 60 ಮಿಲಿಯನ್ ಮೌಲ್ಯದ 5 ಸಾವಿರ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 5ರಿಂದ ಶೇ.25ರಷ್ಟು ಹೆಚ್ಚಳ ಮಾಡಿದೆ.
ಅತ್ತ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಮರದ ಪರಿಣಾ ಬ್ರಿಟನ್ ಮಾರುಕಟ್ಟೆಯ ಮೇಲೂ ಬೀರಿದ್ದು, ಎಫ್ ಟಿಎಸ್ ಇ 100 ಅಂಕ ಕಳೆದುಕೊಂಡು, ಶಾಂಘೈ ಮಾರುಕಟ್ಟೆ ಸೂಚ್ಯಂಕ 1.21 ಅಂಕಗಳ ನಷ್ಟ ಅನುಭವಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.