ರಜನಿ ಸ್ಟೈಲ್ ಪಾಲಿಸೋ, ಬಿಲ್ ಗೇಟ್ಸ್ ಜೊತೆ ಕಾಣಿಸಿಕೊಂಡ ಡಾಲಿ ಚಾಯ್ ವಾಲಾ ಟೀ ಬೆಲೆ ಎಷ್ಟು?

Published : Mar 14, 2024, 04:51 PM IST
ರಜನಿ ಸ್ಟೈಲ್ ಪಾಲಿಸೋ, ಬಿಲ್ ಗೇಟ್ಸ್ ಜೊತೆ ಕಾಣಿಸಿಕೊಂಡ ಡಾಲಿ ಚಾಯ್ ವಾಲಾ ಟೀ ಬೆಲೆ ಎಷ್ಟು?

ಸಾರಾಂಶ

ಟೀ ಮಾರೋದು ಒಂದೊಳ್ಳೆ ಬ್ಯುಸಿನೆಸ್. ಇದ್ರಲ್ಲಿ ಎರಡು ಮಾತಿಲ್ಲ. ಚಹಾ ಮಾರಾಟ ಮಾಡಿ ಹಣ ಗಳಿಸೋರು ಮಧ್ಯೆ, ಡಾಲಿ ಚಾಯ್ ವಾಲಾ ಸ್ವಲ್ಪ ಭಿನ್ನ. ಅವರ ಟೀ ಜೊತೆ ಸ್ಟೈಲ್ ಹೆಚ್ಚು ಫೇಮಸ್.    

ನಾಗ್ಪುರದ ಡಾಲಿ ಚಾಯ್ ವಾಲಾ ಯಾರಿಗೆ ಗೊತ್ತಿಲ್ಲ ಹೇಳಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಕ್ತಿ. ಬಣ್ಣದ ಕನ್ನಡಕ, ಕಲರ್ ಫುಲ್ ಡ್ರೆಸ್ ಹಾಗೂ ಅವರು ಚಹಾ ಸರ್ವ್ ಮಾಡುವ ಸ್ಟೈಲ್ ಬಹುತೇಕ ಎಲ್ಲರ ಗಮನ ಸೆಳೆಯುತ್ತದೆ. ಬೀದಿ ಬದಿಯಲ್ಲಿ ಚಿಕ್ಕ ಟೀ ಅಂಗಡಿ ಇಟ್ಟುಕೊಂಡಿರುವ ಡಾಲಿ ಚಾಯ್ ವಾಲಾ ಎಷ್ಟು ಪ್ರಸಿದ್ಧಿ ಪಡೆದಿದ್ದಾರೆ ಅಂದ್ರೆ ಅವರ ಟೀ ಸ್ಟಾಲ್ ಗೆ ದೂರದೂರುಗಳಿಂದ ಜನರು ಬರ್ತಾರೆ. 

ಕೆಲಸ (Work) ದಲ್ಲಿ ಯಾವುದು ಚಿಕ್ಕದು, ದೊಡ್ಡದು ಎನ್ನುವುದಿಲ್ಲ. ಖುಷಿಯಿಂದ, ಪ್ರಾಮಾಣಿಕವಾಗಿ ಮಾಡಿದ್ರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಡಾಲಿ ಚಾಯ್ ವಾಲಾ (Dolly Chai Wala) ಉತ್ತಮ ನಿದರ್ಶನ. ಕೆಲ ದಿನಗಳ ಹಿಂದೆ ಬಿಲ್ ಗೇಟ್ಸ್ (Bill Gates) ಜೊತೆ ಡಾಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು. ಬಿಲ್ ಗೇಟ್ಸ್, ಡಾಲಿ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಅಷ್ಟೇ ಡಾಲಿ ಅದೃಷ್ಟ ಖುಲಾಯಿಸಿದೆ. ಅನೇಕ ದೊಡ್ಡ ಬ್ರ್ಯಾಂಡ್ ಗಳಿಗೆ ಡಾಲಿ ಜಾಹೀರಾತು ನೀಡ್ತಿದ್ದಾರೆ. ಡಾಲಿ ಈಗ ತನ್ನ ಸುರಕ್ಷತೆಗೆ ಬೌನ್ಸರ್ಸ್ ಇಟ್ಟಿದ್ದಾರೆ. 

ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್‌ ಆಭರಣಗಳನ್ನೇ ಹೆಚ್ಚು ಧರಿಸೋದು ಯಾಕೆ, ಏನಿದರ ವಿಶೇಷತೆ?

ಬಿಲ್ ಗೇಟ್ಸ್ ಜೊತೆ ಇರುವ ಫೋಟೋ, ವಿಡಿಯೋ ಶೇರ್ ಆಗ್ತಿದ್ದಂತೆ ಡಾಲಿ ಸಾಮಾಜಿಕ ಜಾಲತಾಣದಲ್ಲೂ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಡಾಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. 

