LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!

By Suvarna NewsFirst Published May 15, 2023, 11:24 AM IST
Highlights

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಸುಲಭದ ಕೆಲಸವೇನಲ್ಲ.ಸಾಕಷ್ಟು ರಿಸ್ಕ್ ಇರುತ್ತದೆ.ಆದರೆ, ಕೆಲವು ಷೇರುಗಳು ಹೂಡಿಕೆದಾರರಿಗೆ ಉತ್ತಮ ರಿಟರ್ನ್ಸ್ ನೀಡುತ್ತವೆ.ಇಂಥ ಷೇರುಗಳಲ್ಲಿ ಎಲ್ಐಸಿ ಬೆಂಬಲಿತ  ರೈಲ್ ವಿಕಾಸ್ ನಿಗಮ ಲಿಮಿಟೆಡ್ ಅಥವಾ ಆರ್ ವಿಎನ್ ಎಲ್ ಷೇರುಗಳು ಕೂಡ ಸೇರಿವೆ. ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಕೇವಲ ಒಂದೇ ವರ್ಷದಲ್ಲಿ ಶೇ100ರಷ್ಟು ರಿಟರ್ನ್ ಸಿಕ್ಕಿದೆ.

Business Desk: ಕೆಲವು ಷೇರುಗಳು ಹೂಡಿಕೆದಾರರಿಗೆ ಅದೃಷ್ಟದ ಬಾಗಿಲನ್ನೇ ತೆರೆಯುತ್ತವೆ. ಷೇರು ಮಾರುಕಟ್ಟೆ ವ್ಯವಹಾರ ಹಾವು-ಏಣಿ ಆಟವೇ ಆಗಿದ್ದರೂ ಕೆಲವೊಮ್ಮೆ ಹಣದ ಹೊಳೆಯನ್ನೇ ಹರಿಸಬಲ್ಲದು. ಇತ್ತೀಚಿನ ವರ್ಷಗಳಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ಭಾರೀ ಲಾಭವನ್ನೇ ತಂದಿವೆ. ಅಂಥ ಷೇರುಗಳಲ್ಲಿ ರೈಲ್ ವಿಕಾಸ್ ನಿಗಮ ಲಿಮಿಟೆಡ್ ಅಥವಾ ಆರ್ ವಿಎನ್ ಎಲ್ ಷೇರುಗಳು ಕೂಡ ಸೇರಿವೆ. ಈ ಷೇರುಗಳ ಬೆಲೆಗಳು ಈಗಲೂ ಕೂಡ ಏರಿಕೆಯ ಹಾದಿಯಲ್ಲೇ ಇದ್ದು,ಎನ್ ಎಸ್ ಇಯಲ್ಲಿ ಪ್ರತಿ ಷೇರಿನ ಬೆಲೆ 68.50ರೂ.ನಿಂದ 127ರೂ.ಗೆ ಏರಿಕೆಯಾಗಿವೆ. ಈ ಮೂಲಕ ಷೇರುದಾರರಿಗೆ ಶೇ.85ರಷ್ಟು ರಿಟರ್ನ್ ನೀಡುತ್ತಿವೆ. ಇನ್ನು ಆರ್ ವಿಎನ್ ಎಲ್ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಒಡೆತನದ ಕಂಪನಿಯಾಗಿದೆ.ಎಲ್ಐಸಿ ಈ ಸಂಸ್ಥೆಯ ಶೇ.6.38ರಷ್ಟು ಷೇರುಗಳನ್ನು ಹೊಂದಿದೆ.ಆರ್ ವಿಎನ್ ಎಲ್ ಷೇರುಗಳ ಬೆಲೆ ದೀರ್ಘಕಾಲದಿಂದ ಮೇಲ್ಮುಖವಾಗಿವೆ. ಕಳೆದ ಒಂದು ತಿಂಗಳಿಂದ ಆರ್ ವಿಎನ್ ಎಲ್ ಷೇರು ಬೆಲೆ ಎನ್ ಎಸ್ ಇಯಲ್ಲಿ 72.75ರೂ.ನಿಂದ 126.35ರೂ.ಗೆ ಏರಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ ಈ ಷೇರಿನ ಬೆಲೆ ಸುಮಾರು 55ರೂ.ನಿಂದ 126.35ರೂ.ಗೆ ಏರಿಕೆ ಕಂಡಿದೆ. ಈ ಮೂಲಕ ಷೇರುದಾರರಿಗೆ ಈ ಬಾರಿ ಶೇ.130ರಷ್ಟು ರಿಟರ್ನ್ ನೀಡಿದೆ.

