ಡೆಲ್ಟಾ ಏರ್‌ಲೈನ್ಸ್‌ನಿಂದ ಗಗನಸಖಿಯರಿಗೆ ಖಡಕ್‌ ನಿಯಮ: 'ಚಡ್ಡಿ ಹಾಕಿಕೊಂಡು ಬನ್ನಿ..!'

By Santosh NaikFirst Published Sep 18, 2024, 8:08 PM IST
Highlights

ಡೆಲ್ಟಾ ಏರ್‌ಲೈನ್ಸ್‌ ತನ್ನ ಗಗನಸಖಿಯರಿಗೆ ಕಟ್ಟುನಿಟ್ಟಾದ ಡ್ರೆಸ್‌ಕೋಡ್‌ ನಿಯಮಗಳನ್ನು ಜಾರಿಗೊಳಿಸಿದೆ, ಇದರಲ್ಲಿ ಒಳ ಉಡುಪುಗಳು, ಕೂದಲು, ಆಭರಣ ಮತ್ತು ಬಟ್ಟೆಗಳ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಈ ನಿಯಮಗಳು ವೃತ್ತಿಪರತೆ ಮತ್ತು ಅಚ್ಚುಕಟ್ಟಾದ ನೋಟವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ.

ನ್ಯೂಯಾರ್ಕ್‌ (ಸೆ.18): ಅಮೆರಿಕದ ಅತ್ಯಂತ ಪ್ರಸಿದ್ದ ಏರ್‌ಲೈನ್ಸ್‌ ಕಂಪನಿ ಡೆಲ್ಟಾ ಏರ್‌ಲೈನ್ಸ್‌ ಹಾಲಿ ಇರುವ ಗಗನಸಖಿಯರು ಹಾಗೂ ಸಂದರ್ಶನಕ್ಕೆ ಹಾಜಾರಾಗುವ ಭವಿಷ್ಯದ ಗಗನಸಖಿಯರಿಗೆ ಖಡಕ್‌ ಆದ ಎಚ್ಚರಿಕೆಯನ್ನು ನೀಡಿದೆ. ಅದೇನೆಂದರೆ, 'ಚಡ್ಡಿ ಹಾಕಿಕೊಂಡು ಬನ್ನಿ..' ಇತ್ತೀಚೆಗೆ ಏರ್‌ಲೈನ್ಸ್ ಕಂಪನಿ ಎರಡು ಪುಟದ ಮೆಮೊಅನ್ನು ಪ್ರಕಟ ಮಾಡಿದೆ. ಇದರಲ್ಲಿ ಸಂದರ್ಶನಕ್ಕೆ ಹೇಗೆ ಬರಬೇಕು, ತರಬೇತಿಯ ವೇಳೆ ಹೇಗೆ ಇರಬೇಕು, ವೃತ್ತಿಜೀವನದ ಪ್ರಗತಿಗೆ ಇರುವಂಥ ಅತ್ಯಂತ ಕಟ್ಟುನಿಟ್ಟಾದ ಡ್ರೆಸ್‌ಕೋಡ್‌ನ ವಿವರಗಳನ್ನು ತಿಳಿಸಿದೆ. ಕೇವಲ ಒಳ ಉಡುಪಿನ ಬಗ್ಗೆ ಮಾತ್ರವಲ್ಲ, ಅಂದವಾಗಿ ಕಾಣಿಸಿಕೊಳ್ಳುವ ಬಗ್ಗೆ, ಕೂದಲು, ಆಭರಣ ಮತ್ತು ಬಟ್ಟೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಅದರಲ್ಲೂ ಒಳಉಡುಪಿನ ಬಗ್ಗೆ ಅತ್ಯಂತ ಅಚ್ಚಕಟ್ಟಾಗಿ ನಿಯಮ ರೂಪಿಸಿದೆ. ಮೆಮೊ ಪ್ರಕಾರ ಸರಿಯಾದ ಒಳಉಡುಪುಗಳು ಧರಿಸುವುದು ಕಡ್ಡಾಯ. ಆದರೆ, ಈ ಒಳಉಡುಪುಗಳು ಯಾರಿಗೂ ಕಾಣಿಸದಂತಿರಬೇಕು ಎಂದು ತಿಳಿಸಲಾಗಿದೆ.  ವಿಮಾನಯಾನ ಸಂಸ್ಥೆಯು ವೃತ್ತಿಪರತೆ ಮತ್ತು ಅಚ್ಚುಕಟ್ಟಾದ ನೋಟದ ಬಗ್ಗೆಯೂ ತಿಳಿಸಿದೆ. ಏರ್‌ಲೈನ್‌ನಲ್ಲಿ ಹಾಲಿ ಇರುವ ಹಾಗೂ ಭವಿಷ್ಯದ ಗಗನಸಖಿಯರು ಈ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿದೆ.

