
ಟೋಕಿಯೋ (ಮೇ 15): ಇತ್ತೀಚಿನ ದಿನಗಳಲ್ಲಿ ಡಾಲರ್ ಮೌಲ್ಯದಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಿನ ತಲ್ಲಣಗಳು, ಆರ್ಥಿಕ ಹಿಂಜರಿತದ ಭೀತಿ ಡಾಲರ್ ಮೌಲ್ಯದ ಮೇಲೆ ಪರಿಣಾಮ ಬೀರಿವೆ. ಈ ನಡುವೆ ಸೋಮವಾರ ಡಾಲರ್ ಮೌಲ್ಯ ಐದು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.ಅಮೆರಿಕದಲ್ಲಿನ ಹಣದುಬ್ಬರದ ಚಿಂತೆ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿನ ಹಿನ್ನಡೆ ನಡುವೆಯೂ ಈ ವರ್ಷದ ಅಂತ್ಯದಲ್ಲಿ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಬಹುದು ಎಂಬ ನಿರೀಕ್ಷೆ ಡಾಲರ್ ಮೌಲ್ಯದ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ಇನ್ನೊಂದೆಡೆ ಟರ್ಕಿಸ್ ಕರೆನ್ಸಿ ಲಿರ ಮೌಲ್ಯ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಥೈಲ್ಯಾಂಡ್ ಬಹ್ತ ಮೌಲ್ಯಲ್ಲಿ ಶೇ.1ರಷ್ಟು ಏರಿಕೆ ಕಂಡುಬಂದಿದೆ. ಥೈಲ್ಯಾಂಡ್ ನ ಪ್ರತಿಪಕ್ಷ ಅಲ್ಲಿನ ಆಡಳಿತಾರೂಢ ಮಿಲಿಟರಿ ಬೆಂಬಲಿತ ಪಕ್ಷಗಳನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ ಬೆನ್ನಲ್ಲೇ ಅಲ್ಲಿನ ಕರೆನ್ಸಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಈ ನಡುವೆ ಭಾರತದ ರೂಪಾಯಿ ಡಾಲರ್ ಎದುರು ಇಳಿಕೆ ಕಂಡಿದೆ. ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 82.20ಕ್ಕೆ ಕುಸಿತ ಕಂಡಿದೆ.
ಅಮೆರಿಕದ ಗ್ರಾಹಕರ ದೀರ್ಘಾವಧಿ ಹಣದುಬ್ಬರ ನಿರೀಕ್ಷೆ 2011ರ ಬಳಿಕ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಕೇಂದ್ರೀಯ ಬ್ಯಾಂಕ್ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಕೂಡ ಇದೆ. ಇನ್ನೊಂದೆಡೆ ಅಮೆರಿಕ ಸರ್ಕಾರದ ಖಜಾನೆ ಖಾಲಿಯಾಗುವ ಭೀತಿ ಎದುರಾಗಿದೆ.ಈ ನಡುವೆ ಸಾಲದ ಸೀಲಿಂಗ್ ಮಿತಿಯನ್ನು ಹೆಚ್ಚಳ ಮಾಡದಿದ್ರೆ ಅಮೆರಿಕದ ಫೆಡರಲ್ ಸರ್ಕಾರ ಈ ವರ್ಷದ ಜೂನ್ ನಲ್ಲಿ ಬಿಲ್ ಗಳನ್ನು ಪಾವತಿಸಲು ಹಣದ ಕೊರತೆ ಎದುರಿಸಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೂಡ.
