
ಜೆನ್ ಜೀಗಳ ಫೈರ್ ಹಣಕಾಸು ಚಳವಳಿ
ಆರ್ಥಿಕ ಅಸ್ಥಿರತೆಯ ನಡುವೆಯೇ ಬೆಳೆದಿರುವ ಜೆನ್ ಜೀ ಹುಡುಗರು ರಿಸ್ಕ್ ಅನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಉಳಿತಾಯ ಮತ್ತು ಹೂಡಿಕೆಯಲ್ಲಿ ಹೊಸ ಹಾದಿ ತುಳಿಯುತ್ತಿದ್ದಾರೆ. ಫೈರ್ (FIRE) ಎಂಬ ಮೂವ್‌ಮೆಂಟ್ ಅವರ ಸ್ವತಂತ್ರ ಮತ್ತು ಆರಾಮ ಬಯಸುವ ಗುಣಕ್ಕೆ ಪೂರಕವಾಗಿ ಮೂಡಿಬಂದಿದೆ.
ತಮ್ಮ ಬಗ್ಗೆ ಜೆನ್ ಎಕ್ಸ್ ಅಥವಾ ಮಿಲೇನಿಯಲ್ಸ್‌ನವರಲ್ಲಿ ಇರುವ ಪೂರ್ವಾಗ್ರಹಗಳ ಬಗ್ಗೆ ಈ ಹುಡುಗರು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಹಣಕಾಸಿನಲ್ಲಿ ಸ್ಮಾರ್ಟ್ ಮೂವ್‌ಗಳ ಮೂಲಕ ನಾವು ನಿಮಗಿಂತ ಜಾಣರು ಅನ್ನೋದನ್ನು ಸಾಬೀತು ಮಾಡುತ್ತ ಬರುತ್ತಿದ್ದಾರೆ.
ಬಹಳ ಚಿಕ್ಕ ವಯಸ್ಸಿನಲ್ಲೇ (ಕೆಲವರು 10 ವರ್ಷಕ್ಕೆ) ಉಳಿತಾಯ ಖಾತೆ ತೆರೆದು ಹಣ ಉಳಿಸಲು ಆರಂಭಿಸಿರುತ್ತಾರೆ.
ಕಾಲೇಜಿಗೆ ಹೋಗುವ ಹೊತ್ತಿಗೇ ಷೇರು ಮಾರುಕಟ್ಟೆ ಮತ್ತು ಹೂಡಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅಪ್‌ಡೇಟ್ ಆಗಿರುತ್ತಾರೆ. ಉದ್ಯೋಗಕ್ಕೆ ಸೇರಿದ ಕೆಲವೇ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದ್ದಾರೆ.
ಫೈರ್ ಯೋಜನೆ ಪ್ರಕಾರ ಜೆನ್ ಜೀಗಳು ತಮ್ಮ ಆದಾಯದ 50% ರಿಂದ 75% ರಷ್ಟು ಭಾಗವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಇತರರು ತಮ್ಮ ಸಂಬಳದಲ್ಲಿ ಶೇ. 10 ರಿಂದ ಶೇ.15ರಷ್ಟು ಉಳಿತಾಯ ಮಾಡಲೂ ಒದ್ದಾಡುತ್ತಾರೆ.
ನಿಮ್ಮ ವಾರ್ಷಿಕ ಖರ್ಚನ್ನು 25 ರಿಂದ ಗುಣಿಸಿದರೆ ಬರುವ ಮೊತ್ತವೇ ನಿಮ್ಮ ‘ಫೈರ್ ನಂಬರ್’. ನಿವೃತ್ತಿಯ ನಂತರ ಪ್ರತೀ ವರ್ಷ ಉಳಿತಾಯದ ಶೇ.3 ರಿಂದ ಶೇ.4ರಷ್ಟು ಭಾಗವನ್ನು ಮಾತ್ರ ಖರ್ಚಿಗೆ ಬಳಸುವ ಯೋಜನೆ ಇವರದು.
ಇದನ್ನೂ ಓದಿ: ಗಿಫ್ಟ್ ಕೊಡ್ಬೇಕಾಗಿಲ್ಲ, ಡಿನ್ನರ್ ಗೆ ಕರೀಬೇಕಾಗಿಲ್ಲ, ಜೆನ್ ಝೀಗಳಲ್ಲಿ ಹೆಚ್ಚಾಗ್ತಿದೆ ಅಫರ್ಡೇಟಿಂಗ್
ಇದನ್ನೂ ಓದಿ: Gen Z: ಪರ್ಫೆಕ್ಟ್ ಬಾಡಿಗಾಗಿ ಜಿಮ್ ಅಡಿಕ್ಷನ್! Instagram ಲೈಕ್ಸ್‌ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ ಯುವಕರು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.