''ಡೆಲ್ಟಾ ಫ್ಲೈಟ್ ಅಟೆಂಡೆಂಟ್‌ಗಳು ನಮ್ಮ ಗ್ರಾಹಕರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಮತ್ತು ನಮ್ಮ ಏರ್‌ಲೈನ್‌ನ ಫೇಸ್‌ ಅವರಾಗಿದ್ದಾರೆ. ಡೆಲ್ಟಾ ಬ್ರ್ಯಾಂಡ್ ಅನ್ನು ಸಾಕಾರಗೊಳಿಸುವಾಗ ಪ್ರತಿ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಬಗ್ಗೆ ಅವರು ಗಮನವಿಡಬೇಕು. ಡೆಲ್ಟಾ ಫ್ಲೈಟ್ ಅಟೆಂಡೆಂಟ್ ನಮ್ಮ ಗ್ರಾಹಕರಿಗೆ ಮುಖ್ಯವಾದ ನೆನಪುಗಳನ್ನು ರಚಿಸುವಾಗ ಸ್ವಾಗತಾರ್ಹ ಅನುಭವಗಳನ್ನು ನೀಡಬೇಕು. ಫ್ಲೈಟ್ ಅಟೆಂಡೆಂಟ್ ತಮ್ಮ ಸಮವಸ್ತ್ರವನ್ನು ಧರಿಸಿದ ಕ್ಷಣದಿಂದ ಗ್ರಾಹಕ ಸೇವಾ ಅನುಭವವು ಪ್ರಾರಂಭವಾಗುತ್ತದೆ. ಡೆಲ್ಟಾ ಸಮವಸ್ತ್ರವು ಯಾವಾಗಲೂ ಸುರಕ್ಷತೆಗೆ ಮೊದಲ ಸ್ಥಾನವನ್ನು ನೀಡುತ್ತದೆ, ಡೆಲ್ಟಾ ಸಂಸ್ಕೃತಿಯಲ್ಲಿ ಹೆಮ್ಮೆ ಮತ್ತು ನಮ್ಮ ಗ್ರಾಹಕರು ನೆನಪಿಟ್ಟುಕೊಳ್ಳುವಂತೆ ಇರಬೇಕು' ಎಂದು ತಿಳಿಸಲಾಗಿದೆ.

ವೃತ್ತಿಪರವಾಗಿ ಇರಲು, ಡೆಲ್ಟಾ ಏರ್‌ಲೈನ್‌ ಈ ನಿಯಮಗಳನ್ನು ಹಾಕಿದೆ.