ಮಹಿಳೆಯರಿಗೆ ಬ್ಯಾಂಕ್, ಎನ್ ಬಿಎಫ್ ಸಿ ಯಾವೆಲ್ಲ ವಿಶೇಷ ಯೋಜನೆಗಳನ್ನು ಹೊಂದಿವೆ? ಇಲ್ಲಿದೆ ಮಾಹಿತಿ
'ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷೆಗಿಂತ ತಗ್ಗಿದೆ. ಮಾರುಕಟ್ಟೆ ಕೂಡ ಈಗ ಹಿಂದಿಗಿಂತ ಸಾಕಷ್ಟು ಸುಧಾರಿತ ಸ್ಥಿತಿಯಲ್ಲಿದೆ. ಈಗ ಸಾಲದ ಸೀಲಿಂಗ್ ಮಿತಿ ಹೆಚ್ಚಳ ಹಾಗೂ ಆ ನಿರ್ಧಾರ ಕೈಗೊಳ್ಳುವ ದಿನದ ಮೇಲೆ ಗಮನ ಕೇಂದ್ರೀಕೃತವಾಗಿದೆ. ಸಾಲದ ಸೀಲಿಂಗ್ ಮಿತಿ ಹೆಚ್ಚಳದ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತಾ ಅಥವಾ ಸಂಕಷ್ಟಕ್ಕೆ ಸಿಲುಕುತ್ತಾ ಎಂಬುದನ್ನು ಕಾದು ನೋಡಬೇಕಿದೆ' ಎಂದು ಎಎನ್ ಝುಡ್ ( ANZ) ಸಂಶೋಧನೆ ಏಷ್ಯಾದ ಮುಖ್ಯಸ್ಥರಾದ ಕೂನ್ ಗೊಹ್ ಹೇಳಿದ್ದಾರೆ.
ಜುಲೈ ವೇಳೆಗೆ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ಕಡಿತ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಮಾರ್ಚ್ ನಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದಿಂದ ಉಂಟಾದ ಪರಿಸ್ಥಿತಿಗಳನ್ನು ಸರಿಪಡಿಸಲು ನೀತಿ ನಿರೂಪಕರು ಇಂಥ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಇನ್ನು ಏಷ್ಯಾದಲ್ಲಿ ಚೀನಾ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುವ ನಿರೀಕ್ಷೆಯಿದೆ. ಚೀನಾದ ಕರೆನ್ಸಿ ಯುವಾನ್ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರತಿ ಡಾಲರ್ ಎದುರು ಯುವಾನ್ ಮೌಲ್ಯ 6.9749ರಷ್ಟು ಇಳಿಕೆಯಾಗಿದೆ.ಇನ್ನು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಏಳು ದಿನಗಳ ರಿವರ್ಸ್ ರೆಪೋ ದರವನ್ನು ಸೋಮವಾರ ಈ ಹಿಂದಿನ ಶೇ.2ಕ್ಕೆ ನಿಗದಿಪಡಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಜಪಾನ್ ಕರೆನ್ಸಿ ಡಾಲರ್ ಎದುರು 136.27 ಕ್ಕೆ ಕುಸಿತ ಕಂಡಿದೆ.
Make Money : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ
ಸಾಲದ ಸೀಲಿಂಗ್ ಮಿತಿಯನ್ನು ಹೆಚ್ಚಳ ಮಾಡದಿದ್ರೆ ಅಮೆರಿಕದ ಫೆಡರಲ್ ಸರ್ಕಾರ ಈ ವರ್ಷದ ಜೂನ್ ನಲ್ಲಿ ಬಿಲ್ ಗಳನ್ನು ಪಾವತಿಸಲು ಹಣದ ಕೊರತೆ ಎದುರಿಸಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಲದ ಸೀಲಿಂಗ್ ಫೆಡರಲ್ ಸರ್ಕಾರ ಎಷ್ಟು ಸಾಲ ಪಡೆಯಬಹುದು ಎಂಬುದರ ಮಿತಿಯನ್ನು ಸೂಚಿಸುತ್ತದೆ. ಇನ್ನು ಯುಎಸ್ ಕಾಂಗ್ರೆಸ್ ಸಾಲದ ಸೀಲಿಂಗ್ ಮಿತಿಯನ್ನು ನಿಗದಿಪಡಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.