Asianet Suvarna News Asianet Suvarna News

ಏನಿದು ಇಂಡಿಗೋ Cute fee? ಏರ್‌ಲೈನ್‌ನ ಪ್ರತಿಕ್ರಿಯೆಗೆ ಕಿಡಿಕಿಡಿಯಾದ ವಕೀಲ!

indigo fee controversy ಇಂಡಿಗೋ ಏರ್‌ಲೈನ್ಸ್‌ ತನ್ನ ಪ್ರಯಾಣಿಕರಿಗೆ ಕ್ಯೂಟ್‌ ಫೀ ಹಾಕಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ವ್ಯಕ್ತಿ ಕ್ಯೂಟ್‌ ಆಗಿರೋದಕ್ಕೂ ನೀವು ಶುಲ್ಕ ಹಾಕ್ತೀರಾ ಎಂದು ವಕೀಲರೊಬ್ಬರು ಪ್ರಶ್ನೆ ಮಾಡಿದ್ದಾರೆ.

IndiGo airlines Cute fee Advocate slams reply Do you charge users for being cute san
Author
First Published Aug 20, 2024, 11:53 AM IST | Last Updated Aug 20, 2024, 11:53 AM IST

ಬೆಂಗಳೂರು (ಆ.20): ಇಂಡಿಗೋ ಏರ್‌ಲೈನ್ಸ್‌ ಕಂಪನಿ ತನ್ನ ಪ್ರಯಾಣಿಕರಿಗೆ ಏರ್‌ಟಿಕೆಟ್‌ನಲ್ಲಿ ಹಾಕುವ ಕ್ಯೂಟ್‌ ಫೀ ಬಗ್ಗೆ ವಕೀಲರೊಬ್ಬರು ಪ್ರಶ್ನೆ ಮಾಡಿದ್ದು, ನೆಟ್ಟಿಗರ ಗಮನಸೆಳೆದಿದೆ. ಇದು ಕೇವಲ ಬರೀ ವಕೀಲರ ಪೋಸ್ಟ್‌ ಮಾತ್ರವೇ ಇಲ್ಲ. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಸ್ವತಃ ಇಂಡಿಗೋ ಕಂಪನಿ ಕೂಡಸ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮತ್ತಷ್ಟು ಜಟಾಪಟಿಗೆ ಕಾರಣವಾಗಿದೆ. 'ಪ್ರೀತಿಯ ಇಂಡಿಗೋ, ಇದರಲ್ಲಿ ಕ್ಯೂಟ್‌ ಫೀ ಎಂದರೆ ಏನು? ನಿಮ್ಮ ಪ್ರಯಾಣಿಕರು ಕ್ಯೂಟ್‌ ಆಗಿರುವ ಆಧಾರದ ಮೇಲೂ ಶುಲ್ಕ ವಿಧಿಸುತ್ತೀರಾ? ಅಥವಾ ನಿಮ್ಮ ಏರೋಪ್ಲೇನ್‌ಗಳು ಕ್ಯೂಟ್‌ ಆಗಿದೆ ಅನ್ನೋ ನಂಬಿಕೆ ನಿಮಗೆ ಇರುವ ಕಾರಣ ಈ ಫೀ ಹಾಕ್ತಾ ಇದ್ದೀರಾ? ಎಂದು ವಕೀಲ ಶರಣ್ಯಾಂಶ್‌ ಸಿಂಗ್‌ ಎನ್ನುವವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ಯೂಸರ್‌ ಡೆವಲಪ್‌ಮೆಂಟ್‌ ಫೀ ಹಾಗು ಏವಿಯೇಷನ್‌ ಸೆಕ್ಯೂರಿಟಿ ಫೀ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನೆ ಮಾಡಿದ್ದಾರೆ.

