Dividend To Central Government: ಕೇಂದ್ರ ಸರ್ಕಾರಕ್ಕೆ ₹87,416 ಕೋಟಿ ನೀಡಲಿರುವ ಆರ್‌ಬಿಐ!

Published : May 19, 2023, 09:26 PM IST
Dividend To Central Government: ಕೇಂದ್ರ ಸರ್ಕಾರಕ್ಕೆ ₹87,416 ಕೋಟಿ ನೀಡಲಿರುವ ಆರ್‌ಬಿಐ!

ಸಾರಾಂಶ

2022-2023ರ ಹಣಕಾಸು ವರ್ಷದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂಪಾಯಿ ಡಿವಿಡೆಂಡ್‌ ಹಣವನ್ನು ಪಾವತಿ ಮಾಡಲಿದೆ. ಇದು ಕಳೆದ ವರ್ಷಕ್ಕಿಂತ ಮೂರು ಪಟ್ಟು ಅಧಿಕವಾಗಿದೆ.

ನವದೆಹಲಿ (ಮೇ.19):  ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಡಳಿಯು ಶುಕ್ರವಾರ ಮುಂಬೈನಲ್ಲಿ ತನ್ನ ಪ್ರಮುಖ ಸಭೆ ಸೇರಿತ್ತು. ಈ ಸಭೆಯಲ್ಲಿ ಮಂಡಳಿಯು 2022-23ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂಪಾಯಿಗಳ ಲಾಭಾಂಶವನ್ನು ಘೋಷಣೆ ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯ 602 ನೇ ಸಭೆಯಲ್ಲಿ, ಈ ಲಾಭಾಂಶವನ್ನು ವರ್ಗಾಯಿಸಲು ಸರ್ಕಾರಕ್ಕೆ ಅನುಮೋದನೆ ನೀಡಲಾಯಿತು.  ಆರ್‌ಬಿಐ ಸರ್ಕಾರಕ್ಕೆ ಪ್ರತಿ ವರ್ಷ ಲಾಭಾಂಶ ನೀಡುತ್ತದೆ. ಕಳೆದ ವರ್ಷದ ಬಗ್ಗೆ ಮಾತನಾಡುವುದಾದರೆ, ಆರ್‌ಬಿಐ 2021-22 ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ 30,310 ಕೋಟಿ ರೂಪಾಯಿಗಳನ್ನು ಲಾಭಾಂಶವಾಗಿ ನೀಡಿತ್ತು. 1934ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಾಯ್ದೆ (1934) ಅನ್ವಯ ಆರ್‌ಬಿಐ ಸ್ಥಾಪಿತವಾಗಿತ್ತು. ಮೊದಲಿಗೆ ಇದು ಖಾಸಗಿ ಬ್ಯಾಂಕ್‌ ಆಗಿದ್ದರೆ, 1949ರಲ್ಲಿ ಈ ಬ್ಯಾಂಕ್‌ ರಾಷ್ಟ್ರೀಕರಣಗೊಂಡಿತು. ಅಂದಿನಿಂದ ಈ ಬ್ಯಾಂಕ್‌ಅನ್ನು ಸಂಪೂರ್ಣವಾಗಿ ಸರ್ಕಾರದ ಮಾಲೀಕತ್ವದಲ್ಲಿದೆ.

ಸರ್ಕಾರಿ ಹಣಕಾಸುಗಳ ಏಕೈಕ ಮ್ಯಾನೇಜರ್ ಆಗಿರುವುದರಿಂದ, ಪ್ರತಿ ವರ್ಷ, ಆರ್‌ಬಿಐ ತನ್ನ ಹೆಚ್ಚುವರಿ ಲಾಭದಿಂದ ತನ್ನ ಏಕೈಕ ಮಾಲೀಕರಾಗಿರುವ ಕೇಂದ್ರ ಸರ್ಕಾರಕ್ಕೆ ತನ್ನ ಲಾಭಾಂಶವನ್ನು ಪಾವತಿಸುತ್ತದೆ.  ಕಂಪನಿಯು ತನ್ನ ಷೇರುದಾರರಿಗೆ ಲಾಭಾಂಶವನ್ನು ಪಾವತಿಸಿದ ರೀತಿಯಲ್ಲಿಯೇ ಆರ್‌ಬಿಐ ತನ್ನ ಮಾಲೀಕರಿಗೆ ಲಾಭಾಂಶ ನೀಡುತ್ತದೆ.

