ಬ್ಯಾಂಕ್ ಠೇವಣಿ ಮೇಲಿನ ವಿಮೆ ಕನಿ‍ಷ್ಠ ₹2 ಲಕ್ಷಕ್ಕೆ ಏರಿಕೆ?

Published : Nov 12, 2019, 08:40 AM IST
ಬ್ಯಾಂಕ್ ಠೇವಣಿ ಮೇಲಿನ ವಿಮೆ ಕನಿ‍ಷ್ಠ  ₹2 ಲಕ್ಷಕ್ಕೆ ಏರಿಕೆ?

ಸಾರಾಂಶ

ಯಾವುದೇ ಬ್ಯಾಂಕ್ ದಿವಾಳಿಯಾದರೆ, ಅದರಲ್ಲಿ ಗ್ರಾಹಕ ಎಷ್ಟೇ ಹಣ ಇಟ್ಟಿದ್ದರೂ ಆತನಿಗೆ ಖಚಿತವಾಗಿ ಸಿಗುವುದು ಗರಿಷ್ಠ 1 ಲಕ್ಷ ರು. ಮಾತ್ರ. ಇದಕ್ಕೆ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ (ಡಿಐಸಿಜಿಸಿ) ರಕ್ಷಣೆಯನ್ನು ಒದಗಿಸಿರುತ್ತದೆ. 

ನವದೆಹಲಿ (ನ. 12): ಮುಂಬೈ ಮೂಲದ ಪಂಜಾಬ್ ಹಾಗೂ ಮಹಾರಾಷ್ಟ್ರ ಸಹ ಕಾರಿ ಬ್ಯಾಂಕ್ (ಪಿಎಂಸಿ)ನ ಆರ್ಥಿಕ ಬಿಕ್ಕಟ್ಟಿನಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಯಾವುದೇ ಬ್ಯಾಂಕುಗಳಲ್ಲಿ ಗ್ರಾಹಕರು ಇಡುವ ಹಣದ ಮೇಲಿನ ವಿಮಾ ಭದ್ರತೆಯನ್ನು ಹಾಲಿ 1 ಲಕ್ಷ ರು.ನಿಂದ ಕನಿಷ್ಠ 2 ಲಕ್ಷ ರು.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ.

ಗಮನಿಸಿ.. ನವೆಂಬರ್ 30 ರಿಂದ LIC ಈ ಪಾಲಿಸಿಗಳು ಬಂದ್!

ಯಾವುದೇ ಬ್ಯಾಂಕ್ ದಿವಾಳಿಯಾದರೆ, ಅದರಲ್ಲಿ ಗ್ರಾಹಕ ಎಷ್ಟೇ ಹಣ ಇಟ್ಟಿದ್ದರೂ ಆತನಿಗೆ ಖಚಿತವಾಗಿ ಸಿಗುವುದು ಗರಿಷ್ಠ 1 ಲಕ್ಷ ರು. ಮಾತ್ರ. ಇದಕ್ಕೆ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ (ಡಿಐಸಿಜಿಸಿ) ರಕ್ಷಣೆಯನ್ನು ಒದಗಿಸಿರುತ್ತದೆ. ಈ ಮೊದಲು ಠೇವಣಿ ಮೇಲೆ 30 ಸಾವಿರ ರು. ವಿಮೆ ಇತ್ತು.

2020 ರಲ್ಲಿ ಸಂಬಳ ಶೇ. 10 ರಷ್ಟು ಏರಿಕೆ: ಮೋದಿ ಪ್ಲಾನ್ ತಿಳಿಯಬೇಕೇ?

ಅದನ್ನು 1993 ರಲ್ಲಿ 1 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ 1 ಲಕ್ಷ ರು. ವಿಮೆಯನ್ನು ಕನಿಷ್ಠ 2 ಲಕ್ಷ ರು.ಗೆ ಹೆಚ್ಚಳ ಮಾಡಲು ಸರ್ಕಾರ ಚಿಂತನೆಯಲ್ಲಿದೆ ಎಂದು ಆಂಗ್ಲದೈನಿ ಕವೊಂದು ವರದಿ ಮಾಡಿದೆ. ಉಳಿತಾಯ ಖಾತೆಯಲ್ಲಿನ ಹಣ, ನಿಶ್ಚಿತ ಠೇವಣಿ, ಚಾಲ್ತಿ ಹಾಗೂ ಆರ್‌ಡಿ ಖಾತೆಯಲ್ಲಿನ ಮೊತ್ತಕ್ಕೆ ವಿಮೆ ಅನ್ವಯವಾಗುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!