  • ಕೂದಲು ನೈಸರ್ಗಿಕ ಬಣ್ಣವನ್ನು ಹೊಂದಿರಬೇಕು, ದಪ್ಪ ಹೈಲೈಟ್‌ಗಳು ಅಥವಾ ಕೃತಕ ಛಾಯೆಗಳು ಅವುಗಳಿಗೆ ಇರಬಾರದು.
  • ಉದ್ದನೆಯ ಕೂದಲು ಇದ್ದಲ್ಲಿ, ಅದನ್ನು ಹಿಂದಕ್ಕೆ ಎಳೆಯಬೇಕು ಮತ್ತು ಭುಜಗಳ ಮೇಲೆಯೇ ಇರಬೇಕು. ನಿಮ್ಮ ಬೆನ್ನಿಗೆ ಬರುವಷ್ಟು ಕೂದಲು ಉದ್ದವಾಗಿದ್ದರೆ, ಅವುಗಳನ್ನು ಪಿನ್‌ ಮಾಡಿ ಕಟ್ಟಬೇಕು.
  • ಕಣ್ರೆಪ್ಪೆಗಳು ನೈಸರ್ಗಿಕವಾಗಿಯೇ ಇರಬೇಕು.
  • ಉಗುರುಗಳ ವಿಷಯಕ್ಕೆ ಬರುವುದಾದರೆ, ಅವು ಸರಳ ಮತ್ತು ಸೂಕ್ಷ್ಮವಾಗಿರಬೇಕು. ಯಾವುದೇ ನಿಯಾನ್ ಬಣ್ಣಗಳು, ಬಹು-ಬಣ್ಣ, ಹೊಳಪು ಅಥವಾ ಕೈಯಿಂದ ಚಿತ್ರಿಸಿದ ವಿನ್ಯಾಸಗಳಿಗೆ ಅನುಮತಿ ಇರೋದಿಲ್ಲ.
  • ಟ್ಯಾಟೂಗಳನ್ನು ಮುಚ್ಚಬೇಕು. ಹಾಗಂತ ಅವುಗಳಿಗೆ ಬ್ಯಾಂಡೇಜ್‌ ಹಾಕಿಕೊಳ್ಳುವುದು ಪರಿಹಾರವಲ್ಲ.
  • ಮೂಗಿನ ಒಂದು ರಂಧ್ರಕ್ಕೆ ಮಾತ್ರ ಚುಚ್ಚಿರಬಹುದು. ಮತ್ತು ಅನುಮತಿಸಲಾದ ಸ್ಟಡ್‌ಗಳಲ್ಲಿ ಚಿನ್ನ, ಬೆಳ್ಳಿ, ಬಿಳಿ ಮುತ್ತು ಅಥವಾ ಸ್ಪಷ್ಟವಾದ ವಜ್ರ/ವಜ್ರದಂತಹವು ಸೇರಿವೆ. ಇವುಗಳ ಹೊರತು ಬೇರೆ ಹಾಕಿಕೊಳ್ಳುವಂತಿಲ್ಲ.
  • ಚುಚ್ಚುವ ಆಭರಣದ ವಿಚಾರಕ್ಕೆ ಬರುವುದಾದರೆ, ಪ್ರತಿ ಕಿವಿಗೆ ಎರಡು ಕಿವಿಯೋಲೆಗಳನ್ನು ಮಾತ್ರ ಅನುಮತಿಸಲಾಗಿದೆ ಮತ್ತು ಅವು ಚಿಕ್ಕದಾಗಿರಬೇಕು ಮತ್ತು ನೇತಾಡುವಂತಿರಬಾರದು.
  • ಮೂಗಿನ ಹೊರತಾಗಿ ದೇಹದ ಯಾವುದೇ ಭಾಗದಲ್ಲಿ ಚುಚ್ಚಿಕೊಂಡಿದ್ದರೂ, ಅದನ್ನು ಮುಕ್ತವಾಗಿ ತೋರಿಸುವಂತಿಲ್ಲ.
  • ಬಟ್ಟೆಯ ವಿಷಯಕ್ಕೆ ಬಂದಾಗ, ಡೆಲ್ಟಾ ವೃತ್ತಿಪರತೆ ಮತ್ತು ಫಿಟ್‌ಗೆ ಒತ್ತು ನೀಡುತ್ತದೆ. ಡ್ರೆಸ್‌ಗಳು ಮತ್ತು ಸ್ಕರ್ಟ್‌ಗಳು ಮೊಣಕಾಲಿನ ಉದ್ದ ಅಥವಾ ಕೆಳಗೆ ಬೀಳಬೇಕು ಮತ್ತು ಅಥ್ಲೆಟಿಕ್ ಬೂಟುಗಳಿಗೆ ಅನುಮತಿ ಇರೋದಿಲ್ಲ. ಬದಲಾಗಿ, ಫ್ಲೈಟ್ ಅಟೆಂಡೆಂಟ್‌ಗಳು ಮುಚ್ಚಿದ ಟೋ ಫ್ಲಾಟ್‌ಗಳು, ಹೀಲ್ಸ್ ಅಥವಾ ಸ್ಲಿಂಗ್-ಬ್ಯಾಕ್ ಬೂಟುಗಳನ್ನು ಆರಿಸಬೇಕಾಗುತ್ತದೆ. ಪುರುಷರಿಗೆ, ಬಟನ್-ಕಾಲರ್ಡ್ ಡ್ರೆಸ್ ಶರ್ಟ್‌ಗಳೊಂದಿಗೆ ಟೈ ಅಗತ್ಯವಿದೆ.
  • ಸಂದರ್ಶನದ ದಿನದಂದು, ಡೆಲ್ಟಾ ವಿಮಾನಯಾನವು ಅಶ್ಲೀಲತೆ, ಚೂಯಿಂಗ್ ಗಮ್ ಮತ್ತು ಫೋನ್ ಅಥವಾ ಇಯರ್‌ಬಡ್ ಬಳಕೆಗಾಗಿ ಕಟ್ಟುನಿಟ್ಟಾದ ನೀತಿಯನ್ನು ನಿರ್ವಹಿಸುತ್ತದೆ.

ವಿಶ್ವದ ಅತಿದೊಡ್ಡ ಏರ್‌ಲೈನ್‌ ಕಂಪನಿಗಳು, ಟಾಪ್‌ 10 ಲಿಸ್ಟ್‌ನಲ್ಲಿ ಭಾರತದ ಏಕೈಕ ಬ್ರ್ಯಾಂಡ್‌

Latest Videos

''ಒಂದು ನಿರ್ದಿಷ್ಟ ರೀತಿಯ ಉಡುಗೆ ಅಥವಾ ದೈಹಿಕ ನೋಟವನ್ನು ಸರಿಹೊಂದಿಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ ಸುರಕ್ಷತಾ ಅಪಾಯ ಅಥವಾ ಇತರ ಅನಗತ್ಯ ಹೊರೆಯನ್ನು ಉಂಟುಮಾಡದ ಹೊರತು ಧಾರ್ಮಿಕ ನಂಬಿಕೆಗಳು ಅಥವಾ ಆಚರಣೆಗಳನ್ನು ಇಟ್ಟುಕೊಳ್ಳುವುದು ಕಂಪನಿಗೆ ಸಮಸ್ಯೆಯಲ್ಲ" ಎಂದು ಮೆಮೊದಲ್ಲಿ ತಿಳಿಸಲಾಗಿದೆ.

ಏನಿದು ಇಂಡಿಗೋ Cute fee? ಏರ್‌ಲೈನ್‌ನ ಪ್ರತಿಕ್ರಿಯೆಗೆ ಕಿಡಿಕಿಡಿಯಾದ ವಕೀಲ!

click me!