ಮಂಡಳಿಯ ಸಭೆಯಲ್ಲಿ ಆರ್‌ಬಿಐನ ಆರ್ಥಿಕ ಸ್ಥಿತಿ, ಜಾಗತಿಕ ಮತ್ತು ದೇಶೀಯ ಆರ್ಥಿಕ ಸವಾಲುಗಳ ಬಗ್ಗೆಯೂ ಚರ್ಚಿಸಲಾಯಿತು. ಇಡೀ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಏನು ಕೆಲಸ ಮಾಡಿದೆ ಮತ್ತು ಸೆಂಟ್ರಲ್ ಬ್ಯಾಂಕ್‌ನ ವಾರ್ಷಿಕ ಖಾತೆ ವರದಿಯನ್ನು ಸಹ ಅನುಮೋದಿಸಲಾಗಿದೆ. ಆಕಸ್ಮಿಕ ನಿಧಿಯನ್ನು ಶೇ.5.5ರಿಂದ ಶೇ.6ಕ್ಕೆ ಹೆಚ್ಚಿಸಲಾಗಿದೆ. ಸಾಮಾನ್ಯವಾಗಿ ಈ ರೀತಿಯ ಸಭೆಯು ಮೇ ತಿಂಗಳಲ್ಲಿ ನಡೆಯುತ್ತದೆ, ಇದರಲ್ಲಿ ಆರ್‌ಬಿಐ ತನ್ನ ಹಣಕಾಸಿನ ಸ್ಥಿತಿಗತಿ ಮತ್ತು ಲಾಭಾಂಶದ ಮೊತ್ತವನ್ನು ನಿರ್ಧರಿಸುತ್ತದೆ.

'ಚಿಪ್‌ ಕೂಡ ವಾಪಾಸ್‌ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್‌ ಟ್ರೋಲ್‌!

48 ಸಾವಿರ ಕೋಟಿ ನಿರೀಕ್ಷೆಯಲ್ಲಿದ್ದ ಕೇಂದ್ರ: ಕೇಂದ್ರ ಸರ್ಕಾರಕ್ಕೆ ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಲಾಭಾಂಶ ಸಿಕ್ಕಿದೆ. ಏಕೆಂದರೆ, ಈ ವರ್ಷ ಆರ್‌ಬಿಐ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ 48 ಸಾವಿರ ಕೋಟಿ ರೂಪಾಯಿ ಲಾಭಾಂಶ ಸಿಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು. ಸರ್ಕಾರವು ಪಾಲನ್ನು ಹೊಂದಿರುವ ಹಣಕಾಸು ಸಂಸ್ಥೆಗಳಿಂದ ಲಾಭಾಂಶವನ್ನು ಪಡೆಯುತ್ತದೆ. ಇನ್ನು ವಿಶ್ಲೇಷಕರ ಬಗ್ಗೆ ಮಾತನಾಡುವುದಾದರೆ, ಸ್ಟ್ಯಾಂಡರ್ಡ್‌ ಚಾರ್ಟೆಡ್‌ ಆರ್‌ಬಿಐ ಈ ಬಾರಿ ಕೇಂದ್ರ ಸರ್ಕಾರಕ್ಕೆ 1 ರಿಂದ 2 ಲಕ್ಷ ಕೋಟಿ ಹಣವನ್ನು ಲಾಭಾಂಶವಾಗಿ ಈ ಹಣಕಾಸು ವರ್ಷದಲ್ಲಿ ಪಾವತಿಸಬಹುದು ಎನ್ನಲಾಗಿತ್ತು.

ತನ್ನ ನೀತಿಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ, 2 ಸಾವಿರ ನೋಟು ಹಿಂಪಡೆದ ಕೇಂದ್ರಕ್ಕೆ ಸಿದ್ಧರಾಮಯ್ಯ ಚಾಟಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!