ಮೊದಲೇ ಹೇಳಿದಂತೆ ಡಾಲಿ ಚಾಯ್ ಅಂಗಡಿ ಇರೋದು ನಾಗ್ಪುರದಲ್ಲಿ. ಇಲ್ಲಿನ ಸಿವಿಲ್ ಲೈನ್ಸ್‌ನಲ್ಲಿ ಅವರು ಟೀ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ದಿನ ಮುನ್ನೂರರಿಂದ ಮುನ್ನೂರೈವತ್ತು ಕಪ್ ಟೀಯನ್ನು ಡಾಲಿ ಮಾರಾಟ ಮಾಡ್ತಾರೆ. ಡಾಲಿ ಒಂದು ಕಪ್ ಟೀಗೆ ಕೇವಲ ಏಳು ರೂಪಾಯಿ ಚಾರ್ಜ್ ಮಾಡ್ತಾರೆ. ಅದೇ ಬೆಲೆಯಲ್ಲಿ ಲೆಕ್ಕ ಹಾಕಿದ್ರೆ ಒಂದು ದಿನಕ್ಕೆ ಡಾಲಿ ಗಳಿಕೆ 2500- 3500 ರೂಪಾಯಿ ಮಧ್ಯೆ ಇದೆ. ಮಾಧ್ಯಮಗಳ ವರದಿ ಪ್ರಕಾರ ಡಾಲಿಯ ಒಟ್ಟು ಆಸ್ತಿ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.  ಡೋಲಿ ಚಾಯ್‌ವಾಲಾ ಅವರು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಚಹಾ ಮಾರಾಟ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಅವರು ಸಾವಿರಾರು ರೂಪಾಯಿ ಹಣಗಳಿಸುತ್ತಿದ್ದಾರೆ. 

ವಿಶಿಷ್ಟ ಶೈಲಿಯಲ್ಲಿ ಗ್ರಾಹಕರನ್ನು ಸ್ವಾಗತಿಸುವ ಡಾಲಿ, ರಜನಿಕಾಂತ್ ಸ್ಟೈಲ್ ನಲ್ಲಿ ಜನರಿಗೆ ಟೀ ನೀಡ್ತಾರೆ. ಇದೇ ಅವರು ಹೆಚ್ಚು ಪ್ರಸಿದ್ಧಿ ಪಡೆಯಲು ಕಾರಣವಾಗಿದೆ. ಸೌತ್ ಚಿತ್ರಗಳನ್ನು ನೋಡುವ ನಾನು ಅವರ ಸ್ಟೈಲ್ ಅನುಸರಿಸುತ್ತೇನೆ ಎಂದು ಡಾಲಿ ಒಪ್ಪಿಕೊಂಡಿದ್ದಾರೆ.  

ಡಾಲಿ ಚಾಯ್ ವಾಲಾ ಅಸಲಿ ಹೆಸರು ಏನು? ಎಷ್ಟು ಓದಿದ್ದಾರೆ ಡಾಲಿ : ಪ್ರಸಿದ್ಧ ಹಾಗೂ ಸೆಲೆಬ್ರಿಟಿ ಡಾಲಿ ಚಾಯ್‌ವಾಲಾ ಅವರ ನಿಜವಾದ ಹೆಸರು ಸುನೀಲ್ ಪಾಟೀಲ್. ಡಾಲಿ ಚಾಯ್‌ವಾಲಾ ಮಹಾರಾಷ್ಟ್ರದ ನಾಗ್ಪುರ ನಿವಾಸಿ. ಡಾಲಿ ಚಾಯ್‌ವಾಲಾ 1998 ರಲ್ಲಿ ಜನಿಸಿದ್ದು, 10 ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ನಂತ್ರ ತಮ್ಮ ಅಧ್ಯಯನವನ್ನು ಕೈಬಿಟ್ಟ ಡಾಲಿ, ಚಹಾ ಅಂಡಗಿ ಶುರು ಮಾಡಿದ್ರು. ಸುಮಾರು ಹದಿನಾರು ವರ್ಷಗಳಿಂದ ಡಾಲಿ ಈ ಟೀ ಅಂಗಡಿ ನಡೆಸುತ್ತಿದ್ದಾರೆ. 

Street Food: ದೆಹಲಿಯ ವಡಾ ಪಾವ್ ಹುಡುಗಿ; ಯಾರೀಕೆ ಚಂದ್ರಿಕಾ ದೀಕ್ಷಿತ್?

ಅವರ ಟೀಯನ್ನು ಎಲ್ಲರೂ ಮೆಚ್ಚಿ ಕುಡಿಯುತ್ತಾರೆ. ಅನೇಕ ಸೆಲೆಬ್ರಿಟಿಗಳು ಡಾಲಿ ಟೀ ಕುಡಿಯಲು, ಅವರ ಸ್ಟೈಲ್ ನೋಡಲು ಬರ್ತಾರೆ. ಕೆಲ ದಿನಗಳ ಹಿಂದೆ ನಟಿ ನಿಮೃತ್ ಕೌರ್ ಕೂಡ ಬಂದಿದ್ದರು. ಡಾಲಿ ಟೀಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಬಿಲ್ ಗೇಟ್ಸ್ ಆಗಮನ ಡಾಲಿಗೆ ಮತ್ತಷ್ಟು ಅದೃಷ್ಟ ತಂದಿದೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!