ಇನ್ನು ಕಳೆದ ಒಂದು ವರ್ಷದಲ್ಲಿ ಆರ್ ವಿ ಎನ್ ಎಲ್ ಪ್ರತಿ ಷೇರಿನ ಬೆಲೆ 30.45ರೂ.ನಿಂದ 126.35ರೂ.ಗೆ ಹೆಚ್ಚಳ ಕಂಡಿದೆ. ಈ ಮೂಲಕ ದೀರ್ಘ ಅವಧಿಗೆ ಹೂಡಿಕೆ ಮಾಡಿದ ಷೇರುದಾರರಿಗೆ ಶೇ.300ರಷ್ಟು ರಿಟರ್ನ್ ನೀಡಿದೆ.ಹಾಗೆಯೇ ಕಳೆದ ಐದು ವರ್ಷಗಳಲ್ಲಿ ಈ ಮಲ್ಟಿ ಬ್ಯಾಗರ್ ಷೇರು 19.75ರೂ.ನಿಂದ 126.35ರೂ.ಗೆ ಏರಿಕೆ ಕಂಡಿದೆ. ಆ ಮೂಲಕ ಶೇ.550ರಷ್ಟು ಹೆಚ್ಚಳ ದಾಖಲಿಸಿದೆ. 

Make Money : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ

ಹೂಡಿಕೆ ಮೇಲೆ ಪರಿಣಾಮ
ಆರ್ ವಿಎನ್ ಎಲ್ (RVNL) ಷೇರುಗಳ ಬೆಲೆ ಇತಿಹಾಸ ನೋಡಿದರೆ ಒಂದು ವೇಳೆ ಮಲ್ಟಿಬ್ಯಾಗರ್ ರೈಲ್ವೆ ಷೇರುಗಳಲ್ಲಿ ಒಂದು ತಿಂಗಳ ಹಿಂದೆ ಒಂದು ಲಕ್ಷ ರೂ. ಹೂಡಿಕೆ ಮಾಡಿದರೆ ಇಂದು 1.70ಲಕ್ಷ ರೂ.ಆಗಿದೆ. ಇನ್ನು ವೈಟಿಡಿ 1.85ಲಕ್ಷ ರೂ.ಏರಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ 1ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದು ಈಗ 2.30ಲಕ್ಷ ರೂ.ಗೆ ಹೆಚ್ಚಳವಾಗುತ್ತಿತ್ತು. ಇನ್ನು ಎಲ್ಐಸಿ ಬೆಂಬಲಿತ ಷೇರಿನಲ್ಲಿ ಒಂದು ವರ್ಷದ ಹಿಂದೆ ಹೂಡಿಕೆದಾರ ಒಂದು ಲಕ್ಷ ರೂ. ಹೂಡಿಕೆ ಮಾಡಿದ್ರೆ ಆ ಮೊತ್ತ ಇಂದು 4ಲಕ್ಷ ರೂ.ಗೆ ಹೆಚ್ಚಳವಾಗುತ್ತಿತ್ತು.

ಆರ್ ವಿಎನ್ ಎಲ್ ನಲ್ಲಿ ಎಲ್ಐಸಿ ಪಾಲು
ರೈಲ್ ವಿಕಾಸ್ ನಿಗಮ ಲಿಮಿಟೆಡ್ 2023ರ ಜನವರಿಯಿಂದ ಮಾರ್ಚ್ ತನಕದ ಷೇರು ವಿನ್ಯಾಸದ ಅನ್ವಯ ಎಲ್ ಐಸಿಯಲ್ಲಿ  13,29,43,000 ಆರ್ ವಿಎನ್ ಎಲ್ ಷೇರುಗಳಿವೆ. ಇದು ಸಂಸ್ಥೆಯ ಒಟ್ಟು ಷೇರಿನ ಶೇ.6.38ರಷ್ಟಿದೆ.

Adani-Hindenburg Row: ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ತಜ್ಞರ ಸಮಿತಿ!

ವಿದೇಶಿ ಷೇರಿನ ವರದಿಗೆ ಐಟಿಆರ್ ಅಗತ್ಯ
ವಿದೇಶಿ ಷೇರುಗಳ ಗಳಿಕೆ ಅಥವಾ ನಷ್ಟವನ್ನು ವರದಿ ಮಾಡಲು ತೆರಿಗೆದಾತ 'ಐಟಿಆರ್ 2' ಅರ್ಜಿ ನಮೂನೆಯಲ್ಲಿ ಐಟಿಆರ್ ಸಲ್ಲಿಕೆ ಮಾಡಬೇಕು. ಆದರೆ, ಇವರು ಉದ್ಯಮ/ವೃತಿ ಅಥವಾ ಪಾಲುದಾರಿಕೆ ಸಂಸ್ಥೆಯಿಂದ ಯಾವುದೇ ಆದಾಯ ಹೊಂದಿಲ್ಲವೆಂದ್ರೆ ಮಾತ್ರ. ಇಂಥ ಆದಾಯ ಹೊಂದಿರೋರು ಐಟಿಆರ್ 3 ನಮೂನೆಯಲ್ಲಿ ಮಾಹಿತಿ ಸಲ್ಲಿಕೆ ಮಾಡಬೇಕು.ಇನ್ನು ಐಟಿಆರ್ 2 ಬಳಸೋರು ಅದರಲ್ಲಿ ವಿದೇಶಿ ಷೇರುಗಳ ಮಾರಾಟದಿಂದ ಗಳಿಸಿದ್ದು ಅಥವಾ ಕಳೆದುಕೊಂಡಿದ್ದನ್ನು 'ಶೆಡ್ಯೂಲ್ CG' ಅಡಿಯಲ್ಲಿ ವರದಿ ಮಾಡಬೇಕು.


 

click me!