ಭಾರತದ 15 ಸ್ವಿಸ್ ಖಾತೆ ನಿಷ್ಕ್ರಿಯ; ವಾರಸ್ಥಾರರೇ ಇಲ್ಲ!

By Kannadaprabha News  |  First Published Nov 11, 2019, 10:03 AM IST

ಸ್ವಿಸ್ ಬ್ಯಾಂಕ್‌ನಲ್ಲಿ  2015 ರಲ್ಲಿ 2600 ಖಾತೆಗಳಲ್ಲಿ 300 ಕೋಟಿಗೂ ಹೆಚ್ಚು ಹಣವಿತ್ತು | ಸ್ವಿಸ್ ಬ್ಯಾಂಕುಗಳಲ್ಲಿ ಒಂದು ಡಜನ್ ಭಾರತೀಯರಿಗೆ ಸೇರಿದ ಖಾತೆಗಳು ನಿಷ್ಕ್ರಿಯವಾಗಿದ್ದು, ಅದಕ್ಕೆ ವಾರಸುದಾರರೇ ಇಲ್ಲದಂತಾಗಿದೆ. 


ನವದೆಹಲಿ/ಜೂರಿಕ್ (ನ. 11):  ಕಾಳಧನಿಕರ ಸ್ವರ್ಗ ಎಂದೇ ಬಣ್ಣಿಸಲಾಗುವ ಸ್ವಿಸ್ ಬ್ಯಾಂಕುಗಳಲ್ಲಿ ಒಂದು ಡಜನ್ ಭಾರತೀಯರಿಗೆ ಸೇರಿದ ಖಾತೆಗಳು ನಿಷ್ಕ್ರಿಯವಾಗಿದ್ದು, ಅದಕ್ಕೆ ವಾರಸುದಾರರೇ ಇಲ್ಲದಂತಾಗಿದೆ. ಹೀಗಾಗಿ, ಆ ಖಾತೆಯಲ್ಲಿನ ಹಣ ಸದ್ಯದಲ್ಲೇ ಸ್ವಿಜರ್ಲೆಂಡ್ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ. ತನ್ನ ಬ್ಯಾಂಕುಗಳಲ್ಲಿರುವ ‘ಡಾರ್ಮಂಟ್’ (ನಿಷ್ಕ್ರಿಯ) ಖಾತೆಗಳ ವಿವರವನ್ನು 2015 ರಲ್ಲಿ ಸ್ವಿಜರ್ಲೆಂಡ್ ಸರ್ಕಾರ ಬಹಿರಂಗಪಡಿಸಿತ್ತು.

ಗಮನಿಸಿ.. ನವೆಂಬರ್ 30 ರಿಂದ LIC ಯ ಈ ಪಾಲಿಸಿಗಳು ಬಂದ್!

Tap to resize

Latest Videos

undefined

ಆಗಿನ ಮಾಹಿತಿ ಅನ್ವಯ 2600 ನಿಷ್ಕ್ರಿಯ ಖಾತೆಗಳಲ್ಲಿ ಸುಮಾರು 300 ಕೋಟಿ ರು.ಗಿಂತ ಹೆಚ್ಚಿನ ಹಣ ವಾರಸುದಾರರಿಲ್ಲದೇ ಹಾಗೇ ಉಳಿದಿತ್ತು. ಸಂಬಂಧಿಸಿದ ಖಾತೆದಾರರು ಸೂಕ್ತ ದಾಖಲೆ ಒದಗಿಸಿ, ಅದರಲ್ಲಿರುವ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಷ್ಟು ವರ್ಷಗಳು ಕಳೆದರೂ ಭಾರತೀಯ ಖಾತೆದಾರರಿಗೆ ಸೇರಿದ ಒಂದು ಡಜನ್ ನಿಷ್ಕ್ರಿಯ ಖಾತೆಗಳ ಸಂಬಂಧ ಅದರ ವಾರಸುದಾರರಿಂದಾಗಲೀ ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಂದಾಗಲೀ ಪ್ರತಿಕ್ರಿಯೆ ಯೇ ಬಂದಿಲ್ಲ.

ಈ ಪೈಕಿ ಕೆಲವು ಖಾತೆಗಳು ಬ್ರಿಟಿಷರ ಕಾಲದಲ್ಲಿ ತೆರೆಯಲ್ಪಟ್ಟವಾಗಿವೆ. ಈ ಡಾರ್ಮಂಟ್ ಖಾತೆಗಳಲ್ಲಿರುವ ಹಣ ವನ್ನು ಮರಳಿ ಪಡೆಯಲು ಮುಂದಿನ ತಿಂಗಳಿನವರೆಗೆ ಅವಕಾಶವಿದೆ. ಕೆಲವು ಖಾತೆಗಳಿಗೆ ಮಾತ್ರ 2020 ರ ಅಂತ್ಯ ಭಾಗದವರೆಗೂ ಸಮ ಯಾವಕಾಶ ನೀಡಲಾಗಿದೆ. ಅಷ್ಟರೊಳಗೆ ಯಾರೂ ದಾಖಲೆ ನೀಡಿ ಹಣ ಪಡೆಯದೇ ಇದ್ದಲ್ಲಿ, ಅದರಲ್ಲಿ ರುವ ಹಣ ಸ್ವಿಜರ್ಲೆಂಡ್ ಸರ್ಕಾರಕ್ಕೆ ಹೋಗಲಿದೆ.

ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?

ಕಲ್ಕತ್ತಾ (ಈಗಿನ ಕೋಲ್ಕತಾ)ದ ಇಬ್ಬರು, ಡೆಹ್ರಾ ಡೂನ್‌ನ ಒಬ್ಬರು ಹಾಗೂ ಬಾಂಬೆ (ಈಗಿನ ಮುಂಬೈ) ಯ ಇಬ್ಬರಿಗೆ ಸೇರಿದ ಖಾತೆಗಳು ಕೂಡ ಡಾರ್ಮಂಟ್ ಆಗಿವೆ. ಲೀಲಾ ತಾಲೂಕ್‌ದಾರ್, ಪ್ರಮಾತಾ ಎನ್. ತಾಲೂಕ್‌ದಾರ್ ಎಂಬುವರಿಗೆ ಸೇರಿದ ಎರಡು ಖಾತೆಗಳಲ್ಲಿರುವ ಹಣ ಹಿಂಪಡೆಯಲು ನೀಡಿದ ಅವಧಿ ನ.15 ರಂದು ಕೊನೆಯಾ ಗಲಿದೆ. ಚಂದ್ರಲತಾ ಪ್ರಾಣಲಾಲ್ ಪಟೇಲ್, ಮೋಹನ ಲಾಲ್ ಹಾಗೂ ಕಿಶೋರ್ ಲಾಲ್ ಎಂಬುವರಿಗೆ ಸೇರಿದ ಖಾತೆಯಲ್ಲಿರುವ ಹಣಕ್ಕೆ ದಾವೆ ಮಂಡಿಸುವ ಅವಧಿ ಡಿಸೆಂಬರ್‌ಗೆ ಮುಗಿಯಲಿದೆ.

click me!