3 ವರ್ಷಗಳ ಬಳಿಕ ನೋಟ್ ಬ್ಯಾನ್ ಪರಿಣಾಮ ಹೇಳಿದ ಮೋದಿ!

By Suvarna News  |  First Published Dec 10, 2019, 7:26 PM IST

ನೋಟ್ ಬ್ಯಾನ್ ಪರಿಣಾಮ ಏನು ಗೊತ್ತಾ?| ಕೇಂದ್ರ ಸರ್ಕಾರವೇ ಹೇಳಿದ ನೋಟ್ ಬ್ಯಾನ್ ಪರಿಣಾಮದ ಕತೆ| ಅಪನಗದಿಕರಣದ ಕಳೆದ ಮೂರು ವರ್ಷಗಳ ಸಾಧನೆ ಬಿಚ್ಚಿಟ್ಟ ಕೇಂದ್ರ| ‘ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತ’| ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಾಹಿತಿ| 3,060,605 ಕೋಟಿ ರೂ.ಗಳಷ್ಟು ಕರೆನ್ಸಿ ನೋಟುಗಳ ಚಲಾವಣೆ ಕಡಿಮೆ| ‘ಡಿಜಿಟಲೀಕರಣದ ಪರಿಣಾಮ ಕರೆನ್ಸಿ ನೋಟುಗಳ ಚಲಾವಣೆಯಲ್ಲಿ ಕುಂಠಿತ’| 2018-19ರಲ್ಲಿ 3, 17,389 ರೂ. ನಕಲಿ ನೋಟುಗಳು ಪತ್ತೆ| 


ನವದೆಹಲಿ(ಡಿ.10): ಅಪನಗದೀಕರಣ ದೇಶದ ಅರ್ಥ ವ್ಯವಸ್ಥೆಯನ್ನು ಬದಲಿಸಿದ್ದು ಸುಳ್ಳಲ್ಲ. ಸಾಂಪ್ರದಾಯಿಕ ಆರ್ಥಿಕ ನೀತಿಗಳನ್ನು ಬದಿಗಿರಿಸಿ ಹೊಸ ಅರ್ಥ ವ್ಯವಸ್ಥೆಯ ಹಳಿಯ ಮೇಲೆ ಭಾರತ ಪಯಣಿಸಲು ಆರಂಭಿಸಿದ್ದು ಈಗ ಇತಿಹಾಸ. 

ನೋಟು ಅಮಾನ್ಯೀಕರಣದಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

Tap to resize

Latest Videos

ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನವೆಂಬರ್ 4, 2016 ರಲ್ಲಿ 17,74,187 ಕೋಟಿ ರೂ. ಕರೆನ್ಸಿ ನೋಟುಗಳ ಚಲಾವಣೆಯಲ್ಲಿತ್ತು. ಅದು ಡಿಸೆಂಬರ್ 2 , 2019 ವೇಳೆಗೆ  22,35,648 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. 

ಅಕ್ಟೋಬರ್ 2014ರಿಂದ ಅಕ್ಟೋಬರ್ 2016ರವರೆಗೂ ವರ್ಷಕ್ಕೆ ಸರಾಸರಿ ಶೇ. 14. 51ರಲ್ಲಿ  ನೋಟುಗಳ ಬೆಳವಣಿಗೆ ಹೆಚ್ಚಾಗಿದ್ದು, ಡಿಸೆಂಬರ್ 2ರ ವೇಳೆಗೆ 25, 40, 253 ಕೋಟಿ ರೂ. ಗೆ. ಏರಿಕೆ ಆಗಿದೆ. 

ನೋಟು ಅಮಾನ್ಯೀಕರಣ ನಂತರ 3, 04, 605 ಕೋಟಿಯಷ್ಟು ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?

ನಗದು ರಹಿತ ಆರ್ಥಿಕತೆ ಹಾಗೂ  ಡಿಜಿಟಲೀಕರಣ 3,060,605 ಕೋಟಿ ರೂ.ಗಳಷ್ಟು ಕರೆನ್ಸಿ ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು.

2016-17ರಲ್ಲಿ 7, 62, 072 ರೂ, 2017-18ರಲ್ಲಿ 5, 22, 783 ಹಾಗೂ 2018-19ರಲ್ಲಿ 3, 17,389 ರೂ. ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಆರ್ ಬಿಐ ತಿಳಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಸದನಕ್ಕೆ ಮಾಹಿತಿ ನೀಡಿದರು. 

ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!

ನೋಟು ಅಮಾನ್ಯೀಕರಣದಿಂದ ನಕಲಿ ನೋಟುಗಳ ತಡೆಗಟ್ಟುವುದರ ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಳವಾಗಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು.

click me!