ಇಂಡಿಗೋ ನೀಡಿದ ಪ್ರತಿಕ್ರಿಯೆ ಏನು?: ಹಾಯ್‌ ನಾನು ನಿಮಗೆ ಮಾಹಿತಿ ನೀಡುವುದು ಏನೆಂದರೆ, ಕ್ಯೂಟ್‌ ಚಾರ್ಜಸ್‌ಗಳು ಗ್ರಾಹಕರ ಟರ್ಮಿನಲ್‌ ಇಕ್ವಿಪ್‌ಮೆಂಟ್‌ ಚಾರ್ಜ್‌ಗಳನ್ನು ತಿಳಿಸುತ್ತವೆ.ಇದು ಮೂಲತಃ ವಿಮಾನ ನಿಲ್ದಾಣದಲ್ಲಿ ಬಳಸುತ್ತಿರುವ ಲೋಹ ಪತ್ತೆ ಮಾಡುವ ಯಂತ್ರಗಳು, ಎಸ್ಕಲೇಟರ್‌ಗಳು ಮತ್ತು ಇತರ ಉಪಕರಣಗಳ ಬಳಕೆಗೆ ವಿಧಿಸಲಾಗುವ ಮೊತ್ತವಾಗಿದೆ, ”ಎಂದು ಏರ್‌ಲೈನ್ ಉತ್ತರಿಸಿದೆ. 

ಇಂಡಿಗೋ ನೀಡಿದ ಈ ಪ್ರತಿಕ್ರಿಯೆಯಿಂದ ವಕೀಲ ಮತ್ತಷ್ಟು ಆಕ್ರೋಶಗೊಂಡಿದ್ದಾರೆ. “ಇದು ವಿಮಾನ ನಿಲ್ದಾಣದ ಭದ್ರತೆಯ ಒಂದು ಭಾಗವಲ್ಲವೇ? ಮೆಟಲ್ ಡಿಟೆಕ್ಟರ್‌ಗಳು ಸರ್ಕಾರದ ಭದ್ರತಾ ಸಂಸ್ಥೆಯಾದ CISF ನ ಆಸ್ತಿಯಲ್ಲವೇ? ವಿಮಾನ ನಿಲ್ದಾಣಗಳ ಭದ್ರತೆಗಾಗಿಯೂ ಇದನ್ನು ಬಳಸುತ್ತಾರೆ ಅಲ್ಲವೇ? ವಿಮಾನ ನಿಲ್ದಾಣದ ಕಟ್ಟಡಗಳು ಸೇರಿದಂತೆ ವಿಮಾನ ನಿಲ್ದಾಣದಲ್ಲಿ ಬಳಸಲಾಗುವ ಉಪಕರಣಗಳು ಸಾರ್ವಜನಿಕ ಉಪಯುಕ್ತತೆಯ ಮೂಲಸೌಕರ್ಯಗಳಾಗಿವೆ. ನಾವು ಪಾವತಿಸುವ ತೆರಿಗೆಯಿಂದ ಅವುಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಪೋಸ್ಟ್‌ ಹಂಚಿಕೊಂಡ ನಂತರ, ವೈರಲ್ ಪೋಸ್ಟ್‌ಗಳು ಅನೇಕ ಕಾಮೆಂಟ್‌ಗಳನ್ನು ಸಂಗ್ರಹಿಸಿವೆ ಮತ್ತು ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ವ್ಯಕ್ತಿಯ ಪರವಾಗಿ ನಿಂತರೆ, ಇತರರು ಏರ್‌ಲೈನ್‌ಗೆ ಬೆಂಬಲ ತೋರಿದ್ದಾರೆ.

ಇಂಡಿಗೋ ಪೋಸ್ಟ್‌ ಬಗ್ಗೆ ಯೂಸರ್‌ಗಳ ಅಭಿಪ್ರಾಯವೇನು?: ಬಹುಶಃ ನೀವು ಮುಂದೊಂದು ದಿನ ಪೆಟ್ರೋಲ್‌ ಪಂಪ್‌ಗಳಲ್ಲಿ ಬಳಸುವ ಫ್ಯುಯೆಲ್‌ ನೊಜಲ್‌ಗಳಿಗೂ ಯೂಸರ್‌ ಚಾರ್ಜ್‌ ಹಾಕಿದರೂ ಆಶ್ಚರ್ಯವಿಲ್ಲ..! ಅಯ್ಯೋ ಕ್ಷಮಿಸಿ, ನಿಮಗೆ ನಾವು ಇಂಥ ಐಡಿಯಾಗಳನ್ನು ಕೊಡಲೇಬಾರದು ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಉಸಿರಾಟ ಮಾಡೋ ಚಾರ್ಜ್‌ ಬಿಟ್ಟಿದ್ದೀರಲ್ಲ. ಪ್ಯಾಸೆಂಜರ್‌ಗಳು ಏರ್‌ಪೋರ್ಟ್‌ ಹಾಗೂ ವಿಮಾನದಲ್ಲಿ ಆಕ್ಸಿಜನ್‌ ಉಸಿರಾಡುತ್ತಿರುತ್ತಾರೆ? ಇವುಗಳ ಟ್ಯಾಕ್ಸ್‌ ಬ್ರೇಕ್‌ಅಪ್‌ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

