Gold Investment: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

By Suvarna NewsFirst Published Jan 17, 2022, 1:08 PM IST
Highlights

ಬಗೆ ಬಗೆಯ ಹಾರ,ಬಳೆ,ಕಿವಿಯೋಲೆ ಹೀಗೆ ಬಂಗಾರದ ಆಭರಣಗಳನ್ನು ಖರೀದಿ ಮಾಡುವ ಜನರು ಇದು ಒಂದು ರೀತಿಯ ಉಳಿತಾಯ ಎನ್ನುತ್ತಾರೆ. ಯಸ್ ಇದು ಒಂದು ರೀತಿಯ ಸೇವಿಂಗ್ ನಿಜ. ಆದ್ರೆ ಇದಕ್ಕಿಂತ ಬಂಗಾರದ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಲಾಭ ದುಪ್ಪಟ್ಟು ಎಂಬುದು ನಿಮಗೆ ಗೊತ್ತಾ? 
 

Business Desk: ಭಾರತೀಯರು ಚಿನ್ನ (Gold) ಪ್ರಿಯರು. ಅನಾದಿ ಕಾಲದಿಂದಲೂ ಚಿನ್ನದ ಜೊತೆ ಭಾವನಾತ್ಮಕ ಸಂಬಂಧವನ್ನು ಜನರು ಹೊಂದಿದ್ದಾರೆ. ಚಿನ್ನವನ್ನು ಆಪದ್ಬಾಂಧವ ಎಂದು ಜನರು ನಂಬುತ್ತಾರೆ. ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಜನರು ಸಾಲ ಪಡೆಯುವ ಅಥವಾ ಸಾಲ (Loans )ತೀರಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಚಿನ್ನ ಒಂದು ದೊಡ್ಡ ಆಸ್ತಿ.  ಜನರು ಚಿನ್ನವನ್ನು ಅತ್ಯಂತ ಸುರಕ್ಷಿತ (Safe ) ಮತ್ತು ಲಾಭದಾಯಕ ಹೂಡಿಕೆ ಮಾಧ್ಯಮವೆಂದು ಪರಿಗಣಿಸಿದ್ದಾರೆ.

ಸುರಕ್ಷಿತ ಹೂಡಿಕೆಗಾಗಿ ಜನರು ಯಾವಾಗಲೂ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಕಡೆಗೆ ಆಕರ್ಷಿತರಾಗುತ್ತಾರೆ. ಎಫ್‌ಡಿಗಳಿಂದ ಬರುವ ಆದಾಯವು ಪೂರ್ವನಿರ್ಧರಿತವಾಗಿರುತ್ತದೆ. ಇದಲ್ಲದೇ ಕೆಲವರು ಷೇರು ಮಾರ್ಕೆಟ್ ನಲ್ಲೂ ಹಣ ಹೂಡುತ್ತಾರೆ. ಷೇರುಪೇಟೆಯಲ್ಲಿ ರಿಸ್ಕ್ ಹೆಚ್ಚಿರುತ್ತದೆ. ಹಲವರಿಗೆ ಷೇರುಪೇಟೆಯ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ಇದ್ರಲ್ಲಿ ನೆಮ್ಮದಿಯೂ ಕಡಿಮೆ.ಹೀಗಿರುವಾಗ ಚಿನ್ನ ಮತ್ತು ಬೆಳ್ಳಿಯ   ಹೂಡಿಕೆಯ ಆಯ್ಕೆಯು ಅತ್ಯುತ್ತಮ ಆಯ್ಕೆಯಾಗಿದೆ. 

ಚಿನ್ನದ ಹೂಡಿಕೆ ಆಯ್ಕೆಗಳು : ಚಿನ್ನದ ಬಾಂಡ್ : ಕೇಂದ್ರ ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ನಡೆಸುತ್ತದೆ. ಸರ್ಕಾರದ ಈ ಯೋಜನೆಯಡಿ, ಸಾಮಾನ್ಯ ಜನರು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಈ ಯೋಜನೆಯ ಮೂಲಕ, ಚಿನ್ನದ ಭೌತಿಕ ರೂಪದ ಬೇಡಿಕೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಚಿನ್ನದ ಬಾಂಡ್‌ಗಳ ದೊಡ್ಡ ಪ್ರಯೋಜನವೆಂದರೆ ಸರ್ಕಾರದ ಚಿನ್ನದ ಬಾಂಡ್‌ಗಳ ಬೆಲೆ ಚಿನ್ನದ ಮಾರುಕಟ್ಟೆ ಬೆಲೆಗಿಂತ ಕಡಿಮೆಯಾಗಿದೆ. ಇದರ ಲಾಭವೆಂದ್ರೆ  ತೆರಿಗೆ ವಿನಾಯಿತಿ. ಜೊತೆಗೆ ಇದರಲ್ಲಿ ಯಾವುದೇ ರೀತಿಯ ವಂಚನೆ ನಡೆಯಲು ಸಾಧ್ಯವಿಲ್ಲ. ಹೂಡಿಕೆ ಉದ್ದೇಶಕ್ಕಾಗಿ ಚಿನ್ನವನ್ನು ಖರೀದಿಸಲು ಬಯಸಿದರೆ, ಭೌತಿಕ ಚಿನ್ನವನ್ನು ಖರೀದಿಸುವುದು ಒಳ್ಳೆಯದು. ಚಿನ್ನದ ಇಟಿಎಫ್‌ಗಳು, ಚಿನ್ನದ ಬಾಂಡ್‌ಗಳು ಅಥವಾ ಡಿಜಿಟಲ್ ಚಿನ್ನವು, ಚಿನ್ನದ ಆಭರಣಗಳು, ನಾಣ್ಯಗಳು ಅಥವಾ ಚಿನ್ನದ ಬಿಸ್ಕತ್ತುಗಳನ್ನು ಖರೀದಿಸುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: Sovereign Gold Bond Scheme: 9ನೇ ಸರಣಿಯಲ್ಲಿ ಹೂಡಿಕೆಗೆ ಅವಕಾಶ; ಪ್ರತಿ ಗ್ರಾಂ ಚಿನ್ನದ ದರ 4,786ರೂ.