 “ಯಾರಾದರೂ ಇದ್ದಕ್ಕಿದ್ದಂತೆ ಬಸ್ ಟಿಕೆಟ್ ಬದಲಿಗೆ ಏರ್ ಟಿಕೆಟ್ ಖರೀದಿಸಿದಾಗ ಈ ರೀತಿಯ ಪ್ರಶ್ನೆಗಳು ಬರುತ್ತವೆ. ಪ್ರತಿ ಪ್ಯಾಕ್ಸ್‌ಗೆ TSA ಶುಲ್ಕ ವಿಧಿಸುವ USA ನಲ್ಲಿರುವಂತೆ CISF ಉಚಿತ ಸೇವೆಗಳನ್ನು ಒದಗಿಸುತ್ತಿಲ್ಲ. ಹಲವಾರು ದೇಶಗಳಲ್ಲಿ, UDF / PDF ಮತ್ತು CUTE ಶುಲ್ಕಗಳ ಬದಲಿಗೆ ವಿಮಾನ ನಿಲ್ದಾಣ ತೆರಿಗೆಯನ್ನು ಬಳಸುತ್ತದೆ' ಎನ್ನುವ ಮೂಲಕ ಏರ್‌ಲೈನ್‌ ಪರವಾಗಿ ಮಾತನಾಡಿದ್ದಾರೆ.

ವಿಶ್ವದ ಅತಿದೊಡ್ಡ ಏರ್‌ಲೈನ್‌ ಕಂಪನಿಗಳು, ಟಾಪ್‌ 10 ಲಿಸ್ಟ್‌ನಲ್ಲಿ ಭಾರತದ ಏಕೈಕ ಬ್ರ್ಯಾಂಡ್‌!

“ವಿಮಾನಯಾನ ಸಂಸ್ಥೆಗಳನ್ನು ಇಲ್ಲಿ ದೂಷಿಸಬಾರದು. CUTE/ಬಳಕೆದಾರರ ಅಭಿವೃದ್ಧಿ ಶುಲ್ಕ/ಪ್ರಯಾಣಿಕರ ಸೇವಾ ಶುಲ್ಕ ಎಲ್ಲವನ್ನೂ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವಿಧಿಸಲಾಗುತ್ತದೆ. ಏರ್‌ಲೈನ್‌ಗಳು ಕೇವಲ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವರು ಸಂಗ್ರಹಿಸಲು ಅಧಿಕಾರ ಹೊಂದಿರುವ ಟಿಕೆಟ್‌ಗಳ ಬೆಲೆಯೊಂದಿಗೆ ಅವರ ಪರವಾಗಿ ಸಂಗ್ರಹಿಸುತ್ತಿವೆ' ಎಂದು ಹೇಳಿದ್ದಾರೆ.

'ಅಜ್ಜನ ಸ್ಕೂಟರ್‌ ಮೇಲೆ ಸಾಕಷ್ಟು ರೈಡ್‌ ಮಾಡಿದ್ದೇನೆ. ಈಗ ನನ್ನ ಟೈಮ್‌..' ಪೈಲಟ್‌ ಮೊಮ್ಮಗನ ಮಾತು ಕೇಳಿ ಕಣ್ಣೀರಾದ ತಾತ!

 

 

Latest Videos
Follow Us:
Download App:
  • android
  • ios