ಡಿಜಿಟಲ್ ಚಿನ್ನ : ಡಿಜಿಟಲ್ ಮಾರುಕಟ್ಟೆ ಇದೀಗ ಉತ್ಕರ್ಷದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಚಿನ್ನವೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೂಡಿಕೆಯ ವಿಷಯದಲ್ಲಿ, ಡಿಜಿಟಲ್ ಚಿನ್ನವು ಉತ್ತಮ ಆಯ್ಕೆಯಾಗಿದೆ. ಡಿಜಿಟಲ್ ಚಿನ್ನದಲ್ಲಿ ಉತ್ತಮ ಆದಾಯವೂ ಲಭ್ಯವಿದೆ. ಅನೇಕ ವೇದಿಕೆಗಳಲ್ಲಿ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಅಮೆಜಾನ್, ಪೇ,ಪೇಟಿಎಂ,ಪೋನ್ ಪೇ, ಸ್ಟಾಕ್ ಬ್ರೋಕರ್‌ಗಳಂತಹ ಇತರ ಹೂಡಿಕೆ ವೇದಿಕೆಗಳಲ್ಲಿ ನೀವು ಡಿಜಿಟಲ್ ಚಿನ್ನ ಖರೀದಿಸಬಹುದು. ಡಿಜಿಟಲ್ ಚಿನ್ನವನ್ನು ಖರೀದಿಸಲು ನೀವು ಇಂಟರ್ನೆಟ್ ಮತ್ತು ನೆಟ್ಬ್ಯಾಂಕಿಂಗ್ ಸೌಲಭ್ಯ ಹೊಂದಿರಬೇಕು.

ಚಿನ್ನದ ಇಟಿಎಫ್ : ಮನೆಯಲ್ಲಿ ಇಡುವ ಚಿನ್ನಾಭರಣಗಳಿಗಿಂತ ಚಿನ್ನದ ಇಟಿಎಫ್‌ಗಳು ಸುರಕ್ಷಿತವಾಗಿರುತ್ತವೆ. ಎಲೆಕ್ಟ್ರಾನಿಕ್ ರೂಪದಲ್ಲಿರುವುದರಿಂದ, ಅದರ ನಿಖರತೆಯನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಬಹುದು. ಇದರ ಮೇಲೆ ಸಾಲ ಪಡೆಯಲು ಸಾಧ್ಯವಿಲ್ಲ. ಇದನ್ನು ಯಾವುದೇ ಸಮಯದಲ್ಲಿ ವಿನಿಮಯ ಕೇಂದ್ರದಲ್ಲಿ ಮಾರಾಟ ಮಾಡಬಹುದು. 

ಇದನ್ನೂ ಓದಿ:  Union Budget 2022: ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ಕ್ಕೆ ಫಿಕ್ಸ್ ; ಜ. 31ರಿಂದ ಸಂಸತ್ತಿನ ಅಧಿವೇಶನ ಆರಂಭ

ಯಾವುದು ಉತ್ತಮ? : ಕೇಂದ್ರ ಸರ್ಕಾರದ ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆಯ ಒಂದು ಪ್ರಯೋಜನವೆಂದರೆ ಈ ಬಾಂಡ್‌ಗಳು ಚಿನ್ನದ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಅದೇ ಸಮಯದಲ್ಲಿ, ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ ಯಾವುದೇ ಜಿಎಸ್ಟಿ ಪಾವತಿಸಬೇಕಾಗಿಲ್ಲ. ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಶೇಕಡಾ 3ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ಪಾವತಿಸುವುದರಿಂದ ಹೂಡಿಕೆಯ ವೆಚ್ಚ ಹೆಚ್ಚಾಗುತ್ತದೆ. ಡಿಜಿಟಲ್ ಚಿನ್ನಕ್ಕೆ ತೆರಿಗೆ ಜೊತೆಗೆ ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಲಾಭವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಡಿಜಿಟಲ್ ಚಿನ್ನದ ಬಗ್ಗೆ ಯಾವುದೇ ಅಧಿಕೃತ ನಿಯಂತ್ರಣ ಸಂಸ್ಥೆ ಇಲ್ಲ. ಆದರೆ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ, ನೀವು ಗೋಲ್ಡ್ ಬಾಂಡ್ ವಿರುದ್ಧ ಸಾಲವನ್ನು ತೆಗೆದುಕೊಳ್ಳಬಹುದು, ಆದರೆ ಗೋಲ್ಡ್ ಇಟಿಎಫ್‌ನಲ್ಲಿ ಅಂತಹ ಯಾವುದೇ ಆಯ್ಕೆಗಳಿಲ್ಲ. ಒಟ್ಟಾರೆಯಾಗಿ, ಲಾಭದ ದೃಷ್ಟಿಯಿಂದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಉತ್ತಮ ಆಯ್ಕೆಯಾಗಿದೆ.

click me!